Advertisement
ಹೀಗಾಗಿ, ಈ ಬಾರಿಯ ಸ್ವಚ್ಛ ಸರ್ವೇಕ್ಷಣೆಯಲ್ಲಿ ಉತ್ತಮ ರ್‍ಯಾಂಕ್ ಗಳಿಸುವ ಸಾಧ್ಯತೆ ಇದೆ. ರಾಜ್ಯದಲ್ಲಿ ಒಡಿಎಫ್ ಪ್ಲಸ್ ಪ್ಲಸ್ (ಓಪನ್ ಡಿಫಕೇಶನ್ ಫೀ ) ಅನ್ನು ಬೆಂಗಳೂರು ಮತ್ತು ಮೈಸೂರು ಮಾತ್ರ ಗಳಿಸಿದೆ. ಇದು ಸಹ ಸ್ವಚ್ಛ ಸರ್ವೇಕ್ಷಣೆ ಭಾಗವಾಗಿದ್ದು, ಬಿಬಿಎಂಪಿ ಒಡಿಎಫ್ ಪ್ಲಸ್ ಪ್ಲಸ್ ಗೆ ಅರ್ಜಿ ಸಲ್ಲಿಸಿತ್ತು. ಒಡಿಎಫ್ ಪ್ಲಸ್ ಪ್ಲಸ್‌ನ ಮುಖ್ಯ ಮಾನದಂಡವೇ ನಗರದ ಶೌಚಾಲಯಗಳನ್ನು ಅತ್ಯಂತ ಉತ್ತಮ ಮಟ್ಟದಲ್ಲಿ ಶುಚಿತ್ವ ಕಾಪಾಡಿಕೊಳ್ಳುವುದು.
Related Articles
Advertisement
ಮುಂದಿನ ವರ್ಷ ಫೈವ್ ಸ್ಟಾರ್‌ಗೆ ಅರ್ಜಿ: ಮೈಸೂರು ಸ್ವಚ್ಛ ಸ್ವರ್ವೇಕ್ಷಣಾ ಅಭಿಯಾನದ ಸ್ಪರ್ಧೆಯಲ್ಲಿ ಭಾಗವಹಿಸಿ ಪಂಚತಾರಾ (ಫೈವ್ ಸ್ಟಾರ್ ಗಾಬೇಜ್ ಫ್ರೀ ಸಿಟಿ) ಮಾನ್ಯತೆ ಪಡೆದಂತೆ ಬಿಬಿಎಂಪಿಯೂ ಮುಂದಿನ ವರ್ಷ ಫೈವ್ ಸ್ಟಾರ್ ಗಾಬೇಜ್ ಫ್ರೀ ಸಿಟಿ ಮಾನ್ಯತೆಗೆ ಅರ್ಜಿ ಸಲ್ಲಿಸುತ್ತೇವೆ ಎಂದು ಘನತ್ಯಾಜ್ಯ ನಿರ್ವಹಣೆಯ ವಿಶೇಷ ಆಯುಕ್ತ ರಂದೀಪ್ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಪ್ಯಾಕ್ಟರ್‌ಗಳಿಗೆ ಜಿಪಿಎಸ್ ತಂತ್ರಜ್ಞಾನ ಅಳವಡಿಕೆ, ಕಸ ನಿರ್ವಹಣೆಗೆ ಕಂಟ್ರೋಲ್ ರೂಮ್, ಕಸ ಟ್ರ್ಯಾಕಿಂಗ್, ಮನೆ ಮನೆ ಕಸ ಸಂಗ್ರಹಣೆ, ಸ್ಯಾನಿಟೈಸರ್ ವೇಸ್ಟ್ ಪ್ರತ್ಯೇಕ ಸಂಗ್ರಹ ಸೇರಿದಂತೆ ಹಲವು ಸಿದಟಛಿತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಇದೆಲ್ಲವನ್ನು ಅಂತಿಮ ಮಾಡಿಕೊಂಡು ಫೈವ್ ಸ್ಟಾರ್ ಗಾಬೇಜ್ ಫ್ರೀ ಸಿಟಿಗೆ ಅರ್ಜಿ ಸಲ್ಲಿಸುತ್ತೇವೆ ಎಂದು ಆಯುಕ್ತರು ಮಾಹಿತಿ ನೀಡಿದರು.
ಒಡಿಎಫ್ ಪ್ಲಸ್ ಪ್ಲಸ್ ಮಾನದಂಡವೇನು?: ನಗರದ ಸಾರ್ವಜನಿಕ ಹಾಗೂ ಸಮುದಾಯ ಶೌಚಾಲಯ ಗಳು ಸ್ವಚ್ಛವಾಗಿರಬೇಕು. ಏರ್‌ಪ್ರಷನರ್, ಟವೆಲ್, ಸಾಬೂನು, ಮಕ್ಕಳಿಗೆ ಅನುಕೂಲಕರ ಶೌಚಾಲಯ (ಎತ್ತರ), ನ್ಯಾಪ್‌ಕಿನ್, ಕೈ ಬಣಗಿಸುವ ಯಂತ್ರ (ಆಯಂಡ್‌ಡ್ರೆ ಮಿಷಿನ್), ಶೌಚಾಲಯದ ಹೊರ ಪ್ರದೇಶ ರಾತ್ರಿ ವೇಳೆ ಕತ್ತಲಿನಿಂದ ಕೂಡಿರಬಾರದು. ಎಲ್ಲ ಶೌಚಾಲಯಗಳ ಕಟ್ಟಡಗಳು ಸುವ್ಯವಸ್ಥೆಯಲ್ಲಿವೆ ಎಂದು ಪ್ರಮಾಣೀಕರಿಸಿರಬೇಕು ಎನ್ನುವುದು ಸೇರಿದಂತೆ ಹಲವು ಪ್ರಮುಖ ಮಾನದಂಡಗಳ ಮೇಲೆ ಒಡಿಎಫ್ ಪ್ಲಸ್ ಪ್ಲಸ್ ಸಿಗುತ್ತದೆ. ಇದಕ್ಕೆ ನಗರದಲ್ಲಿ ಶೇ 25 ಶೌಚಾಲಯಗಳು ಮೇಲಿನ ಎಲ್ಲ ಮಾನದಂಡ ಹೊಂದಿರಬೇಕು. ಒಡಿಎಫ್ ಪ್ಲಸ್‌ಗೆ ಶೇ 10ರಷ್ಟಾದರೂ ಶೌಚಾಲಯಗಳು ಸ್ವಚ್ಛವಾಗಿರಬೇಕು.