Advertisement
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಂ. ರಾಮಚಂದ್ರ, ಆಡಳಿತ ಸೇವೆಯ ಅಧಿಕಾರಿಗಳಾಗುವುದು ಸುಲಭದ ಮಾತಲ್ಲ. ಪ್ರತಿ ಐಎಎಸ್, ಐಪಿಎಸ್, ಕೆಎಎಸ್ ಅಧಿಕಾರಿಗಳ ಯಶಸ್ಸಿನ ಹಿಂದೆ ಹಲವು ವರ್ಷಗಳ ಪರಿಶ್ರಮವಿದೆ. ಒಂದು ಬಾರಿ ಆಡಳಿತಾಧಿಕಾರಿಯಾಗಿ ಆಯ್ಕೆಯಾದ ಮೇಲೆ ನಡೆದು ಬಂದ ಹಾದಿಯನ್ನು ಮರೆಯಬಾರದು. ನಮ್ಮ ಕಾರ್ಯ ಸಾಧನೆಯ ಗುರಿ ಏನಾಗಿತ್ತು ಎಂಬುದನ್ನು ಅವಗಣಿಸಬಾರದು ಎಂದು ನುಡಿದರು.
Related Articles
Advertisement
ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ, ಸಾಹಿತಿ ಡಾ| ತಾಳ್ತಜೆ ವಸಂತ ಕುಮಾರ್ ಹಾಗೂ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಯಶಸ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಪ್ರಧಾನ ವ್ಯಾವಹಾರಿಕಾ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾ| ಮೂ| ಪ್ರಕಾಶ್ ಪಿ.ಎಂ. ಮೊದಲಾದವರು ಉಪಸ್ಥಿತರಿದ್ದರು.
ಯಶಸ್ ವಿದ್ಯಾರ್ಥಿನಿಯರಾದ ಅಂಶಿಕಾ ಹಾಗೂ ಮೈಥಿಲಿ ಪ್ರಾರ್ಥಿಸಿದರು. ವಿವೇಕಾನಂದ ಅಧ್ಯಯನ ಕೇಂದ್ರ ಯಶಸ್ ಕಾರ್ಯದರ್ಶಿ ಮುರಳಿಕೃಷ್ಣ ಕೆ. ಎನ್ ಸ್ವಾಗತಿಸಿ, ಸದಸ್ಯೆ ವಿದ್ಯಾಗೌರಿ ವಂದಿಸಿದರು. ಉಪನ್ಯಾಸಕಿ ವಿಜಯ ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು.
ಯುವಜನತೆ ಅವಕಾಶ ಸರಿಯಾಗಿ ಬಳಸಿಕೊಳ್ಳಲಿನಮ್ಮದು ಸ್ವತಂತ್ರ ಭಾರತ. ಎಲ್ಲವೂ ಸಂವಿಧಾನದಲ್ಲಿ ಸೂಚಿಸಿದಂತೆ ನಡೆಯಲ್ಪಡುತ್ತದೆ. ಸಾಮಾಜಿಕ ನ್ಯಾಯದ ಆಧಾರದ ಮೇಲೆ ನೇಮಕಾತಿ ನಡೆಯುತ್ತದೆ. ಅನೇಕ ರೀತಿಯಲ್ಲಿ ಮೀಸಲಾತಿ ನೀಡಲ್ಪಟ್ಟಿದೆ. ಸಿಕ್ಕ ಅವಕಾಶಗಳನ್ನು ಯುವಜನತೆ ಸದುಪಯೋಗ ಪಡಿಸಿಕೊಂಡು ಅಪರಾಧ ಮುಕ್ತ ಸಮಾಜವನ್ನು ಕಟ್ಟುವಲ್ಲಿ ಯಶಸ್ವಿ ಆಗಬೇಕು ಎಂದು ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನಾ|ಮೂ| ಮಂಜುನಾಥ ಅವರು ಹೇಳಿದರು.