ವಿಶ್ವಕಪ್ ಪಂದ್ಯಾವಳಿ ಅ. 5ರಂದು ಮೊದಲ್ಗೊಳ್ಳುತ್ತದೆ. ಒಟ್ಟು 46 ಪಂದ್ಯ ಗಳನ್ನು ಭಾರತದ 12 ಕೇಂದ್ರಗಳಲ್ಲಿ ಆಡಲಾಗುವುದು. ಇವುಗಳೆಂದರೆ ಅಹ್ಮದಾಬಾದ್, ಚೆನ್ನೈ, ಕೋಲ್ಕತಾ, ಲಕ್ನೋ, ಮುಂಬಯಿ, ರಾಜ್‌ಕೋಟ್, ಬೆಂಗಳೂರು, ಹೊಸದಿಲ್ಲಿ, ಇಂದೋರ್, ಗುವಾಹಟಿ, ಹೈದರಾಬಾದ್ ಮತ್ತು ಧರ್ಮಶಾಲಾ.
Advertisement
ಸುರಕ್ಷಿತ ತಾಣ“ಇದು ಬಿಸಿಸಿಐ ಮತ್ತು ಭಾರತ ಸರಕಾರದ ಆಯ್ಕೆ ಆಗಲಿದೆ. ಸುರಕ್ಷತೆಯ ದೃಷ್ಟಿಯಿಂದ ಪಾಕಿಸ್ಥಾನ ತನ್ನ ಬಹುತೇಕ ಪಂದ್ಯಗಳನ್ನು ಕೋಲ್ಕತಾ ಮತ್ತು ಚೆನ್ನೈಯಲ್ಲಿ ಆಡಲು ಬಯಸ ಬಹುದು. 2016ರ ಟಿ20 ವಿಶ್ವಕಪ್ ವೇಳೆ ಭಾರತ-ಪಾಕಿಸ್ಥಾನ ನಡುವಿನ ಪಂದ್ಯ ಕೋಲ್ಕತಾದಲ್ಲಿ ನಡೆದಿತ್ತು. ಉಳಿದ ಪಂದ್ಯಗಳನ್ನು ಚೆನ್ನೈಯಲ್ಲಿ ಆಡಿತ್ತು. ಇದು ಕೂಡ ಸುರಕ್ಷಿತ ಕೇಂದ್ರವಾಗಿದೆ” ಎಂಬುದಾಗಿ ಐಸಿಸಿಗೆ ತೀರಾ ಹತ್ತಿರವಾಗಿ ರುವ ಮೂಲವೊಂದು ಪಿಟಿಐಗೆ ತಿಳಿಸಿದೆ.
ಭಾರತದೆದುರಿನ 2011ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವನ್ನು ಪಾಕಿಸ್ಥಾನ ಮೊಹಾಲಿಯಲ್ಲಿ ಆಡಿತ್ತು. ಪಾಕ್ ವೀಕ್ಷಕರಿಗೆ ಆಗಮಿಸಲು ಅನುಕೂಲವಾಗಲಿದೆ ಎಂಬುದು ಅಂದಿನ ಲೆಕ್ಕಾಚಾರ ವಾಗಿತ್ತು. ಆದರೆ 2023ರಲ್ಲಿ ಮೊಹಾಲಿ ಯನ್ನು ಕೈಬಿಡಲಾಗಿದೆ.