Advertisement
ಕೆಲವರಿಗೆ ಜೀವನದಲ್ಲಿ ಏನಾದರೂ ಮಾಡಬೇಕೆನ್ನುವ ಆಸೆ ಅಥವಾ ಕನಸು ಆಕಸ್ಮಿಕವಾಗಿ ಯೋಚನಗೆ ಬರುತ್ತದೆ. ಪ್ರಾರಂಭದಿಂದ ಯಾವುದೇ ಗುರಿ ದಾರಿಯಿಲ್ಲದೆ ಯೋಚನೆಗೆ ಬರುವ ಯೋಜನೆಗಳನ್ನು ಯಶಸ್ಸಿನ ದಾರಿಗೆ ತರುವುದು ಅಷ್ಟು ಸುಲಭ ಸಾಧ್ಯದ ಮಾತಲ್ಲ. ಒಳ್ಳೆ ಸಂಬಳದ ಕೆಲಸ, ನೆಮ್ಮದಿಯ ನಿದ್ದೆ, ಗೊಂದಲವಿಲ್ಲದ ಜೀವನ. ಇವಿಷ್ಟು ಇದ್ದರೆ ಸಾಕೆಂದು ಬದುಕನ್ನು ದೂಡುವವರು ಹಲವು ಜನ ಇರುತ್ತಾರೆ. ಒಡಿಶಾದ ಮಲ್ಕನಗಿರಿಯ ಬಾಲ್ಯದ ಇಬ್ಬರು ಗೆಳೆಯರು ಹೀಗೆಯೇ ಇದ್ದರು. ವೃತ್ತಿಯಲ್ಲಿ ಇಂಜಿನಿಯರಿಂಗ್ ಆಗಿರುವ ಸುಮಿತ್ ಸಮಲ್ ಮತ್ತು ಪ್ರಿಯಂ ಬೆಬರ್ತಾ ಕೋವಿಡ್ ಕಾರಣದಿಂದ ಮನೆಯಿಂದನೇ ಕೆಲಸ ಮಾಡುವ ನಿಟ್ಟಿನಲ್ಲಿ ತಮ್ಮ ಊರಿಗೆ ಬರುತ್ತಾರೆ.
Advertisement
ಡಿಸಿ ಆಫೀಸಿನ ಪಕ್ಕದ ರಸ್ತೆಯಲ್ಲಿನ ಒಂದು ಬಾಡಿಗೆ ಕೋಣೆಯೇ ‘ಇಂಜಿನಿಯರ್ಸ್ ಟೆಲಾ’ ಆಗಿ ಬದಲಾಯಿತು. ಅಲ್ಲಿಬ್ಬರು ಅಡುಗೆಯವರನ್ನು ನೇಮಕ ಮಾಡಲಾಯಿತು. ಗ್ರಾಹಕರು ಬಿರಿಯಾನಿ ಸುಗಂಧಕ್ಕೆ ಹೊಟ್ಟೆ ಪೂರ್ತಿ ತಿಂದು ತೇಗು ತೆಗೆದು ಹಣ ಕೊಟ್ಟು ಹೋಗುವವರ ಸಂಖ್ಯೆ ದಿನ ಕಳೆದಂತೆ ಹೆಚ್ಚಾಯಿತು.
‘ಇಂಜಿನಿಯರ್ಸ್ ಟೆಲಾ’ ಸುಸಜ್ಜಿತ ಆಹಾರವನ್ನು ನೀಡಲು ಮೊದಲ ಆದ್ಯತೆ ನೀಡುತ್ತದೆ. ಬಿರಿಯಾನಿಗಾಗಿ ತರುವ ಚಿಕನ್ ಗಳನ್ನು ಸ್ವತಃ ಗೆಳೆಯರಿಬ್ಬರು ಮಾರುಕಟ್ಟೆಗೆ ಹೋಗಿ ತರುತ್ತಾರೆ. ಗುಣಮಟ್ಟದ ಆಹಾರವನ್ನು ಗ್ರಾಹಕರಿಗೆ ಒದಗಿಸಿ, ರುಚಿಯೊಂದಿಗೆ ಗ್ರಾಹಕರ ಮನವೂ ಗೆದ್ದಿದ್ದಾರೆ. ಸದ್ಯ ಇವರ ಹೊಟೇಲ್ ನಲ್ಲಿ ಆನ್ಲೈನ್ ಆರ್ಡರ್ ಮಾತ್ರ ನಡೆಯುತ್ತಿದೆ.
ಚಿಕನ್ ಟಿಕ್ಕಾ ಹಾಗೂ ಚಿಕನ್ ಬಿರಿಯಾನಿಗೆ ಖ್ಯಾತಿಯಾಗಿರುವ ಇಂಜಿನಿಯರ್ಸ್ ಟೆಲಾದಲ್ಲಿ ಒಂದು ಪ್ಲೇಟ್ ಬಿರಿಯಾನಿಗೆ 120 ರೂಪಾಯಿ. ಹಾಫ್ ಪ್ಲೇಟ್ ಗೆ 70 ರೂಪಾಯಿ. ತಿಂಗಳೊಂದಕ್ಕೆ ಇವರಿಬ್ಬರ ಹೊಟೇಲ್ 45 ಸಾವಿರ ಲಾಭ ಗಳಿಸುತ್ತಿದೆ. ಬೆಳಗ್ಗೆಯಿಂದ ಸಂಜೆವರೆಗೆ ಇವರಿಬ್ಬರು ಇಂಜಿನಿಯರ್ಸ್ ಸಂಜೆ ಬಳಿಕ ಹೊಟೇಲ್ ಮಾಲಕರು.! ಇದಕ್ಕೆ ಹೇಳೋದು ಅಲ್ವಾ ಕೆಲ ಯೋಚನೆಗಳು ಆಕಸ್ಮಿಕವಾಗಿ ಬಂದರೂ, ಯೋಜನೆಯ ಕಾರ್ಯಗತ ಗಂಭೀರವಾಗಿರಬೇಕೆಂದು..