Advertisement

ಆರೋಗ್ಯ ಯೋಧರು : ಅಮ್ಮನ ಸಾವಿನ ಸುದ್ದಿ ಕೇಳಿಯೂ ಕರ್ತವ್ಯ ಬಿಡಲಿಲ್ಲ!

12:27 PM Mar 21, 2020 | Hari Prasad |

ಕೋವಿಡ್ 19 ವೈರಸ್ ನಂತಹ ಮಾರಣಾಂತಿಕ ಕಾಯಿಲೆಯೊಂದು ಜಗತ್ತನ್ನೇ ಬೆಚ್ಚಿ ಬೀಳಿಸಿರುವಾಗಲೂ ಅಲ್ಲಲ್ಲಿ ಕೆಲವರ ನಿಸ್ವಾರ್ಥ ಸೇವೆಗಳು, ಕರ್ತವ್ಯಪ್ರಜ್ಞೆ ಹಾಗೂ ಮಾನವೀಯ ನಡೆಗಳು ಭರವಸೆಯ ಬೆಳಕನ್ನು ಮೂಡಿಸುತ್ತಿವೆ. ಜನಮಾನಸದಲ್ಲಿ ಹೀರೋಗಳಾಗಿ ಹೊರಹೊಮ್ಮುತ್ತಿರುವ ಇಂತಹ ವ್ಯಕ್ತಿತ್ವ ಗಳ ಸಾಲಿಗೆ ಹೊಸ ಸೇರ್ಪಡೆಯೆಂದರೆ ಒಡಿಶಾದ ವೈದ್ಯ ಅಶೋಕ್‌ ದಾಸ್‌.

Advertisement

ಇಲ್ಲಿನ ಸಂಬಾಲ್ಪುರದ ವೈದ್ಯರಾದ ದಾಸ್‌ ಅವರು ಕೋವಿಡ್‌-19ಗೆ ಸಂಬಂಧಿಸಿದ ನೋಡಲ್‌ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ 80 ವರ್ಷದ ತಾಯಿಯು ಅಸುನೀಗಿದ ಸುದ್ದಿ ತಿಳಿದೂ, ನೋವನ್ನು ನುಂಗಿಕೊಂಡು, ಅಂದಿನ ತಮ್ಮ ಎಲ್ಲ ಕರ್ತವ್ಯಗಳನ್ನೂ ಪೂರೈಸಿ ಅನಂತರವೇ ಅಮ್ಮನ ಅಂತ್ಯಸಂಸ್ಕಾರ ನಡೆಸಿದ್ದಾರೆ.

ಸಾವಿನ ಸುದ್ದಿ ತಲುಪಿದ ಬಳಿಕವೂ, ಹಲವು ಸಭೆಗಳಲ್ಲಿ ಭಾಗಿಯಾಗಿ, ಆಸ್ಪತ್ರೆಗೆ ತೆರಳಿ, ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮುಗಿಸಿ, ಸಂಜೆಯ ವೇಳೆಗೆ ಕೊನೇ ಬಾರಿಗೆ ಅಮ್ಮನ ಮುಖ ನೋಡಿ, ಅಂತಿಮ ವಿಧಿವಿಧಾನ ಪೂರೈಸುವ ಮೂಲಕ ತಮ್ಮ  ಕರ್ತವ್ಯಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡಿದ್ದಾರೆ. ಜನಸೇವೆಯೇ ಎಲ್ಲಕ್ಕಿಂತ ಮುಖ್ಯ ಎಂದೂ ಹೇಳಿದ್ದಾರೆ ದಾಸ್‌.

Advertisement

Udayavani is now on Telegram. Click here to join our channel and stay updated with the latest news.

Next