Advertisement

Alaska Airlines: ಫ್ಲೈಟ್ ಇಂಜಿನ್ ಬಂದ್ ಮಾಡಲು ಯತ್ನಿಸಿದ ಆಫ್ ಡ್ಯೂಟಿ ಪೈಲಟ್; ಬಂಧನ

09:26 AM Oct 24, 2023 | Team Udayavani |

ವಾಷಿಂಗ್ಟನ್: ಸ್ಯಾನ್ ಫ್ರಾನ್ಸಿಸ್ಕೋಗೆ ಹೋಗುವ ವಿಮಾನದ ಕಾಕ್‌ ಪಿಟ್‌ ನಲ್ಲಿ ಪ್ರಯಾಣಿಕನಾಗಿ ಪ್ರಯಾಣಿಸುತ್ತಿದ್ದ ಅಲಾಸ್ಕಾ ಏರ್‌ಲೈನ್ಸ್‌ನ ಆಫ್ ಡ್ಯೂಟಿ ಪೈಲಟ್, ವಿಮಾನದ ಇಂಜಿನ್‌ಗಳನ್ನು ಸ್ಥಗಿತಗೊಳಿಸಲು ಪ್ರಯತ್ನಿಸಿದ ಘಟನೆ ನಡೆದಿದೆ. ಪರಿಣಾಮ ಆತನನ್ನು ಕೊಲೆ ಯತ್ನದ ಆರೋಪದಲ್ಲಿ ಬಂಧಿಸಲಾಗಿದೆ.

Advertisement

ಫ್ಲೈಟ್ ಸಿಬ್ಬಂದಿಯು ಪೈಲಟ್ ಜೋಸೆಫ್ ಡೇವಿಡ್ ಎಮರ್ಸನ್ ಅವರನ್ನು ವಶಕ್ಕೆ ಪಡೆದು ವಿಮಾನವನ್ನು ಪೋರ್ಟ್‌ಲ್ಯಾಂಡ್‌ ಗೆ ತಿರುಗಿಸಿದರು, ಅಲ್ಲಿ ಅವರನ್ನು ಬಂಧಿಸಲಾಯಿತು.

“ವಿಶ್ವಾಸಾರ್ಹ ಭದ್ರತೆ” ಬೆದರಿಕೆಯಿಂದಾಗಿ ವಾಷಿಂಗ್ಟನ್‌ ನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳುತ್ತಿದ್ದ ವಿಮಾನವನ್ನು ಪೋರ್ಟ್‌ ಲ್ಯಾಂಡ್‌ ಗೆ ತಿರುಗಿಸಲಾಗಿದೆ ಎಂದು ಏರ್‌ಲೈನ್ಸ್ ಘೋಷಿಸಿತು.

ಆಫ್-ಡ್ಯೂಟಿ ಪೈಲಟ್‌ ಗಳಿಗೆ ಸಾಮಾನ್ಯವಾಗಿ ಕಾಕ್‌ ಪಿಟ್ ಜಂಪ್ ಸೀಟಿನಲ್ಲಿ ಪ್ರಯಾಣ ಮಾಡಲು ಅನುಮತಿಸಲಾಗುತ್ತದೆ, ಅವರು ಕ್ಯಾಪ್ಟನ್‌ ನ ಅನುಮತಿಯನ್ನು ಹೊಂದಿದ್ದರೆ ಮಾತ್ರ.

Advertisement

Udayavani is now on Telegram. Click here to join our channel and stay updated with the latest news.

Next