Advertisement
ಸಾಮರಸ್ಯ ಸಮಾಜ ನಿರ್ಮಾಣಕಾರ್ಯಕ್ರಮವನ್ನು ಉದ್ಘಾಟಿಸಿದ ಯೋಜನೆಯ ಪ್ರಧಾನ ಸಂಚಾಲಕ ಟಿ.ತಾರಾನಾಥ ಕೊಟ್ಟಾರಿ, ಹೃದಯ ಶ್ರೀಮಂತಿಕೆಯಿಂದ ಸಂಘಟನೆಯನ್ನು ಬಲಪಡಿಸುವುದರೊಂದಿಗೆ ಆ ಪರಿಸರದಲ್ಲಿ ಆದರ್ಶಮಯ, ಸಂಸ್ಕಾರಯುತವಾದ ಗ್ರಾಮ ನಿರ್ಮಾಣವಾಗಲು ಸಾಧ್ಯ. ಒಡಿಯೂರು ಶ್ರೀಗಳ ಆಶಯದಂತೆ ನಮ್ಮತನವನ್ನು ಮರೆಯದೇ ಸಾಮರಸ್ಯ ಸಮಾಜ ನಿರ್ಮಾಣದೊಂದಿಗೆ ಗ್ರಾಮ ವಿಕಾಸ ಯೋಜನೆ ಬೆಳೆದಿದೆ ಎಂದರು.
ಮಿತ್ರವೃಂದದ ಮಾಜಿ ಅಧ್ಯಕ್ಷ ಲಿಂಗಪ್ಪ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಯುವ ಉದ್ಯಮಿ ಸಂದೀಪ್ ಬೊಂದೇಲ್, ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯಾಧ್ಯಕ್ಷ ವಿವೇಕ್ ಗಾಣಿಗ, ಶ್ರೀದೇವಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಮೋಹನ್ ಪಚ್ಚನಾಡಿ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ವ್ಯವಸ್ಥಾಪಕಿ ಸೌಮ್ಯಾ ಭಟ್, ಸಮಾಜ ಸೇವಕ ಗಂಗಾಧರ ಪಚ್ಚನಾಡಿ ಕಾವೂರು, ಘಟಸಮಿತಿ ಅಧ್ಯಕ್ಷ ರಾಜೇಶ್ ಶೆಟ್ಟಿ ಕಾವೂರು, ಆಶ್ರಯ ಮಿತ್ರ ವೃಂದದ ನಿಯೋಜಿತ ಅಧ್ಯಕ್ಷ ಭಾಸ್ಕರ್ ಟೈಲರ್ ಉಪಸ್ಥಿತರಿದ್ದರು. ಸೇವಾದೀಕ್ಷಿತೆ ಹರ್ಷಿತಾ ಮೋಹನ್ ವರದಿ ವಾಚಿಸಿದರು. ಘಟಸಮಿತಿಯ ಅಧ್ಯಕ್ಷೆ ಅನುರಾಧಾ ಸ್ವಾಗತಿಸಿದರು. ಕಾರ್ಯದರ್ಶಿ ಶರ್ಮಿಳಾ ವಂದಿಸಿದರು. ವಿಸ್ತರಣಾಧಿಕಾರಿ ನವೀನ್ ಶೆಟ್ಟಿ ಹಾಗೂ ವಿಕಾಸವಾಹಿನಿ ಯೋಜನೆ ಸದಸ್ಯೆ ಗಂಗಾಧರ್ ಪಚ್ಚನಾಡಿ ನಿರ್ವಹಿಸಿದರು.