Advertisement

ಲಂಕಾ ಸ್ಫೋಟಕ್ಕೆ ಕೊಯಮತ್ತೂರು ನಂಟು!

10:06 AM Apr 26, 2019 | mahesh |

ನವದೆಹಲಿ/ಕೊಲೊಂಬೋ: ಕೊಲೊಂಬೋ ಸರಣಿ ಬಾಂಬ್‌ ಸ್ಫೋಟ ಪ್ರಕರಣ, ಕಳೆದ ವರ್ಷ ಭಾರತದಲ್ಲಿ ಬೆಳಕಿಗೆ ಬಂದಿದ್ದ ‘ಕೊಯಮತ್ತೂರು ಐಸಿಸ್‌ ಬೆಂಬಲಿಗರ ಪ್ರಕರಣ’ದ ಜತೆಗೆ ತಳುಕು ಹಾಕಿಕೊಂಡಿದೆ.

Advertisement

ಶ್ರೀಲಂಕಾದ ಚರ್ಚ್‌ಗಳ ಮೇಲೆ ದಾಳಿ ನಡೆಸುವ ಉಗ್ರ ಸಂಚಿನ ಬಗ್ಗೆ 3-4 ತಿಂಗಳ ಹಿಂದೆಯೇ ಭಾರತಕ್ಕೆ ತಿಳಿದುಬಂದಿತ್ತು. ಕೂಡಲೇ ರಾಜತಾಂತ್ರಿಕ ಮಾರ್ಗದ ಮೂಲಕ ಎಚ್ಚರಿಕೆ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಉಗ್ರರು ಕೊಲೊಂಬೋದಲ್ಲಿರುವ ಭಾರತದ ಹೈಕಮಿಷನ್‌ ಕಚೇರಿ ಮೇಲೆ ಮತ್ತು ದಕ್ಷಿಣ ಭಾರತದ ಪ್ರಮುಖ ನಾಯಕರನ್ನು ಗುರಿಯಾಗಿಸಿ ದಾಳಿ ನಡೆಸುವ ಯೋಜನೆ ಹೊಂದಿದ್ದರು.

ಏನಿದು ಪ್ರಕರಣ?: ಕೊಯಮತ್ತೂರಿನ ಮೊಹಮ್ಮದ್‌ ಆಶಿಕ್‌, ಇಸ್ಮಾಯಿಲ್ ಎಸ್‌, ಶಂಶುದ್ದೀನ್‌, ಮೊಹಮ್ಮದ್‌ ಸಲಾಲುದ್ದೀನ್‌, ಜಾಫ‌ರ್‌ ಶಾದಿಕ್‌ ಅಲಿ ಮತ್ತು ಶಾಹುಲ್ ಹಮೀದ್‌ ಎಂಬವರು ತಂಡವೊಂದನ್ನು ರಚಿಸಿಕೊಂಡಿರುವ ಮಾಹಿತಿ ಮೇರೆಗೆ 2018ರ ಡಿಸೆಂಬರ್‌ನಲ್ಲಿ ಅವರ ಮನೆಗಳ ಮೇಲೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಆಗಿನ ವಿಚಾರಣೆ ವೇಳೆ ಲಂಕಾದ ನ್ಯಾಷನಲ್ ತೌಹೀದ್‌ ಜಮಾತ್‌ (ಎನ್‌ಟಿಜೆ) ಸಂಘಟನೆಯ ಸಂಸ್ಥಾಪಕ ಝಹ್ರನ್‌ ಹಾಶೀಂ ಜತೆ ಇವರು ನೇರ ಸಂಪರ್ಕದಲ್ಲಿದ್ದಿದ್ದು ತಿಳಿದುಬಂದಿತ್ತು. ಆತ, ದಕ್ಷಿಣ ಭಾರತದಲ್ಲಿ ಇಸ್ಲಾಂ ರಾಜ್ಯಭಾರ ಸ್ಥಾಪಿಸುವಂತೆ ಈ ಯುವಕರನ್ನು ಪ್ರೇರೇಪಿಸಿದ್ದ, ಇದಕ್ಕೆ ಪೂರಕವಾಗಿ, ದಕ್ಷಿಣ ಭಾರತದ ಅಲ್ಲಲ್ಲಿ ಬಾಂಬ್‌ ಸ್ಫೋಟ ನಡೆಸುವಂತೆ ಹಾಗೂ ಹಿಂದೂ ನಾಯಕರ ಹತ್ಯೆ ಮಾಡುವಂತೆ ಸೂಚಿಸಿದ್ದ ಎಂಬುದು ತಿಳಿದುಬಂದಿತ್ತು.

ಇದೇ ಸಂದರ್ಭದಲ್ಲೇ, ಶ್ರೀಲಂಕಾದಲ್ಲೂ ಚರ್ಚುಗಳ ಮೇಲೆ ದಾಳಿ ನಡೆಸುವ ವಿಚಾರ ಬಹಿರಂಗಗೊಂಡಿತ್ತು. ತಕ್ಷಣವೇ ಈ ಮಾಹಿತಿಯನ್ನು ಎನ್‌ಐಎ, ಭಾರತೀಯ ಗುಪ್ತಚರ ಇಲಾಖೆಗೆ ಮುಟ್ಟಿಸಿತ್ತು. ಭಾರತೀಯ ಗುಪ್ತಚರ ಇಲಾಖೆ ಅದನ್ನು ಶ್ರೀಲಂಕಾದ ಗುಪ್ತಚರ ಇಲಾಖೆಗೆ ತಲುಪಿಸಿತ್ತು.

ಸ್ಫೋಟಕ ಪತ್ತೆ: ಈ ನಡುವೆ, ದಕ್ಷಿಣ ಕೊಲಂಬೋದ ವೆಲ್ಲವಟ್ಟಾದಲ್ಲಿರುವ ಸವೋಯ್‌ ಚಿತ್ರಮಂದಿರದ ಹೊರಗಡೆ ನಿಲ್ಲಿಸಲಾಗಿದ್ದ ಬೈಕೊಂದರಲ್ಲಿ ಬುಧವಾರ ನಿಯಂತ್ರಿತ ಸ್ಫೋಟಕವೊಂದು ಪತ್ತೆಯಾಗಿದ್ದು ಅದನ್ನು ನಿಷ್ಕ್ರಿಯಗೊಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next