Advertisement
ಆ. 5ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಜರಗಿದ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಘಟಕದ 19ನೇ ವಾರ್ಷಿ ಕೋತ್ಸವ ಸಮಾರಂಭದಲ್ಲಿ ಉಪಸ್ಥಿತರಿದ್ದು ಆಶೀ ರ್ವಚನ ನೀಡಿದ ಶ್ರೀಗಳು, ಹಿರಿಯರ ಸೇವೆ ನಮ್ಮ ಧರ್ಮವಾಗಿದೆ. ವೃದ್ಧಾಶ್ರಮದ ಸಂತತಿ ನಮ್ಮಲ್ಲಿಲ್ಲ. ಉತ್ತಮ ಸಂಸ್ಕೃತಿ ನಮಗೆ ದೊರೆತರೆ ವೃದ್ಧಾಶ್ರಮ ತನ್ನಿಂದತಾನೆ ನಿವಾರಣೆಯಾಗುತ್ತದೆ ಎಂದರು.
ಬರಲಾಗುತ್ತಿದೆ. ಸ್ವಾಮೀಜಿಯವರ ಸಮಾಜ ಸೇವೆಯ ಬಗೆಗಿನ ದೃಢ ಸಂಕಲ್ಪವೇ ಇದಕ್ಕೆ ಕಾರಣ ವಾಗಿದೆ ಎಂದು ಹೇಳಿದರು.
Related Articles
ಅತಿಥಿಯಾಗಿ ಪಾಲ್ಗೊಂಡ ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್. ಹೆಗ್ಡೆ ಇವರು ಮಾತನಾಡಿ, ಸಮಾಜಪರ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿರುವ ಒಡಿಯೂರು ಶ್ರೀಗಳು ಸದಾ ಜನಸೇವೆಯಲ್ಲಿಯೇ ತೃಪ್ತಿಯನ್ನು ಕಂಡವರು. ಶ್ರೀಗಳ ಆಶೀರ್ವಾದವಿದ್ದರೆ ಯಶಸ್ಸು ದೊರೆಯುವುದರಲ್ಲಿ ಸಂಶಯವಿಲ್ಲ. ಅವರ ಕಾರ್ಯಗಳಿಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.
Advertisement
ಧರ್ಮ ಅಭಿವೃದ್ಧಿಯ ಕೆಲಸ ಆಗಬೇಕು ಇನ್ನೋರ್ವ ಅತಿಥಿ ಬಂಟರ ಸಂಘದ ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸದಾಶಿವ ಶೆಟ್ಟಿ ಅವರು ಮಾತನಾಡಿ, ಹಿಂದೂ ಧರ್ಮದಲ್ಲಿ ಗುರುಗಳಿಂದ ಹಾಗೂ ಸ್ವಾಮೀಜಿಗಳಿಂದ ಧರ್ಮ ಅಭಿವೃದ್ಧಿಯ ಕೆಲಸಗಳು ಆಗಬೇಕು. ಹಿಂದೂಗಳಿಗೆ ಸರಿಯಾದ ಧರ್ಮದ ತಿಳಿವಳಿಕೆ ನೀಡುವ ಸ್ವಾಮೀಜಿಗಳು ಪ್ರಸ್ತುತ ಕಾಲಘಟ್ಟದಲ್ಲಿ ಅಗತ್ಯವಿದೆ. ಅಶಾಂತಿಯಿಂದ ಶಾಂತಿಯೆಡೆಗೆ ಕೊಂಡೊಯ್ಯುವ ಕೆಲಸವನ್ನು ಹಿರಿಯರು ಮಾಡಬೇಕು ಎಂದರು. ಅಸ್ಪೃಶ್ಯತೆಯಿಂದಾಗಿ ತೊಂದರೆ
ಪುಣೆ ಗುರುದೇವ ಸೇವಾ ಬಳಗದ ಅಧ್ಯಕ್ಷ ಸದಾನಂದ ಶೆಟ್ಟಿ ಅವರು ಮಾತನಾಡಿ, ಹಿಂದೂ ಧರ್ಮದಲ್ಲಿನ ಅಸ್ಪೃಶ್ಯತೆಯಿಂದಾಗಿ ಹಿಂದೂ ಧರ್ಮಕ್ಕೆ ತೊಂದರೆ ಉಂಟಾಗಿದೆ. ಅಸ್ಪೃಶ್ಯತೆ ನಿವಾರಣೆ ಕಾರ್ಯವು ಸ್ವಾಮೀಜಿಗಳಿಂದ ಆಗಬೇಕು. ಸ್ವಾಮೀಜಿ ಅವರ ಸಮಾಜಪರ ಯೋಜನೆಗಳಿಗೆ ಪುಣೆ ಭಕ್ತರ ಸಂಪೂರ್ಣ ಸಹಕಾರವಿದೆ ಎಂದರು. ಈ ಸಂದರ್ಭದಲ್ಲಿ ಒಡಿಯೂರು ಶ್ರೀ ಯುವ ಸೇವಾ ಬಳಗದ ವತಿಯಿಂದ ಡಾ| ಆದಿತ್ಯ ಕೃಷ್ಣ ಶೆಟ್ಟಿ, ಡಾ| ಜಾನಕಿ ಕೊಡ್‌ಕಣಿ ಅವರು ನೇತ್ರದಾನದ ಜಾಗೃತಿಯ ಬಗ್ಗೆ ಮಾಹಿತಿ ನೀಡಿದರು.ಕಣ್ಣಿನ ಪೊರೆಯನ್ನು ತೆಗೆಯಲು ಸಹಾಯವನ್ನು ಮಾಡಿದರು. ಈ ಸಂದರ್ಭದಲ್ಲಿ ಗುರುದೇವ ಸೇವಾ ಬಳಗದ ಅನೇಕ ಭಕ್ತಾದಿಗಳು ನೇತ್ರದಾನ ಮಾಡಲು ಶ್ರೀಗಳಿಂದ ದೃಢೀಕರಣ ಪತ್ರವನ್ನು ಪಡೆದರು. 25 ಕ್ಕೂ ಅಧಿಕ ಮಂದಿಗೆ ಕಣ್ಣಿನ ಪೊರೆಯನ್ನು ತೆಗೆಯಲು ಸಹಾಯವಾಗುವ ಪತ್ರವನ್ನು ವಿತರಿಸಲಾಯಿತು.
ಸ್ವಾಮೀಜಿ ಹಾಗೂ ಅತಿಥಿ-ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಗದ ಉಪಾಧ್ಯಕ್ಷ ದಾಮೋದರ ಶೆಟ್ಟಿ ದಂಪತಿ ಶ್ರೀಗಳ ಪಾದುಕಾ ಪೂಜೆ ನೆರವೇರಿಸಿದರು. ಗುರುದೇವಾ ಸೇವಾ ಬಳಗದ ಅಧ್ಯಕ್ಷ ನ್ಯಾಯವಾದಿ ಕೃಷ್ಣ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮುಂಬಯಿ ಬಳಗದ ಹಾಗೂ ಒಡಿಯೂರು ಕ್ಷೇತ್ರದಲ್ಲಿ ನಡೆಯುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಸರ್ವರು ಸಹಕರಿಸುವಂತೆ ವಿನಂತಿಸಿದರು. ಉಪಾಧ್ಯಕ್ಷ ಚಂದ್ರಹಾಸ ರೈ ಬೊಳ್ನಾಡುಗುತ್ತು, ಗ್ರಾಮೋತ್ಸವ ಮುಂಬಯಿ ಸಮಿತಿ ಅಧ್ಯಕ್ಷ ವಾಮಯ್ಯ ಶೆಟ್ಟಿ, ರೇವತಿ ವಾಮಯ್ಯ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಗೌರವ ಪ್ರಧಾನ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ಸ್ವಾಮೀಜಿ ಅವರ ದಿವ್ಯಹಸ್ತದಿಂದ ಪ್ರತಿಭಾವಂತ ಮಕ್ಕಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಯುವ ವಿಭಾಗದ ಸುನಿಲ್ ಶೆಟ್ಟಿ ಮತ್ತು ನ್ಯಾಯವಾದಿ ಕವಿತಾ ಧೀರಜ್ ಶೆಟ್ಟಿ ಅವರು ಸಹಕರಿಸಿದರು. ಪ್ರಾರಂಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಭಿನಯ ಮಂಟಪ ಮುಂಬಯಿ ಮುಂಬಯಿ ಕಲಾವಿದರಿಂದ ದೇವು ಪೂಂಜ ನಾಟಕ ಪ್ರದರ್ಶನಗೊಂಡಿತು. ಗುರುಭಕ್ತರು, ತುಳು-ಕನ್ನಡಿಗರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಶ್ರೀಗಳನ್ನು ತುಳಸಿ ಹಾರ ಮತ್ತು ಆರತಿ ಬೆಳಗುವುದರ ಮೂಲಕ ಸ್ವಾಗತಿಸಲಾಯಿತು. ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮುಂಬಯಿ ಘಟಕದ ಅಧ್ಯಕ್ಷೆ, ಪದಾಧಿಕಾರಿಗಳು ಮತ್ತು ಸದಸ್ಯೆಯರು, ಒಡಿಯೂರು ಶ್ರೀ ಯುವ ಸೇವಾ ಬಳಗದ ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸ್ವಾಮೀಜಿಗಳಿಗೆ ಸಾಮಾಜಿಕ ಕಳಕಳಿ ಇರಬೇಕು. ಒಡಿಯೂರು ಕ್ಷೇತ್ರದಲ್ಲಿ ಇಂತಹ ಸಮಾಜಪರ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದು, ದೀನದಲಿತರ ಸೇವೆಯನ್ನು ಅವರು ಮಾಡುತ್ತಿದ್ದಾರೆ. ಜನಸಾಮಾನ್ಯರನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಕೆಲಸವನ್ನು ಒಡಿಯೂರು ಶ್ರೀಗಳು ಮಾಡುತ್ತಿದ್ದಾರೆ. ಅವರಿಗೆ ನಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಸದಾಯಿದೆ.
-ಪದ್ಮನಾಭ ಎಸ್. ಪಯ್ಯಡೆ,
ಅಧ್ಯಕ್ಷರು, ಬಂಟರ ಸಂಘ ಮುಂಬಯಿ ಜೀವನದಲ್ಲಿ ದಾರಿಯನ್ನು ತೋರಿಸಿ ಸನ್ಮಾರ್ಗದಲ್ಲಿ ನಡೆಸುವ ಕಾರ್ಯವನ್ನು ಮಾಡುತ್ತಿರುವವರು ಗುರುವಾಗಿರುತ್ತಾರೆ. ಅಂತಹ ಕೆಲಸವನ್ನು ಒಡಿಯೂರು ಶ್ರೀಗಳು ತಮ್ಮ ಸಮಾಜಪರ ಕಾರ್ಯಗಳಿಂದ ಮಾಡುತ್ತಿರುವುದು ಅಭಿನಂದನೀಯ. ಅವರಿಗಿರುವ ಆಧ್ಯಾತ್ಮಿಕ ಜ್ಞಾನ ಅಪಾರವಾಗಿದೆ. ಬಂಟರ ಸಂಘ ಹಾಗೂ ಸಮಾಜಕ್ಕೆ ಅವರು ಸದಾ ಮಾರ್ಗದರ್ಶನ ನೀಡುತ್ತಾ ಬಂದಿದ್ದಾರೆ. ಗುರುದೇವ ಸೇವಾ ಬಳಗ ಹಾಗೂ ಯುವ ವಿಭಾಗದವು ಮಾಡುತ್ತಿರುವ ಸಮಾಜಪರ ಕಾರ್ಯಕ್ರಮಗಳು ಅಭಿನಂದನೀಯವಾಗಿದೆ ೆ.
-ಬಿ. ವಿವೇಕ್ ಶೆಟ್ಟಿ ,
ಮಾಜಿ ಅಧ್ಯಕ್ಷರು, ಬಂಟರ ಸಂಘ ಮುಂಬಯಿ. ಚಿತ್ರ-ವರದಿ : ಸುಭಾಷ್ ಶಿರಿಯಾ