ಗುರುಮಿಠಕಲ್ ಯುವ ಘಟಕದ ಪದಾಧಿಕಾರಿಗಳ ನೇಮಕ ಹಾಗೂ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಜಿಲ್ಲಾಧ್ಯಕ್ಷ ರವಿ ಕೆ. ಮುದ್ನಾಳ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಎಸ್. ಕುಂಬಾರ ಸಂಘಟನೆಯನ್ನು ಸಮರ್ಥವಾಗಿ ಮುನ್ನಡೆಸುವ ಹಾಗೂ ಸಂಘಟನೆಯನ್ನು ಶಿಸ್ತುಬದ್ಧಾಗಿ ಪಾಲಿಸುವ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿಯಾಗಿ ಶ್ರೀಶೈಲ ನಾಯಕ್, ಯುವ ಘಟಕದ ಗುರುಮಿಠಕಲ್ ತಾಲೂಕು ಅಧ್ಯಕ್ಷರಾಗಿ ನಾಗೇಶ ರಾಠೊಡ ತೋಟೋರ್, ಪ್ರಧಾನ ಕಾರ್ಯ ದರ್ಶಿಯಾಗಿ ರವಿ ಚವ್ಹಾಣ್ ಆಶಾಪುರ, ಕಾರ್ಯದರ್ಶಿಯಾಗಿ ಲಕ್ಷ್ಮಣ್ ಚವ್ಹಾಣ್ ಬೊರಂಬಂಡಾ, ಸಂಚಾಲಕರಾಗಿ ಗೋಪಾಲ್ ಚವ್ಹಾಣ್ ನಜರಾಪುರ ಅವರನ್ನು ನೇಮಕ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಣಮಂತ ರಾಠೊಡ ಕುರಕುಂಬಳ, ನಗರ ಘಟಕದ ಅಧ್ಯಕ್ಷ ಮಶಪ್ಪ ನಾಯಕ, ನೆಹರು ಬಿ. ಚವ್ಹಾಣ್ ತಾಲೂಕು ಉಪಾಧ್ಯಕ್ಷರು ಗುರುಮಿಠಕಲ್, ಸುಭಾಷ್ ಪವಾರ್ ಆಶನಾಳ, ನೆಹರು ಎಸ್. ಚವ್ಹಾಣ್ ಆಶನಾಳ, ಮಲ್ಲೇಶ ಹುಲಕಲ್ ಹಾಗೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. ಶ್ರೀಕಾಂತ್ ಎಸ್. ಕುಂಬಾರ್ ವಂದಿಸಿದರು. ಕಾರ್ಯಕ್ರಮಕ್ಕೆ ಬಂದಂತಹ ಎಲ್ಲಾ ಕಾರ್ಯಕರ್ತರಿಗೆ ಒಂದೊಂದು ಸಸಿಯನ್ನು ವಿತರಿಸಲಾಯಿತು ಎಂದು ಜಿಲ್ಲಾ ನಗರ ಘಟಕದ ಅಧ್ಯಕ್ಷ ಮಶಪ್ಪ ನಾಯಕ ತಿಳಿಸಿದ್ದಾರೆ
Advertisement