Advertisement

ಹಾಕಿ ಸ್ಟಿಕ್‌ ದಾಖಲೆಯ ಬ್ಯಾಲೆನ್ಸ್‌!

11:01 PM Aug 14, 2021 | Team Udayavani |

ಭುವನೇಶ್ವರ: ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡ ದಾಖಲೆ ನಿರ್ಮಿಸಿ ಮರಳಿದ ಬೆನ್ನಲ್ಲೇ ಇದೀಗ ಇಲ್ಲಿನ ಯುವಕನೊಬ್ಬ ಅದೇ ಹಾಕಿ ಸ್ಟಿಕ್‌ನಿಂದ ದಾಖಲೆ ನಿರ್ಮಿಸಿದ್ದಾನೆ.

Advertisement

ಒಡಿಶಾದ ಬೊಲಂಗಿರ್‌ ಜಿಲ್ಲೆಯ ಜಮುತ್ಜೋಹೊಲ ಗ್ರಾಮದ ರಾಜಗೋಪಾಲ್‌ ಭೋಯ್‌(25) ತನ್ನ ತೋರು ಬೆರಳ ಮೇಲೆ ಹಾಕಿ ಸ್ಟಿಕ್‌ ಬ್ಯಾಲೆನ್ಸ್‌ ಮಾಡಿ ದಾಖಲೆ ಬರೆದಿದ್ದಾನೆ.

ಬೆರಳ ಮೇಲೆ ಬರೋಬ್ಬರಿ 3 ತಾಸು 22 ನಿಮಿಷ ಹಾಗೂ 22 ಸೆಕೆಂಡುಗಳ ಕಾಲ ಹಾಕಿ ಸ್ಟಿಕ್‌ ಬ್ಯಾಲೆನ್ಸ್‌ ಮಾಡಿದ್ದಾನೆ. ಈ ಹಿಂದಿನ ಗಿನ್ನೆಸ್‌ ವರ್ಲ್ಡ್ ರೆಕಾರ್ಡ್‌ನಲ್ಲಿ 2 ಗಂಟೆ 22 ನಿಮಿಷವೇ ಅತ್ಯಧಿಕವಾಗಿದ್ದು, ಇದೀಗ ರಾಜಗೋಪಾಲ್‌ ಆ ದಾಖಲೆ ಮುರಿದಿದ್ದಾನೆ.

ಆತ ಬ್ಯಾಲೆನ್ಸಿಂಗ್‌ ಮಾಡಿರುವ ವೀಡಿಯೋವನ್ನು ಗಿನ್ನೆಸ್‌ ರೆಕಾರ್ಡ್‌ಗೆ ಕಳುಹಿಸಲಾಗಿದ್ದು, ಅದು ಪರೀಕ್ಷೆಗೆ ಒಳಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next