Advertisement

6 ವರ್ಷಗಳಲ್ಲಿ 24ಕ್ಕೂ ಹೆಚ್ಚು ಉಗ್ರರು ಭಾರತಕ್ಕೆ ಗಡಿಪಾರು

06:00 AM Aug 25, 2018 | |

ಹೊಸದಿಲ್ಲಿ: ಸಂಯುಕ್ತ ಅರಬ್‌ ಗಣರಾಜ್ಯ (ಯುಎಇ), ಸೌದಿ ಅರೇಬಿಯಾ ಜತೆಗೆ ಭಾರತ ಸರಕಾರ ಉತ್ತಮ ರಾಜತಾಂತ್ರಿಕ ಸಂಬಂಧ ಹೊಂದಿದೆ. ಹೀಗಾಗಿಯೇ 2012ರಿಂದ ಈಚೆಗೆ ಲಷ್ಕರ್‌-ಎ- ತೊಯ್ಬಾ, ಇಂಡಿಯನ್‌ ಮುಜಾಹಿದೀನ್‌ ಸೇರಿದಂತೆ ಹಲವು ಉಗ್ರ ಸಂಘಟನೆಗೆ ಸೇರಿದ 24 ಮಂದಿಯನ್ನು ದೇಶಕ್ಕೆ ಗಡಿಪಾರು ಮಾಡಿಸಿಕೊಳ್ಳಲಾಗಿದೆ. ಇದು ರಾಜತಾಂತ್ರಿಕವಾಗಿ ಕೇಂದ್ರ ಸರಕಾರಕ್ಕೆ ಸಿಕ್ಕಿದ ಮಹತ್ವದ ಜಯವಾಗಿದೆ.

Advertisement

ಈ 24 ಮಂದಿಯ ಪೈಕಿ 18 ಮಂದಿ ಸೌದಿ ಅರೇಬಿಯಾ,ಯುಎಇಯಿಂದಲೇ ಗಡಿಪಾರಾಗಿದ್ದಾರೆ. ಈ ಪೈಕಿ ಲಷ್ಕರ್‌, ಇಂಡಿಯನ್‌ ಮುಜಾಹಿದೀನ್‌ ಉಗ್ರರೇ ಹೆಚ್ಚು. ತೀರಾ ಇತ್ತೀಚಿನ ಪ್ರಕರಣವೆಂದರೆ ಲಷ್ಕರ್‌-ಎ-ತೊಯ್ಬಾ ಸಂಘಟನೆ ಜತೆಗೆ ಸಂಪರ್ಕ ಇರಿಸಿಕೊಂಡಿದ್ದಾನೆ ಎಂದು ಹೇಳಲಾಗಿರುವ ಹಬೀಬುರ್‌ ರೆಹಮಾನ್‌ ಎಂಬಾತನನ್ನು ನವದೆಹಲಿ ಏರ್‌ಪೋರ್ಟ್‌ನಲ್ಲಿ ಬಂಧಿಸಲಾಗಿತ್ತು. 2012ರ ಜೂ.5ರಂದು ಅಬು ಜುಂದಾಲ್‌ ಎಂಬ ಉಗ್ರನ ಗಡಿಪಾರಿನಿಂದ ಈ ಪ್ರಕ್ರಿಯೆ ಶುರುವಾಗಿತ್ತು. ಯುಪಿಎ ಮತ್ತು ಹಾಲಿ ಎನ್‌ಡಿಎ ಸರಕಾರದ ಅವಧಿಯಲ್ಲಿ ಈ ಬಗ್ಗೆ ಆದ್ಯತೆಯಿಂದ ಶ್ರಮಿಸಲಾಗಿತ್ತು.

ಕಳೆದ 6 ವರ್ಷಗಳಲ್ಲಿ ಸೌದಿ ಅರೇಬಿಯಾದಿಂದ 8, ಯುಎಇನಿಂದ 10, ಟರ್ಕಿಯಿಂದ 3, ಥಾಯ್ಲೆಂಡ್‌ನಿಂದ 1, ಸುಡಾನ್‌ನಿಂದ 1, ಬಾಂಗ್ಲಾದೇಶದಿಂದ ಒಬ್ಬನನ್ನು ಗಡಿಪಾರು ಮಾಡಲಾಗಿದೆ ಎಂದು “ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next