Advertisement

ಮಾಜಿ ಸಿಎಂಗಳ ಆಫ‌ರ್‌ ವಾರ್‌

01:20 AM Feb 08, 2019 | |

ಸದಸ್ಯರ ಮಧ್ಯೆ ಮಾತಿನ ಚಕಮಕಿ ಮುಂದುವರಿದಿರುವಂತೆಯೇ, ಸದನದ ಹೊರಗಡೆ ಕೂಡ ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಈ ಮಧ್ಯೆ, ತಮ್ಮ ಶಾಸಕರಿಗೆ ಬಿಜೆಪಿ 30 ಕೋಟಿ ರೂ.ಆಫ‌ರ್‌ ನೀಡುವ ಮೂಲಕ ಸರ್ಕಾರದ ಪತನಕ್ಕೆ ಮುಂದಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರೆ, ಈ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಿ ಎಂದು ಯಡಿಯೂರಪ್ಪ ಪ್ರತಿ ಸವಾಲು ಹಾಕಿದ್ದಾರೆ.

Advertisement

ಬಿಜೆಪಿಯಿಂದ 30 ಕೋಟಿ ಆಫ‌ರ್‌

ಬೆಂಗಳೂರು: ಬಿಜೆಪಿಯವರು ಕಾಂಗ್ರೆಸ್‌ ಶಾಸಕರಿಗೆ 30 ಕೋಟಿ ರೂಪಾಯಿ ಹಣ ನೀಡುವ ಬೇಡಿಕೆ ಇಟ್ಟಿರುವ ದಾಖಲೆ ಇದ್ದು, ಸೂಕ್ತ ಸಂದರ್ಭದಲ್ಲಿ ಅದನ್ನು ಬಿಡುಗಡೆ ಮಾಡುವುದಾಗಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನ ಕೆಲವು ಶಾಸಕರಿಗೆ ಈಗಾಗಲೇ ದುಡ್ಡು ಕೊಟ್ಟಿದ್ದಾರೆ. ಕೆಲವರಿಗೆ ದುಡ್ಡು ಕೊಡುವ ಭರವಸೆ ನೀಡಿದ್ದಾರೆ. ಎಲ್ಲದಕ್ಕೂ ನನ್ನ ಬಳಿ ದಾಖಲೆ ಇದ್ದು, ಸಮಯ ಬಂದಾದ ಬಿಡುಗಡೆ ಮಾಡುತ್ತೇನೆ. ಬಿಜೆಪಿಯವರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ. ವಿಧಾನಸಭೆಯ ಕಲಾಪ ನಡೆಯುವುದು ಅವರಿಗೆ ಬೇಕಿಲ್ಲ. ಸರ್ಕಾರ ಬೀಳಿಸಲು ಹಲವು ಪ್ರಯತ್ನ ಮಾಡಿದ್ದರು. ಅದು ಯಶಸ್ವಿಯಾಗದಿದ್ದಾಗ ಈಗ ಇಂಗು ತಿಂದ ಮಂಗನಂತಾಗಿದ್ದಾರೆ. ಅದಕ್ಕೆ ಬಜೆಟ್ ಮಂಡನೆಗೆ ಅಡ್ಡಿ ಪಡಿಸುತ್ತಿದ್ದಾರೆ. ಅವರ ಯಾವ ಪ್ರಯತ್ನವೂ ಯಶಸ್ವಿಯಾಗುವುದಿಲ್ಲ. ಕಾಂಗ್ರೆಸ್‌ನ ಎಲ್ಲ ಶಾಸಕರು ಸದನಕ್ಕೆ ಹಾಜರಾಗುತ್ತಾರೆ ಎನ್ನುವ ವಿಶ್ವಾಸ ಇದೆ ಎಂದರು.

ನಿಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಿ

Advertisement

ರಾಯಚೂರು: ಮಾಜಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಬೇಜವಾಬ್ದಾರಿಯಿಂದ ಹೇಳಿಕೆ ನೀಡಬಾರದು. ಬಿಜೆಪಿಯಿಂದ 40-50 ಕೋಟಿ ರೂ.ಆಫರ್‌ ನೀಡಿದ್ದಾರೆ ಎನ್ನುವುದಕ್ಕೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸವಾಲು ಹಾಕಿದ್ದಾರೆ.

ದೇವದುರ್ಗ ತಾಲೂಕಿನ ಅರಕೇರಾದಲ್ಲಿ ಗುರುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಬೇಜವಾಬ್ದಾರಿಯಿಂದ ಹೇಳಿಕೆ ನೀಡಬಾರದು. ಬಿಜೆಪಿಯಿಂದ 40-50 ಕೋಟಿ ರೂ.ಆಫರ್‌ ನೀಡಿದ್ದಾರೆ ಎನ್ನುವುದಕ್ಕೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಅದು ಬಿಟ್ಟು ಶಾಸಕರಿಗೆ ಅವಮಾನ ಮಾಡುವ ರೀತಿಯಲ್ಲಿ ಮಾತನಾಡ ಬಾರದು. ಹಾಗಾದರೆ, ಅವರ ಶಾಸಕರು ಹರಾಜಿಗಿದ್ದಾರೆಯೇ ಎಂದು ಪ್ರಶ್ನಿಸಿದರು. ಅವರಿಗೆ ಕೋಟಿಗಳಿಗೆ ಬೆಲೆ ಇಲ್ಲದಿರಬ ಹುದು. ಆದರೆ, ನಮಗೆ ಕೋಟಿ ನೋಡಿ ಗೊತ್ತಿಲ್ಲ ಎಂದರು. ಕಾಂಗ್ರೆಸ್‌ ಶಾಸಕರು ಬೆಂಗಳೂರು ಬಿಟ್ಟು ಓಡಾಡುತ್ತಿರುವುದಕ್ಕೂ, ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದರು.

ಶಿವರಾಯ ದೇವಸ್ಥಾನದಲ್ಲಿ ವಿಶೇಷ ಪೂಜೆ

ಯಡಿಯೂರಪ್ಪ ಜಿಲ್ಲೆಯ ಅರಕೇರಾಗೆ ಭೇಟಿ ನೀಡಿರುವುದು ಕುತೂಹಲ ಮೂಡಿಸಿದೆ. ಗುರುವಾರ ಸಂಜೆ ಶಾಸಕ ಕೆ.ಶಿವನಗೌಡ ನಾಯಕರ ಮನೆಯಲ್ಲಿ ಕೆಲ ಕಾಲ ಚರ್ಚೆ ನಡೆಸಿದರು. ಅಲ್ಲಿಂದ ನೇರವಾಗಿ ಮುಂಡರಗಿ ಶಿವರಾಯ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬೆಟ್ಟದ ಕೆಳಗಿರುವ ಅರ್ಚಕ ಶಿವಣ್ಣ ತಾತನವರ ಮನೆಯಲ್ಲಿ ಕೆಲ ಕಾಲ ಮಾತುಕತೆ ನಡೆಸಿದರು. ರಾತ್ರಿ 8:30ಕ್ಕೆ ಅಲ್ಲಿಂದ 1.96 ಗಣ ಇಷ್ಟಲಿಂಗ ಪೂಜೆ ನಡೆಯುವ ದೇವದುರ್ಗ ತಾಲೂಕಿನ ವೀರಘೋಟ ಕ್ಷೇತ್ರಕ್ಕೆ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next