Advertisement
ನ್ಯೂಜಿಲ್ಯಾಂಡಿನ ತೌರಂಗ ಬೇ ಓವಲ್‌ನಲ್ಲಿ ಈ ಪಂದ್ಯ ನಡೆಯಲಿದೆ. ಎಂಟು ತಂಡಗಳ ರೌಂಡ್ ರಾಬಿನ್ ಮಾದರಿಯ ಈ ಕೂಟದ ಇನ್ನೆರಡು ಪಂದ್ಯಗಳಲ್ಲಿಯೂ ಭಾರತವು ಅರ್ಹತಾ ತಂಡಗಳನ್ನೇ ಎದರಿಸಲಿದೆ. ಈ ಎರಡು ಪಂದ್ಯಗಳು ಸೆಡ್ಡನ್ ಪಾರ್ಕ್ ಮತ್ತು ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ.
Related Articles
ಕಳೆದ ಮಾರ್ಚ್‌ನಲ್ಲಿ ಆಸ್ಟ್ರೇಲಿಯದಲ್ಲಿ ನಡೆದ ಟಿ20 ವಿಶ್ವಕಪ್ ಬಳಿಕ ವನಿತಾ ಏಕದಿನ ವಿಶ್ವಕಪ್ ಜಾಗತಿಕ ಮಟ್ಟದಲ್ಲಿ ನಡೆಯಲಿರುವ ಬೃಹತ್ ಕೂಟವಾಗಿದೆ. ಈ ಕೂಟದಲ್ಲಿ ಬಲಿಷ್ಠ ಎಂಟು ತಂಡಗಳು ಭಾಗವಹಿಸಲಿದ್ದು ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿವೆ. ಪಂದ್ಯಗಳು ಆಕ್ಲಂಡ್, ತೌರಂಗ, ಹ್ಯಾಮಿಲ್ಟನ್, ವೆಲ್ಲಿಂಗ್ಟನ್, ಕ್ರೈಸ್ಟ್‌ಚರ್ಚ್ ಮತ್ತು ಡುನೆಡಿನ್‌ನಲ್ಲಿ ನಡೆಯಲಿವೆ.
Advertisement
ಭಾರತವಲ್ಲದೇ ನ್ಯೂಜಿಲ್ಯಾಂಡ್, ಆಸ್ಟ್ರೇಲಿಯ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ವಿಶ್ವಕಪ್‌ಗೆ ಅರ್ಹತೆ ಗಳಿಸಿವೆ. ಇನ್ನುಳಿದ ಮೂರು ತಂಡಗಳು ಐಸಿಸಿ ಅರ್ಹತಾ ಕೂಟದಿಂದ ಆಯ್ಕೆಯಾಗಲಿವೆ. ಅರ್ಹತಾ ಕೂಟವು ಮುಂದಿನ ವರ್ಷದ ಜೂ. 26ರಿಂದ ಜುಲೈ 10ರ ವರೆಗೆ ಶ್ರೀಲಂಕಾದಲ್ಲಿ ನಡೆಯಲಿದೆ.
ಬಹುಮಾನ ನಿಧಿಈ ಕೂಟವು 5.5 ಮಿಲಿಯನ್ ನ್ಯೂಜಿಲ್ಯಾಂಡ್ ಡಾಲರ್ ಬಹುಮಾನ ನಿಧಿಯನ್ನು ಒಳಗೊಂಡಿದೆ. ಇದು 2017ರ ವಿಶ್ವಕಪ್‌ಗಿಂತ ಶೇ. 70ರಷ್ಟು ಮತ್ತು 2013ರ ವಿಶ್ವಕಪ್‌ಗಿಂತ ಶೇ. ನೂರರಷ್ಟು ಹೆಚ್ಚಾಗಿದೆ. ಎಲ್ಲ ಪಂದ್ಯಗಳನ್ನು ಸ್ಟಾರ್ ಇಂಡಿಯಾ ನೇರ ಪ್ರಸಾರ ಮಾಡಲಿದೆ.