Advertisement
ಜಿಲ್ಲೆಯನ್ನು ಸಂಪೂರ್ಣ ಒಡಿಎಫ್ ಪ್ಲಸ್ -1 ಎಂದು ಘೋಷಣೆ ಮಾಡಲು, ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಶೌಚಾಲಯ ಗಳ ನಿರ್ಮಾಣ, ಬಳಕೆ ಹಾಗೂ ನಿರ್ವಹಣೆ, ಘನತ್ಯಾಜ್ಯ ನಿರ್ವಹಣೆ, ಅಗತ್ಯ ವಿರುವ ಕಡೆ ಸಮುದಾಯ ಶೌಚಾಲಯ ನಿರ್ಮಾಣ ಮತ್ತು ಬಳಕೆ ಈ ಎಲ್ಲ ಅಂಶಗಳು ಅನುಷ್ಠಾನವಾಗಿರುವುದನ್ನು ಪರಿಶೀಲಿಸಲಾಗುತ್ತದೆ.
Related Articles
Advertisement
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ 2.50 ಕೋಟಿ ರೂ ಮೊತ್ತದಲ್ಲಿ, ರಾಜ್ಯದ ಗ್ರಾಮೀಣ ಪ್ರದೇಶದ ಮೊದಲ ಎಂಆರ್‌ಎಫ್ ಘಟಕವು (ಮೆಟೀರಿಯಲ್ ರಿಕವರಿ ಫೆಸಿಲಿಟಿ- ಕೇಂದ್ರೀಕೃತ ಘನ ತ್ಯಾಜ್ಯ ಸಂಸ್ಕರಣ ಘಟಕ) ಕಾರ್ಯಾರಂಭ ಮಾಡುವ ಹಂತದಲ್ಲಿದೆ. ಸುಮಾರು 73 ಸಾವಿರ ಮನೆ ಹಾಗೂ 7,000 ವಾಣಿಜ್ಯ ಘಟಕಗಳ ಘನ ತ್ಯಾಜ್ಯ ಸಂಸ್ಕರಣೆಯನ್ನು ಇಲ್ಲಿ ಮಾಡಲು ಯೋಜನೆ ಸಿದ್ಧಗೊಂಡಿದೆ. ಘಟಕವು ಪ್ರತಿ ನಿತ್ಯ 10 ಟನ್ ತ್ಯಾಜ್ಯ ವಿಲೇವಾರಿಯ ಸಾಮರ್ಥ್ಯವನ್ನು ಹೊಂದಿದೆ.
ಎಫ್ಎಸ್ಎಂ ಪ್ಲಾಂಟ್ :
ಪ್ರಾಯೋಗಿಕವಾಗಿ ಉಡುಪಿ ಜಿಲ್ಲೆಯಲ್ಲಿ 80 ಬಡಗಬೆಟ್ಟು ಹಾಗೂ ಕಾರ್ಕಳ ತಾ|ನ ಕುಕ್ಕುಂದೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಮಲ ತ್ಯಾಜ್ಯ ನಿರ್ವಹಣೆ ಘಟಕ ಆರಂಭ ವಾಗುತ್ತಿದೆ. ಇದರಿಂದಾಗಿ ಸುತ್ತಮುತ್ತಲಿನ ಗ್ರಾ.ಪಂ.ಗಳ ಕುಟುಂಬಗಳಿಗೆ ಅನುಕೂಲವಾಗಲಿದೆ.
ಜಿಲ್ಲೆಯಲ್ಲಿ ಈಗಾಗಲೇ 132ಕ್ಕೂ ಹೆಚ್ಚು ಗ್ರಾ.ಪಂ.ಗಳು ಒಡಿಎಫ್ ಪ್ಲಸ್-1 ಎಂದು ಘೋಷಣೆಯಾಗಿದ್ದು, ಎಲ್ಲ 155 ಗ್ರಾ.ಪಂ.ಗಳನ್ನು ಅ.2ರ ಗಾಂಧೀ ಜಯಂತಿಯಂದು ಒಡಿಎಫ್ ಪ್ಲಸ್ -1 ಎಂದು ಘೋಷಣೆ ಮಾಡುವ ಗುರಿ ಹೊಂದಲಾಗಿದೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಎಲ್ಲ ಗ್ರಾ.ಪಂ.ಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದ್ದು, ಅವಧಿಯೊಳಗೆ ಗುರಿ ಸಾಧಿಸುವಂತೆ ಸೂಚನೆ ನೀಡಲಾಗಿದೆ.– ಡಾ| ನವೀನ್ ಭಟ್, ಜಿ.ಪಂ. ಸಿಇಒ, ಉಡುಪಿ.