Advertisement

‘ಇಂಗ್ಲಿಷ್‌ನಿಂದ ತುಳು ಮೂಲೆ ಪಾಲಾಗಲಿಲ್ಲ’ 

09:40 AM Feb 15, 2019 | |

ವಿಟ್ಲ : ಒಡಿಯೂರು ಶ್ರೀ ಗುರು ದೇವದತ್ತ ಸಂಸ್ಥಾನದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರು ದೇವಾನಂದ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಗುರುವಾರ ನಡೆದ ಶ್ರೀ ಒಡಿಯೂರು ರಥೋತ್ಸವ- ತುಳುನಾಡ್ದ  ಜಾತ್ರೆ 2019ರ ಅಂಗವಾಗಿ ತುಳು ಭಾಷೆ-ಸಂಸ್ಕೃತಿ ಜಾಗೃತಿಗಾಗಿ ‘ತುಳು ಬದ್ಕ್ ದ  ನಿಲೆ-ಬಲೆ’ ಎಂಬ ಹೆಸರಿನ 19ನೇ ತುಳು ಸಾಹಿತ್ಯ ಸಮ್ಮೇಳನ
ದಲ್ಲಿ ‘ತುಳು ಬದ್ಕ್ ದ  ಉಲತಿರ್ಲ್` ಎಂಬ ಗೋಷ್ಠಿ ನಡೆಯಿತು.

Advertisement

ಸಾಧ್ವೀ ಶ್ರೀ ಮಾತಾನಂದಮಯೀ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಸಮ್ಮೇಳನಾಧ್ಯಕ್ಷೆ ಬೆಂಗಳೂರು ಸಾಹಿತಿ, ಸಂಶೋಧಕಿ ಡಾ| ಇಂದಿರಾ ಹೆಗ್ಡೆ, ಸಂಚಾಲಕ ಡಾ| ವಸಂತ ಕುಮಾರ್‌ ಪೆರ್ಲ ಉಪಸ್ಥಿತರಿದ್ದರು.

ತುಳು ಸ್ಥಿತಿ ಹೀಗಾಗುತ್ತಿತ್ತೇ?
ಮಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ ಡಾ| ಬಿ. ಸುರೇಂದ್ರ ರಾವ್‌ ಅಧ್ಯಕ್ಷತೆ ವಹಿಸಿ, ಮಾತನಾಡಿ, ಬುದ್ಧಿವಂತರ ಜಿಲ್ಲೆ ಎಂಬ ಹೇಳಿಕೆಯನ್ನು ನಂಬಲಾಗದು. ಹೌದಾಗಿದ್ದರೆ ತುಳು ಭಾಷೆಯ ಸ್ಥಿತಿ ಹೀಗಾಗುತ್ತಿತ್ತೇ? ತುಳುವರ ಸಂಖ್ಯೆ ದೊಡ್ಡದಲ್ಲ. ತುಳು-ಕನ್ನಡ ಭಾಷೆಗಳ ನಡುವೆ ಉತ್ತಮ ಹೊಂದಾಣಿಕೆಯಿದೆ. ಇಂಗ್ಲಿಷ್‌ ಭಾಷೆಯಿಂದ ತುಳು ಮೂಲೆ ಪಾಲಾಗಲಿಲ್ಲ. ತುಳು ಭಾಷೆ ಅವಗಣನೆಗೆ ಭಾಷಿಗರೇ ಕಾರಣ. ಕಳೆದ ಕೆಲ ವರ್ಷಗಳಿಂದ ಪುಸ್ತಕಗಳು ಹೊರಬಂದಿವೆ. ಅವುಗಳನ್ನು ಓದುವವರ ಸಂಖ್ಯೆ ಹೆಚ್ಚಾಗಬೇಕಾಗಿದೆ ಎಂದರು.

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ಸಂಶೋಧಕ ಡಾ| ಎಸ್‌.ಆರ್‌. ವಿಘ್ನರಾಜ್‌ ಅವರು ತುಳು ಭಾಷೆ ಸಂಶೋಧನೆ ಬಗ್ಗೆ ಮಾತನಾಡಿ, ತುಳು ಭಾಷೆಗೆ ಪ್ರಾಚೀನ ಇತಿಹಾಸವಿದೆ. ತುಳುವಿನಲ್ಲಿ 15 ಸಾವಿರ ಗ್ರಂಥಗಳಿವೆ. 9ನೇ ಶತಮಾನದಲ್ಲಿಯೇ ತುಳು ಭಾಷೆಯ ಲಿಪಿ ಯನ್ನು ಗುರುತಿಸಬಹುದು. ತುಳು ಭಾಗವತ ಪ್ರಥಮ ಶಿಷ್ಟ ಸಾಹಿತ್ಯವಾಗಿ ಗುರುತಿಸಲ್ಪಟ್ಟಿದೆ. ವಿದೇಶದಲ್ಲಿ 1 ಲಕ್ಷ ತುಳು ಗ್ರಂಥಗಳ ಸಂಗ್ರಹವಿದೆ. ನಾವು ತುಳು ಗ್ರಂಥಗಳನ್ನು ಸಂರಕ್ಷಿಸಬೇಕು ಎಂದರು. ಕುಂಬಳೆ ಪತ್ರಕರ್ತ ಎಂ.ನಾ. ಚಂಬಲ್ತಿಮಾರ್‌ ಅವರು ವ್ಯಾಪಾರ ಮತ್ತು ವಾಣಿಜ್ಯ ಎಂಬ ವಿಷಯದಲ್ಲಿ ಮಾತನಾಡಿ, ಹಿಂದೆ ತುಳುನಾಡಿನಅಡಿಕೆ ಮತ್ತು ಇತರ ಕೃಷ್ಯುತ್ಪನ್ನಗಳು ಉತ್ತಮವಾಗಿದ್ದವು. ತುಳುವರು ಸಾಧನಾಶೀಲರಾಗಿ ಪರಊರಿನಲ್ಲಿ
ಬೇರೆ ಬೇರೆ ಉದ್ಯಮಗಳನ್ನು ಆರಂಭಿಸಿದರು. ಅನೇಕ ಸಾಹಸಗಳನ್ನು ಪ್ರದರ್ಶಿಸಿದರು. ದೇಶ ವಿದೇಶಗಳಲ್ಲಿ ಇಂತಹ ಚರಿತ್ರೆಯಿದೆ ಎಂದರು.

ಶ್ರೀ ಗುರುದೇವ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಯಪ್ರಕಾಶ್‌ ಶೆಟ್ಟಿ ಸ್ವಾಗತಿಸಿದರು. ಯಶವಂತ ವಿಟ್ಲ ನಿರೂಪಿಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಉಡುಪಿ ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ವಂದಿಸಿದರು.

Advertisement

ಅಧ್ಯಯನ ಅಗತ್ಯ 
ಸುಳ್ಯದ ಸಾಹಿತಿ ಡಾ| ಸುಂದರ ಕೇನಾಜೆ ಅವರು ತುಳು ಸಾಹಿತ್ಯದ ಬಗ್ಗೆ ಮಾತನಾಡಿ, ತುಳು ಭಾಷೆಗೆ ರಾಜಾಶ್ರಯವಿರಲಿಲ್ಲ. ಬಾಸೆಲ್‌ ಮಿಷನ್‌ ಮತ್ತು ಬ್ರಿಟಿಷರ ಜನಪದ ಸಾಹಿತ್ಯ ಅಧ್ಯಯನ ತುಳು ಶಿಷ್ಟ ಸಾಹಿತ್ಯಕ್ಕೆ ಕೊಡುಗೆಯಾಗಿದೆ. ಸಂಕಯ್ಯ ಭಾಗವತರು ಪ್ರಥಮವಾಗಿ ತುಳು ಕೃತಿಯನ್ನು ಪ್ರಕಟಿಸಿದರು. ಚರಿತ್ರೆ, ಕವಿತೆ, ನಾಟಕ, ಸಾಹಿತ್ಯದಿಂದ ತುಳು ಭಾಷೆಗೆ ಮಹತ್ವ ಸಿಕ್ಕಿದೆ. ತುಳು ಪ್ರವಾಸ ಸಾಹಿತ್ಯ ಕಡಿಮೆ. ಜೀವನಚರಿತ್ರೆ ವಿಭಾಗದಲ್ಲಿ ಅನೇಕ ಕೃತಿಗಳು ಬಂದಿವೆ. ಸಾಂಪ್ರದಾಯಿಕ ದಾಖಲೆಗಳಿದ್ದರೂ ಅದರ ಅಧ್ಯಯನ ಆಗಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next