ಮಂಗಳೂರು: ತುಳುನಾಡಿನ ಸಂಸ್ಕೃತಿಗೆ ಬಲ ತುಂಬಿದ ಕೀರ್ತಿ ಇಲ್ಲಿನ ಗರಡಿಗಳಿಗೆ ಸಲ್ಲುತ್ತದೆ. ಅಧರ್ಮ ವಿರುದ್ಧ ಧರ್ಮದ ಕೀರ್ತಿ ಅರಳಿಸಿದವರು ತುಳುನಾಡಿನ ವೀರರಾದ ಕೋಟಿ ಚೆನ್ನಯರು. ತುಳುನಾಡಿನ ಜನರು ಸದಾ ಕ್ರಿಯಾಶೀಲರು ಎನ್ನುವುದು ಇಲ್ಲಿನ ಧರ್ಮಕಾರ್ಯವೇ ಸಾಕ್ಷಿ ಎಂದು ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ “ಕಂಕನಾಡಿ ಗರಡಿ-150’ರ ಸಂಭ್ರಮದ ಮೂರನೇ ದಿನವಾದ ರವಿವಾರದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಸಭಾ ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಕ್ಷೇತ್ರ ಹೊರನಾಡು ದೇವಾಲಯದ ಧರ್ಮಕರ್ತರಾದ ಭೀಮೇಶ್ವರ ಜೋಷಿ ಮಾತನಾಡಿ, ದೇವರು-ದೈವ ಮತ್ತು ಮನುಷ್ಯ ಸಂಬಂಧ ಒಟ್ಟಾದಾಗ ಜೀವನ ಪರಿಪೂರ್ಣತೆ ಕಾಣಲು ಸಾಧ್ಯ. ಪ್ರತಿಯೊಬ್ಬ ವ್ಯಕ್ತಿ ಧರ್ಮಯುಕ್ತವಾಗಿ ಜೀವನ ನಡೆಸಿ, ಪಡೆದ ಸಂಪತ್ತನ್ನು ಉತ್ತಮ ಕಾರ್ಯಕ್ಕೆ ವಿನಿಯೋಗಿಸಿ ಆತ್ಮತೃಪ್ತಿ ಕಾಣುವಂತಹ ಮೋಕ್ಷಗಾಮಿಯಾದಾಗ ಬದುಕು ಸಾರ್ಥಕ್ಯ ಕಾಣುತ್ತದೆ. ಧರ್ಮದ ವ್ಯಾಖ್ಯಾನ ಇಂತಹ ದೈವ-ದೇವರ ಗುಡಿ ಗೋಪುರದಲ್ಲಿ ಕಾಣಲು ಸಾಧ್ಯ ಎಂದರು.
ಉದ್ಯಮಿ ರೋಹಿತ್ ಸನಿಲ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಅಧ್ಯಕ್ಷ ಪಿತಾಂಬರ ಹೆರಾಜೆ, ಮುಂಬಯಿ ಬಿಲ್ಲವರ ಅಸೋಸಿಯೇಶನ್ ಉಪಾಧ್ಯಕ್ಷ ಸುರೇಶ್ ಕುಮಾರ್, ಆರೆಸ್ಸೆಸ್ ಮಂಗಳೂರು ಮಹಾನಗರ ಸಹ ಸಂಘಚಾಲಕರಾದ ಸುನಿಲ್ ಆಚಾರ್, ಉದ್ಯಮಿ ಉದಯಚಂದ್ರ ಡಿ. ಸುವರ್ಣ, ಅನಿವಾಸಿ ಭಾರತೀಯ ಕಿಶೋರ್ ಕಿರೋಡಿಯನ್ ಇಂಗ್ಲೆಂಡ್, ರಾಜ್ಯ ಇಂಧನ ಸಚಿವರ ವಿಶೇಷಾಧಿ ಕಾರಿ ಮಂಜಪ್ಪ, ಕೆಂಜ ಗರಡಿ ಬಗ್ಗ ಪೂಜಾರಿ, ಕಂಕನಾಡಿ ಗರಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಕೆ., ಗರಡಿ ಸಂಭ್ರಮದ ಅಧ್ಯಕ್ಷ ಮೋಹನ್ ಉಜ್ಜೋಡಿ, ಮ್ಯಾನೇಜರ್ ಜೆ. ಕಿಶೋರ್, ಗರಡಿ ಕ್ಷೇತ್ರದ ಮೊಕ್ತೇಸರರಾದ ಬಿ. ವಿಠಲ, ಎ. ವಾಮನ, ಬಿ. ದಾಮೋದರ ನಿಸರ್ಗ, ದಿವರಾಜ್, ಜಗದೀಪ್ ಡಿ. ಸುವರ್ಣ, ಜೆ. ವಿಜಯ ಉಪಸ್ಥಿತರಿದ್ದರು.
ಗರಡಿಯ ಮೊಕ್ತೇಸರ ದಿನೇಶ್ ಅಂಚನ್ ಪ್ರಾಸ್ತಾವಿಕವಾಗಿ ಮಾತ ನಾಡಿದರು. ಆರ್ಥಿಕ ಸಮಿತಿ ಸಂಚಾ ಲಕ ರಾದ ಚಿತ್ತರಂಜನ್ ಬೋಳಾರ್ ಸ್ವಾಗತಿಸಿ, ದಿನೇಶ್ ರಾಯಿ ಮತ್ತು ಶ್ರುತಿ ಅಮೀನ್ ಕಾರ್ಯಕ್ರಮ ನಿರೂಪಿಸಿದರು.