Advertisement
ನಗರದ ಡಾ| ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸೆಕ್ಟರ್ ಅಧಿಕಾರಿ ಮತ್ತು ಸೆಕ್ಟರ್ ಪೊಲೀಸ್ ಅಧಿಕಾರಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಭೀತಿತಡೆ ನಕಾಶೆ ತಯಾರಿ ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಲು ಅನುಕೂಲವಾಗುವ ಹಾಗೆ ಖರ್ಚು ವೆಚ್ಚ, ವಿಡಿಯೋ ವೀವಿಂಗ್, ವಿಡಿಯೋ ಸರ್ವಲನ್ಸ್, ಫ್ಲಾಯಿಂಗ್ ಸ್ಕಾಡ್,ಎಂ.ಸಿ.ಎ., ಎಂ.ಸಿ.ಎಂ.ಸಿ., ತಂಡಗಳನ್ನು ರಚಿಸಿದ್ದು, ಈ ತಂಡದಲ್ಲಿರುವ ಎಲ್ಲ ಅಧಿಕಾರಿಗಳು ತಮ್ಮ ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ತಿಳಿದುಕೊಂಡು ಕೆಲಸ ಮಾಡಬೇಕು ಎಂದರು.
ನಮೂನೆ ನೀಡಬೇಕು. ಸೆಕ್ಟರ್ ಅಧಿಕಾರಿಗಳು ನಿಖರವಾದ ಹಾಗೂ ಜವಾಬ್ದಾರಿಯಿಂದ ಮಾಹಿತಿ ಸಂಗ್ರಹಿಸಿ ವರದಿ ಮಾಡಲು ತಿಳಿಸಿದರು. ಎಸ್‌ಪಿ ಎನ್. ಶಶಿಕುಮಾರ ಮಾತನಾಡಿ, ಈ ಹಿಂದೆ ನಡೆದ ಗ್ರಾಪಂ, ತಾಪಂ, ಜಿಪಂ, ನಗರಸಭೆ, ಪುರಸಭೆ, ಪಾಲಿಕೆ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ನಡೆದಿರುವ ಅಹಿತಕರ ಘಟನೆಗಳು, ಜಾತಿ ಸಂಘರ್ಷ, ಮತದಾನಕ್ಕೆ ಆಮಿಷ ಒಡ್ಡುವುದು ಹಾಗೂ ಮತದಾನ ಮಾಡದಂತೆ ಭೀತಿ ಸೃಷ್ಟಿಸುವ ಪ್ರದೇಶಗಳನ್ನು ಗುರುತಿಸಿ ಆ ಪ್ರದೇಶಗಳ ಭೀತಿ ತಡೆ ನಕಾಶೆ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು ಎಂದರು.
Related Articles
Advertisement
ಜಿಲ್ಲಾ ಮಾಸ್ಟರ್ ಟ್ರೇನರ್ ಡಾ| ಶಶಿಶೇಖರ ರೆಡ್ಡಿ ಮಾತನಾಡಿ, ಚುನಾವಣೆಗಳಲ್ಲಿ ಮುಕ್ತ, ನ್ಯಾಯಸಮ್ಮತ ಮತದಾನಕ್ಕೆ ಅವಕಾಶ ಮಾಡಿಕೊಡದೆ ಭೀತಿ-ತಡೆ ಹುಟ್ಟಿಸುವ ಪ್ರದೇಶಗಳನ್ನು ಗುರುತಿಸುವುದು ಸೆಕ್ಟರ್ ಅಧಿಕಾರಿ ಹಾಗೂ ಸೆಕ್ಟರ್ ಪೊಲೀಸ್ ಅಧಿಕಾರಿಗಳ ಕರ್ತವ್ಯವಾಗಿದೆ. ಕಳೆದ ಚುನಾವಣೆಯಲ್ಲಿ ಅನುಮಾನಾಸ್ಪದವಾಗಿ ಮತದಾನ ನಡೆದ ಪ್ರದೇಶಗಳು, ಮತದಾನ ಮಾಡುವಾಗ ಭೀತಿಗೊಳಗಾದ ಮತದಾರ ಅಥವಾ ಸಮುದಾಯದ ಗುಂಪುಗಳನ್ನು ಗುರುತಿಸುವುದು, ಭೀತಿ ಹುಟ್ಟಿಸುವ ಜನರನ್ನು ಗುರುತಿಸಿ ಮತದಾರರಿಗೆ ನೀಡುವ ಭೀತಿಯನ್ನು ತಡೆಯಲು ಸೆಕ್ಟರ್ ಅಧಿಕಾರಿಗಳು ಸೆಕ್ಟರ್ ಪೊಲೀಸ್‌ರಿಂದ, ಆಯಾ ಮತಗಟ್ಟೆಗಳಗಸ್ತು ಪೊಲೀಸ್‌ರಿಂದ, ಮತದಾರರಿಂದ, ಗುಪ್ತಚರರಿಂದ ನಿಖರ ಮಾಹಿತಿ ಸಂಗ್ರಹಿಸಿ ಅದನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ಚುನಾವಣಾಧಿಕಾರಿಗಳು ಇಡೀ ಮತಕ್ಷೇತ್ರದ ಮಾಹಿತಿಯೊಂದಿಗೆ ನಕಾಶೆ ಸಿದ್ಧಪಡಿಸಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸುವುದು, ಜಿಲ್ಲಾ ಚುನಾವಣಾಧಿ ಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವರದಿ ಪರಿಶೀಲಿಸಿ ಭೀತಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವರು ಎಂದರು.
ಸೆಕ್ಟರ್ ಅಧಿಕಾರಿಗಳು ಮತಗಟ್ಟೆಗಳ ವ್ಯಾಪ್ತಿಯಲ್ಲಿರುವ ಸಮಾಜ ದ್ರೋಹಿಗಳು, ರೌಡಿ ಶಿಟರ್‌ಗಳು, ವಿಛಿದ್ರಕಾರಿ ಶಕ್ತಿಗಳು ಹಾಗೂ ದುರ್ನಡತೆವುಳ್ಳವರ ಮೇಲೆ ವಿಶೇಷ ನಿಗಾ ವಹಿಸಬೇಕು. ಚುನಾವಣೆ ಸಮಯದಲ್ಲಿ ಮತದಾನಕ್ಕೆ ಅಡ್ಡಿಪಡಿಸುವುದು ಭಾರತೀಯ ದಂಡ ಸಂಹಿತೆ ಪ್ರಕಾರ ಗಂಭೀರ ಅಪರಾಧವಾಗಿದ್ದು, ಇದನ್ನು ದುರ್ನಡೆಗೆ ಎಂದು ಪರಿಗಣಿಸಿ ಸೂಕ್ತ ದಂಡ ಮತ್ತು ಶಿಕ್ಷೆ ವಿ ಧಿಸಲಾಗುವುದು ಎಂದು ಹೇಳಿದರು.
ಸೇಡಂ ಸಹಾಯಕ ಆಯುಕ್ತೆ ಬಿ. ಸುಶೀಲಾ, ಪಾಲಿಕೆ ಆಯುಕ್ತ ರಘುನಂದನಮೂರ್ತಿ, ಹೆಚ್ಚುವರಿ ಎಸ್.ಪಿ.ಜಯಪ್ರಕಾಶ, ಚುನಾವಣಾ ತಹಶೀಲ್ದಾರ ಸಂಜುಕುಮಾರ ಮತ್ತಿತರರು ಪಾಲ್ಗೊಂಡಿದ್ದರು.