ನೆಲಮಂಗಲ: ರಾಜ್ಯ ಹೆದ್ದಾರಿ ಪಕ್ಕದಲ್ಲಿ ಕಬ್ಬಿಣದ ತ್ಯಾಜ್ಯವನ್ನು ಅಕ್ರಮವಾಗಿ ಸಂಗ್ರ ಹಣೆ ಮಾಡಿ ಸಾಗಿಸುತ್ತಿದ್ದ ಘಟಕದ ಮಾಲಿಕರು ಜಾಗ ಖಾಲಿ ಮಾಡಿ, ಪರಾರಿಯಾಗಿ ದ್ದಾರೆ. ಮಾರ್ಚ್ 28ರಂದು ಈ ಸಂಬಂಧ ಉದಯವಾಣಿ ಪತ್ರಿಕೆಯಲ್ಲಿ ವಿಶೇಷ ವರದಿ ಪ್ರಕಟಗೊಂಡಿತ್ತು.
ತಾಲೂಕಿನ ಬಸವನಹಳ್ಳಿ ಗ್ರಾಪಂ ಕಚೇರಿ ಯಿಂದ ಕೇವಲ 500 ಮೀ. ದೂರದಲ್ಲಿ ಪೀಣ್ಯ ಮೂಲದ ವ್ಯಕ್ತಿಗಳು ಸರ್ಕಾರದ ಅನುಮತಿಯಿಲ್ಲದೆ, ಕಾರ್ಮಿಕರಿಗೆ ರಕ್ಷಣಾ ಕವಚಗಳಿಲ್ಲದೆ ಅಕ್ರಮವಾಗಿ ಕಬ್ಬಿಣದ ತ್ಯಾಜ್ಯ ಸಂಗ್ರಹ ಮಾಡಿ, ರವಾನೆ ಮಾಡುತ್ತಿರುವ ಬಗ್ಗೆ ಪತ್ರಿಕೆಯಲ್ಲಿ ‘ಕಬ್ಬಿಣದ ಅಕ್ರಮ ತ್ಯಾಜ್ಯ ಘಟಕ: ಅಧಿಕಾರಿಗಳ ಮೌನ’ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಿಸಲಾಗಿತ್ತು.
ಹೆದ್ದಾರಿ ಪಕ್ಕದಲ್ಲಿ ಅನುಮತಿಯಿಲ್ಲದೆ ಅಕ್ರಮ ತ್ಯಾಜ್ಯ ಸಂಗ್ರಹಣೆ ಘಟಕ ನಿರ್ಮಿಸಿ ಕೊಂಡು, ಮಹಾನಗರಗಳಿಗೆ ರವಾನೆ ಮಾಡುತ್ತಿದ್ದರು. ಸ್ಥಳೀಯ ಅಧಿಕಾರಿಗಳ ಗಮನಕ್ಕೆ ಬಂದಿರಲಿಲ್ಲ. ಗ್ರಾಪಂ ಸಮೀಪವೇ ಕಬ್ಬಿಣದ ತ್ಯಾಜ್ಯವನ್ನು ಅಕ್ರಮವಾಗಿ ಸಂಗ್ರಹ ಮಾಡುತ್ತಿದ್ದರೂ ಬಸವನಹಳ್ಳಿ ಗ್ರಾಪಂ ಅಭಿ ವೃದ್ಧಿ ಅಧಿಕಾರಿಗಳು, ತಮಗೇನು ತಿಳಿದಿಲ್ಲ ಎಂಬಂತೆ ಸುಮ್ಮನಿದ್ದರು. ಈ ಸಂಬಂಧ ತಕ್ಷಣವೇ ಘಟಕದ ಮಾಲೀಕರಿಗೆ ನೋಟಿಸ್ ನೀಡಲಾಗಿತ್ತು. ಬಳಿಕ ಲೋಕಸಭೆ ಚುನಾ ವಣೆ ಎದುರಾದ ಬೆನ್ನಲ್ಲೆ ಗ್ರಾಪಂ ಅಧಿಕಾರಿ ಗಳು ಹಾಗೂ ಮಾಲಿಕರ ತಪ್ಪಿಸಿಕೊಳ್ಳಲು ಪ್ರಯತ್ನ ನಡೆಸಿದ್ದರು. ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಮಾಲಿಕರ ವಿರುದ್ಧ ಕ್ರಮಕೈಗೊಳ್ಳಲು ಮುಂದಾಗಿದ್ದರು.
ವರ್ಷಗಳಿಂದ ಅಧಿಕಾರಿಗಳ ಕಣ್ಗಾವಲಿ ನಲ್ಲಿ ನಡೆಯುತ್ತಿದ್ದ ಅಕ್ರಮ ತ್ಯಾಜ್ಯದ ಬಗ್ಗೆ ತಿಳಿಸಿದರೂ ಅಧಿಕಾರಿಗಳು ಕ್ರಮಕೈಗೊಂಡಿ ರಲಿಲ್ಲ. ಪತ್ರಿಕೆ ವರದಿ ಪ್ರಕಟ ಮಾಡಿದ ನಂತರ ಅಧಿಕಾರಿಗಳು ಸ್ಥಳ ಪರಿಶೀಲಿಸಿ ತ್ಯಾಜ್ಯಲೇವಾರಿ ಅಕ್ರಮ ಘಟಕವನ್ನು ಖಾಲಿ ಮಾಡಿಸಲು ಉದಯವಾಣಿ ಪತ್ರಿಕೆಯ ವರದಿ ಕಾರಣವಾಗಿದೆ ಎಂದು ಸಾರ್ವ ಜನಿಕರು ಹಾಗೂ ಗ್ರಾಮಸ್ಥರು ಅಭಿನಂದನೆ ತಿಳಿಸಿದ್ದಾರೆ.