Advertisement
ಉಗ್ರರ ತರಬೇತಿ ಶಿಬಿರಗಳು ಮತ್ತು ಲಾಂಚ್ ಪ್ಯಾಡ್‌ಗಳಲ್ಲಿ ಕನಿಷ್ಠಪಕ್ಷ ತಲಾ 50 ಉಗ್ರರಿದ್ದಾರೆ. ಫೆಬ್ರವರಿಯಲ್ಲಿ ಪುಲ್ವಾಮಾ ದಾಳಿ ಆದ ಬಳಿಕ ಈ ಶಿಬಿರಗಳನ್ನು ದಿಢೀರನೆ ಮುಚ್ಚಲಾಗಿತ್ತು. ಈಗ ಮತ್ತೆ ಇವನ್ನು ಸಕ್ರಿಯ ಗೊಳಿಸಲಾಗಿದೆ ಎಂಬ ಮಾಹಿತಿ ದೊರೆತಿದೆ. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯವೆಸಗಲೆಂದು ಉಗ್ರರನ್ನು ನುಸುಳಿಸುವ ಉದ್ದೇಶದಿಂದ ಇವುಗಳಿಗೆ ಮತ್ತೆ ಜೀವ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಂಜಾಬ್‌ನ ಹುಸೈನ್‌ವಾಲಾ ಪ್ರದೇಶದಲ್ಲಿ ಪಾಕಿಸ್ಥಾನದ ಕಡೆಯಿಂದ ಎರಡು ಡ್ರೋನ್‌ಗಳು ಗಡಿ ದಾಟಿ ಬಂದಿದ್ದು ಮಂಗಳವಾರ ಕಂಡುಬಂದಿದೆ. ರಾಜ್ಯದ ಗಡಿ ಭಾಗಗಳಲ್ಲಿ ಶಸ್ತ್ರಾಸ್ತ್ರಗಳನ್ನು ಹೊತ್ತು ತರುತ್ತಿದ್ದ ಡ್ರೋನ್‌ಗಳನ್ನು ಬಿಎಸ್‌ಎಫ್ ಪತ್ತೆಹಚ್ಚಿದ ಬೆನ್ನಲ್ಲೇ ಈ ಘಟನೆ ನಡೆದಿದೆ. ಮಂಗಳವಾರ ಗಡಿ ದಾಟಿ ಬಂದಿದೆ ಎನ್ನಲಾದ ಡ್ರೋನ್‌ಗಾಗಿ ಶೋಧ ಕಾರ್ಯ ಬಿರುಸುಗೊಳಿಸಲಾಗಿದೆ.