Advertisement
ಚೆನ್ನೈನ ರಿಜಿಸ್ಟ್ರಾರ್ ಆಫ್ ಜಿಯಾಗ್ರಾಫಿಕಲ್ ಇಂಡಿಕೇಷನ್ ಕಾಟೇಜ್ ಚೀಸ್‌ನಿಂದ ತಯಾರಿಸಲಾಗುವ ರಸಗುಲ್ಲಾವನ್ನು ಸರಕುಗಳ ಭೌಗೋಳಿಕ ಮಾನ್ಯತೆ (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ, 1999ರ ಅನ್ವಯ ‘ಒಡಿಶಾ ರಸಗುಲ್ಲಾ’ ಎಂದು ಘೋಷಿಸಿದೆ. ಈ ಮಾನ್ಯತೆಯು 2028ರ ಫೆಬ್ರವರಿ 22ರವರೆಗೂ ಚಾಲ್ತಿಯಲ್ಲಿರುತ್ತದೆ. 2015ರಿಂದಲೂ ರಸಗುಲ್ಲಾದ ಮೂಲದ ಕುರಿತು ಪಶ್ಚಿಮ ಬಂಗಾಳ ಮತ್ತು ಒಡಿಶಾ ನಡುವೆ ಭಾರೀ ಪೈಪೋಟಿ ಏರ್ಪಟ್ಟಿತ್ತು. 2017ರಲ್ಲಿ ಪಶ್ಚಿಮ ಬಂಗಾಳವು ‘ಬಂಗಾಳದ ರಸಗುಲ್ಲಾ’ಗೆ ಜಿಐ ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಮಾರನೇ ವರ್ಷವೇ ಒಡಿಶಾ ಸಣ್ಣ ಉದ್ಯಮ ನಿಗಮವು ಜಿಐ ಮಾನ್ಯತೆಗೆ ಅರ್ಜಿ ಸಲ್ಲಿಸಿತ್ತು. Advertisement
ಒಡಿಶಾಗೆ ಸಿಹಿ ಸುದ್ದಿ ರಸಗುಲ್ಲಾಗೆ ಜಿಐ ಮಾನ್ಯತೆ
01:04 AM Jul 30, 2019 | mahesh |
Advertisement
Udayavani is now on Telegram. Click here to join our channel and stay updated with the latest news.