Advertisement
ಈ ಘಟನೆ ನಡೆದಿರುವುದು ಅಕ್ಟೋಬರ್ 23 ರಂದು ಇದೀಗ ವಿಚಾರ ದೇಶದಾದ್ಯಂತ ಹರಿದಾಡುತ್ತಿದೆ. ತಂದೆಯ ಚಿಕಿತ್ಸೆಗಾಗಿ ಮಗಳೇ ಸೈಕಲ್ ರಿಕ್ಷಾ ತುಳಿದು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಇದೀಗ ಸುದ್ದಿಯಾಗುತ್ತಿದೆ.
ಭದ್ರಾಕ್ ಜಿಲ್ಲೆಯ ನಾಡಿಗನ್ ಗ್ರಾಮದ ನಿವಾಸಿಯಾಗಿರುವ 14 ವರ್ಷದ ಸುಜಾತಾ ಸೇಥಿ. ಕೆಲ ದಿನಗಳ ಹಿಂದೆ ಸುಜಾತಾ ತಂದೆ ಶಂಭುನಾಥ್ ಯಾವುದೋ ಜಗಳದಲ್ಲಿ ಗಾಯಗೊಂಡಿದ್ದರು. ಅಕ್ಟೋಬರ್ 23 ರಂದು ಸುಜಾತಾ ಗಾಯಗೊಂಡ ತಂದೆಯನ್ನು ಸೈಕಲ್ ರಿಕ್ಷಾದಲ್ಲಿ ಕೂರಿಸಿಕೊಂಡು 14 ಕಿ.ಮೀ ದೂರದಲ್ಲಿರುವ ಧಮ್ನಗರ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ, ಆದರೆ ಶಂಬುನಾಥ್ ಅವರಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದುದರಿಂದ ಆಸ್ಪತ್ರೆ ವೈದ್ಯರು ಭದ್ರಾಕ್ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲು ಸಲಹೆ ನೀಡಿದರು. ವೈದ್ಯರ ಸಲಹೆಯಂತೆ ತಂದೆಯನ್ನು ಸುಜಾತಾ ಧಮ್ನಗರ್ ಆಸ್ಪತ್ರೆಗೆಯಿಂದ ಭದ್ರಾಕ್ ಜಿಲ್ಲಾ ಆಸ್ಪತ್ರೆಗೆ ತನ್ನ ಸೈಕಲ್ ರಿಕ್ಷಾದಲ್ಲಿ ಕುಳ್ಳಿರಿಸಿ 35 ಕಿ.ಮೀ ದೂರದಲ್ಲಿರುವ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದಾಳೆ. ಇಲ್ಲಿ ತಪಾಸಣೆ ನಡೆಸಿದ ವೈದ್ಯರು ಅಗತ್ಯ ಔಷಧಿಗಳನ್ನು ನೀಡಿ ಒಂದು ವಾರದ ಬಳಿಕ ಮತ್ತೆ ಆಸ್ಪತ್ರೆಗೆ ಬರುವಂತೆ ಹೇಳಿದ್ದಾರೆ.
Related Articles
Advertisement
ವಯಸ್ಸಾದ ತಂದೆ ತಾಯಿಯನ್ನು ಮನೆಯಿಂದ ಹೊರಹಾಕುವ ಕಾಲದಲ್ಲಿ ಈ ಬಾಲಕಿ ತನ್ನ ತಂದೆಯ ಚಿಕಿತ್ಸೆಗೆ ಅಷ್ಟೊಂದು ದೂರ ಸೈಕಲ್ ರಿಕ್ಷಾ ತುಳಿದು ಚಿಕಿತ್ಸೆ ಕೊಡಿಸಿರುವುದು ನಿಜಕ್ಕೂ ಶ್ಲಾಘನೀಯ.
ಇದನ್ನೂ ಓದಿ: IndiaVsAustralia T20 Series: ಟೀಂ ಇಂಡಿಯಾದ ಪ್ರಮುಖರಿಗಿಲ್ಲ ಚಾನ್ಸ್, ಕೋಚ್ ಕೂಡಾ ಬದಲು