Advertisement

ಸಾಮಾನ್ಯ ಸಭೆಗೆ ಅಧಿಕಾರಿಗಳು ಗೈರು: ಸದಸ್ಯರ ಆಕ್ರೋಶ

09:13 PM Aug 13, 2019 | Team Udayavani |

ಗುಡಿಬಂಡೆ: ತಾಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯುವ ಸಾಮಾನ್ಯ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಗೈರು ಹಾಜರಾಗುತ್ತಾರೆ. ಮತ್ತೇಕೆ ಸಭೆ ಕರೆಯುವುದು ಎಂದು ತಾಪಂ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಮಂಗಳವಾರ ಪಟ್ಟಣದ ತಾಪಂ ಸಭಾಂಗಣದಲ್ಲಿ ವರಲಕ್ಷ್ಮೀ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸುವ ಸಭೆಯಲ್ಲಿ ಸಭೆಗೆ ಬಹುಪಾಲು ಅಧಿಕಾರಿಗಳು ಗೈರು ಹಾಜರಾಗಿದ್ದು, ಕೆಲವು ಇಲಾಖೆಗಳಿಂದ ತಾಲೂಕು ಮಟ್ಟದ ಅಧಿಕಾರಿಗಳು ಇಲಾಖೆಯ ಕೆಳ ಮಟ್ಟದ ಅಧಿಕಾರಿಗಳನ್ನು ಸಭೆಗೆ ಕಳುಹಿಸುತ್ತಾರೆ.

ಅವರ ಬಳಿ ಏನನ್ನು ಕೇಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಸಭೆಗೆ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ಎಲ್ಲಾ ಸದಸ್ಯರು ತಾಪಂ ಇಒ ಶ್ರೀನಾಥ್‌ಗೌಡ ಹಾಗೂ ಅಧ್ಯಕ್ಷರಿಗೆ ಸೂಚಿಸಿದರು.

ಸಭೆಯಲ್ಲಿ ಹಾಜರಿದ್ದ ಇಲಾಖಾಧಿಕಾರಿಗಳಿಂದ ಸಮಾಜ ಕಲ್ಯಾಣ, ರೇಷ್ಮೆ, ತೋಟಗಾರಿಕೆ, ಪಶು ಪಾಲನಾ, ಸಾರ್ವಜನಿಕರ ಶಿಕ್ಷಣ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ತಾಪ ಇಒ, ತೋಟಗಾರಿಕೆ ಇಲಾಖೆಯ ವ್ಯಾಪ್ತಿಗೆ ಬರುವ ಬೆಳೆಗಳು ರೈತರು ಬೆಳೆದಾಗ ಅದನ್ನು ನರೇಗಾ ಯೋಜನೆಯಲ್ಲಿ ಸೇರಿಸಿಕೊಳ್ಳುವುದು ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತು ರೇಷ್ಮೆ ಇಲಾಖೆಗಳ ಎಸ್‌ಇಪಿ, ಟಿಎಸ್‌ಪಿ ಯೋಜನೆಯಲ್ಲಿ 77 ಪರಿಶಿಷ್ಟ ಫ‌ಲಾನುಭವಿಗಳಿಗೆ ಔಷಧಿ ಸಿಂಪಡಣೆ ಯಂತ್ರಗಳ ವಿತರಣೆಗೆ ಸಭೆ ಅನುಮೋದನೆ ನೀಡಲಾಗಿದೆ ಎಂದು ತಾಪಂ ಇಒ ತಿಳಿಸಿದರು.

2 ಕೋಟಿಗೆ ಕ್ರಿಯಾ ಯೋಜನೆಗೆ ಸಿದ್ಧತೆ: ತಾಲೂಕಿನ 11ಕ್ಷೇತ್ರಗಳಿಗೆ ಪ್ರತಿ ಕ್ಷೇತ್ರಕ್ಕೆ 18 ಲಕ್ಷದಂತೆ 2.98 ಕೋಟಿ ಮತ್ತು ಕಚೇರಿಯ ಪೀಠೊಪಕರಣಗಳಿಗೆ 2 ಲಕ್ಷ ಸೇರಿ ಒಟ್ಟು 2 ಕೋಟಿ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಳ್ಳಲು ಎಲ್ಲಾ ಸದಸ್ಯರ ಒಪ್ಪಿಗೆಯಂತೆ ತೀರ್ಮಾನಿಸಲಾಯಿತು.

Advertisement

ಈಗಾಗಲೇ 50 ಲಕ್ಷ ಅನುದಾನವಿದ್ದು, ಇನ್ನುಳಿದ 1.50 ಕೋಟಿ ಅನುದಾನ ಸರ್ಕಾರದಿಂದ ಬಿಡುಗಡೆ ಆಗಬೇಕಿದೆ. ಎಸ್‌ಸಿ/ಎಸ್‌ಟಿ ಜನಾಂಗದ ಅಭಿವೃದ್ಧಿಗಾಗಿ 50 ಲಕ್ಷ, ರಸ್ತೆ ಕಾಮಗಾರಿಗಳಿಗೆ 40 ಲಕ್ಷ, ಅಂಗವಿಕಲರ ಮೀಸಲಿಗೆ 10 ಲಕ್ಷ, ಗ್ರೀನ್‌ ಪೌಂಡ್‌ 10 ಲಕ್ಷ ಹಾಗೂ ಸಾಮಾನ್ಯ ಕಾಮಗಾರಿಗಳಿಗೆ 90 ಲಕ್ಷದಂತೆ ಒಟ್ಟು 2 ಕೋಟಿ ಅನುದಾನಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಬೇಕೆಂದು ತಾಪಂ ಇಒ ಅಧಿಕಾರಿಗಳಿಗೆ ತಿಳಿಸಿದರು.

ತಾಪಂ ಕಟ್ಟಡಕ್ಕೆ ಅನುಮೋದನೆ: ಸುಮಾರು 2 ವರ್ಷಗಳ ಹಿಂದೆ ಹಳೆ ನ್ಯಾಯಾಲಯದ ಆವರಣದಲ್ಲಿ ತಾಪಂ ಕಾರ್ಯಾಲಯ ನಿರ್ಮಿಸಲು ಎಲ್ಲಾ ಸದಸ್ಯರು ತೀರ್ಮಾನ ಮಾಡಿ ಅನುಮೋದಲನೆ ಪಡೆದು ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ ಅಧಿಕಾರಿಗಳು ಬೇಜಾವಬ್ದಾರಿ ತೋರುತ್ತಿದ್ದಾರೆಂದು ಸದಸ್ಯರು ದೂರಿದರು.

ಸಭೆಯಲ್ಲಿ ತಾಪಂ ಉಪಾಧ್ಯಕ್ಷ ಬೈರಾರೆಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ, ಸದಸ್ಯರಾದ ಪೋಲಂಪಲ್ಲಿ ಮಂಜುನಾಥ್‌, ಎಲ್ಲೋಡು ಜಯರಾಮರೆಡ್ಡಿ, ಹಂಪಸಂದ್ರ ಆದಿನಾರಾಯಣಪ್ಪ, ಚೆಂಡೂರು ರಾಮಾಂಜನಪ್ಪ, ಉಲ್ಲೋಡು ವೆಂಕಟಲಕ್ಷ್ಮಮ್ಮ ಸೇರಿ 11 ಸದಸ್ಯರು ಹಾಜರಿದ್ದರು. ಸಮಾಜ ಕಲ್ಯಾಣಾಧಿಕಾರಿ ಶೇಷಾದ್ರಿ, ಪಶುಪಾಲನ ಇಲಾಖೆಯ ಎಡಿಎ ರಾಮಕೃಷ್ಣಾರೆಡ್ಡಿ, ಜಿಪಂ ತಾಂತ್ರಿಕ ವಿಭಾಗದ ಎಇಇ ಮಧು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next