ನವಿಮುಂಬಯಿ: ಸಂಘ-ಸಂಸ್ಥೆಗಳನ್ನು ಕಟ್ಟುವುದು ಮುಖ್ಯವಲ್ಲ. ಅದು ಸಮಾಜಕ್ಕಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು. ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಂಘಟನೆಗಳನ್ನು ಬೆಳೆಸಬೇಕು. ಒಳ್ಳೆಯ ಬದುಕಿಗಾಗಿ ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳಗಿಸಬೇಕು ಎಂದು ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ನುಡಿದರು.
ಜು. 30ರಂದು ನೆರೂಲ್ ಶ್ರೀ ಮಹಾಗಣಪತಿ, ಶ್ರೀ ದುರ್ಗಾದೇವಿ, ಶ್ರೀ ಅಯ್ಯಪ್ಪ ಮಂದಿರದ ಶ್ರೀ ಗುರುದೇವಾನಂದ ಸಭಾಂಗಣದಲ್ಲಿ ಜರಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ವಿವಿಧತೆಯಲ್ಲಿ ಏಕತೆಯಿರುವ ಈ ದೇಶದಲ್ಲಿ ಒಂದೇ ಮಾತರಂ ಎಲ್ಲರೂ ಹೆಮ್ಮೆಯಿಂದ ಹಾಡಬೇಕಾದ ದೇಶಭಕ್ತಿಗೀತೆಯಾಗಿದೆ. ಇದರ ಬಗ್ಗೆ ವಿವಾದವನ್ನು ಹುಟ್ಟಿಸುತ್ತಿರುವುದು ವಿಷಾದನೀಯ. ದೇಶದ ಒಳಿತಿಗಾಗಿ ನಾವು ಶ್ರಮಿಸಬೇಕು. ಹಾಗೂ ಮಕ್ಕಳಿಗೆ ದೇಶ ಪ್ರೇಮವನ್ನು ಮೂಡಿಸುವ ಕಾರ್ಯವನ್ನು ನಾವು ಮಾಡಬೇಕು. ದೇಶವು ಸ್ವತ್ಛ ಇರಬೇಕಾದರೆ ಎಲ್ಲರ ಪ್ರಯತ್ನಿಸಬೇಕು. ಜೀವನದಲ್ಲಿ ನಾವು ಸ್ವತ್ಛತೆಯನ್ನು ತಂದು, ಆ ಮೂಲಕ ಆತ್ಮಶುದ್ಧಿಯಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರದಲ್ಲಿ ಗುರುಗಳು ಉದ್ಘಾಟಿಸಿದ ಶ್ರೀ ಗುರುದೇವಾನಂದ ಸಭಾಗೃಹಗಳು ನಿರಂತರ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಧರ್ಮಜಾಗೃತಿ ಕಾರ್ಯ ಜರಗುತ್ತಿರಲಿ ಎಂದರು. ಇದರ ದಾನಿಯಾದ ದಾಮೋದರ ಶೆಟ್ಟಿ ಅವರು ಸಮಾಜದ ಮೇಲಿನ ಪ್ರೀತಿಯಿಂದ ಸಮಾಜಕ್ಕೆ ಅರ್ಪಿಸಿದ್ದಾರೆ. ಇದೊಂದು ಪುಣ್ಯದ ಕಾರ್ಯವಾಗಿದೆ. ಇಂತಹ ಮನೋಭಾವ ಎಲ್ಲರೂ ಬೆಳೆಸಿಕೊಂಡಾಗ ಸುಸಂಸ್ಕೃತ ಸಮಾಜ ನಿರ್ಮಾಣವಾಗುತ್ತದೆ ಎಂದು ನುಡಿದರು.
ಗುರುದೇವ ಸೇವಾ ಬಳಗದ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಗುರುದೇವಾ ಸೇವಾ ಬಳಗದ ನವಿಮುಂಬಯಿ ಸದಸ್ಯರಾದ ಕರುಣಾಕರ ಆಳ್ವ ಅದ್ಯಪಾಡಿಗುತ್ತು ಅವರು ಗುರುಗಳ ಹೆಸರಿನಲ್ಲಿ ನಿರ್ಮಾಣವಾದ ಸಭಾಗೃಹದ ಬಗ್ಗೆ ವಿವರಿಸಿದರು. ಪ್ರಾರಂಭದಲ್ಲಿ ಶ್ರೀಗಳು ದೀಪ ಪ್ರಜ್ವಲಿಸಿ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಒಡಿಯೂರು ಕ್ಷೇತ್ರದ ಶ್ರೀ ಮಾತಾನಂದಮಯಿ ಅವರು ಪ್ರಾರ್ಥನೆಗೈದರು. ಹರೀಶ್ ಶೆಟ್ಟಿ ಅವರು ಶ್ರೀಗಳ ಪಾದಪೂಜೆಗೈದರು.
ಶ್ರೀ ಕ್ಷೇತ್ರ ಅಯ್ಯಪ್ಪ ಮಂದಿರದ ಪದಾಧಿಕಾರಿಗಳಾದ ಕಿಶೋರ್ ಎಂ. ಶೆಟ್ಟಿ, ಕೆ. ಡಿ. ಶೆಟ್ಟಿ, ಸದಾನಂದ ಶೆಟ್ಟಿ, ಸಂಜೀವ ಶೆಟ್ಟಿ, ಸಂತೋಷ್ ಡಿ.ಶೆಟ್ಟಿ, ಸುರೇಶ್ ಜಿ. ಶೆಟ್ಟಿ, ಮೋಹನ್‌ದಾಸ್ ರೈ, ಶ್ಯಾಮ್ ಎನ್. ಶೆಟ್ಟಿ, ಗೋಪಾಲ್ ಶೆಟ್ಟಿ, ಗುರುದೇವ ಸೇವಾ ಬಳಗದ ಮಾಜಿ ಅಧ್ಯಕ್ಷರಾದ ನ್ಯಾಯವಾದಿ ಕೃಷ್ಣ ಶೆಟ್ಟಿ, ನ್ಯಾಯವಾದಿ ಪ್ರಕಾಶ್ ಎಲ್. ಶೆಟ್ಟಿ, ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ರೇವತಿ ವಾಮಯ್ಯ ಶೆಟ್ಟಿ, ಸುಹಾಸಿನಿ ಶೆಟ್ಟಿ, ನವಿಮುಂಬಯಿ ಗುರು ಭಕ್ತರಾದ ದಾಮೋದರ ಶೆಟ್ಟಿ, ಕರುಣಾಕರ ಆಳ್ವ ಆದ್ಯಪಾಡಿಗುತ್ತು, ಹರ್ಷವರ್ಧನ್ ಹೆಗ್ಡೆ, ಅನಿಲ್ ಕುಮಾರ್ ಹೆಗ್ಡೆ, ಹರೀಶ್ ಶೆಟ್ಟಿ, ವಿ. ಕೆ. ಸುವರ್ಣ, ಜಗದೀಶ್ ಶೆಟ್ಟಿ ಪನ್ವೆಲ್, ಸಚಿನ್ ಶೆಟ್ಟಿ, ಆನಂದ ಹೆಗ್ಡೆ, ರಾಮಚಂದ್ರ ಕಾಂಚನ್, ಜಗದೀಶ್ ಶೆಟ್ಟಿ ಬೆಳ್ಮಣ್, ಬಾಲಕೃಷ್ಣ ಆದ್ಯಪಾಡಿ, ಹರಿ ಎಲ್. ಶೆಟ್ಟಿ, ಹರೀಶ್ ಎನ್. ಶೆಟ್ಟಿ, ತಾರನಾಥ ಪುತ್ತೂರು, ಪ್ರದೀಪ್ ಶೆಟ್ಟಿ, ರಾಜೇಶ್ ಶೆಟ್ಟಿ, ಮೋಹನ್‌ದಾಸ್ ರೈ, ಪ್ರಕಾಶ್ ಶೆಟ್ಟಿ ನೆರೂಲ್, ಪುನೀತ್ ಶೆಟ್ಟಿ, ಸುರೇಂದ್ರ ಪೂಜಾರಿ, ಶ್ರೀಧರ ಪೂಜಾರಿ, ಸತೀಶ್ ಎರ್ಮಾಳ್ ಮೊದಲಾದವರು ಉಪಸ್ಥಿತರಿದ್ದರು. ಭಕ್ತಾದಿಗಳು, ಗುರುಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.