Advertisement

ODI Ranking: 5ನೇ ಸ್ಥಾನಕ್ಕೇರಿದ ಗಿಲ್‌

10:46 PM Aug 09, 2023 | Team Udayavani |

ದುಬಾೖ: ವೆಸ್ಟ್‌ಇಂಡೀಸ್‌ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ನಿರ್ವಹಣೆ ನೀಡಿದ್ದ ಭಾರತ ತಂಡದ ಆರಂಭಿಕ ಆಟಗಾರ ಶುಭ್‌ಮನ್‌ ಗಿಲ್‌ ನೂತನ ಐಸಿಸಿ ಏಕದಿನ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ತನ್ನ ಜೀವನ ಶ್ರೇಷ್ಠ 5ನೇ ಸ್ಥಾನಕ್ಕೇರಿದ್ದಾರೆ.

Advertisement

ಸರಣಿ ನಿರ್ಣಾಯಕ ಪಂದ್ಯದಲ್ಲಿ 85 ರನ್‌ ಸಹಿತ ಒಟ್ಟಾರೆ ಮೂರು ಪಂದ್ಯಗಳಿಂದ 126 ರನ್‌ ಗಳಿ ಸಿದ್ದ ಗಿಲ್‌ 743 ರೇಟಿಂಗ್‌ ಅಂಕ ಗಳೊಂದಿಗೆ ಐದನೇ ಸ್ಥಾನ ಪಡೆದಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ರುವ ಇಮಾಮ್‌ ಉಲ್‌ ಹಕ್‌ (745) ಅವರಿಗಿಂತ ಕೇವಲ ಎರ ಡಂಕ ಕಡಿಮೆ ಹೊಂದಿದ್ದಾರೆ. ಪಾಕಿ ಸ್ಥಾನದ ಬಾಬರ್‌ ಅಜಮ್‌ 886 ಅಂಕ ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಗಿಲ್‌ ಅವರ ಆರಂಭಿಕ ಜತೆಗಾರ ಇಶಾನ್‌ ಕಿಶನ್‌ 9 ಸ್ಥಾನ ಮೇಲಕ್ಕೇರಿ 36ನೇ ಸ್ಥಾನ ಪಡೆದಿದ್ದಾರೆ. ಕಿಶನ್‌ ವೆಸ್ಟ್‌ ಇಂಡೀಸ್‌ ವಿರುದ್ಧದ ಮೂರು ಪಂದ್ಯಗಳಲ್ಲಿ ಅರ್ಧಶತಕ ಹೊಡೆದಿದ್ದರು. ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದ ಅವರು ಒಟ್ಟಾರೆ 184 ರನ್‌ ಹೊಡೆದಿದ್ದರು.

ಬೌಲರ್‌ಗಳ ಪಟ್ಟಿಯಲ್ಲಿ ಕುಲದೀಪ್‌ ಯಾದವ್‌ ಮತ್ತು ಶಾದೂìಲ್‌ ಠಾಕುರ್‌ ಗಮನಾರ್ಹ ಸಾಧನೆ ಮಾಡಿದ್ದಾರೆ. ಮೂರು ಪಂದ್ಯಗಳಿಂದ 7 ವಿಕೆಟ್‌ ಪಡೆದಿರುವ ಕುಲದೀಪ್‌ ಬೌಲರ್‌ಗಳ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದರೆ ಶಾದೂìಲ್‌ ಠಾಕುರ್‌ 30ನೇ ಸ್ಥಾನದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next