Advertisement
“ಬಯಲು ಬಹಿರ್ದೆಸೆ ಮುಕ್ತ’ (ಒಡಿಎಫ್-ಓಪನ್ ಡಿಫಿಕೇಶನ್ ಫ್ರೀ) ಸ್ಥಿತಿಯ ಸುಸ್ಥಿರತೆ ಕಾಪಾಡಲು “ಒಡಿಎಫ್ ಪ್ಲಸ್’ ಹಂತದ ವರೆಗೆ ವಿವಿಧ ಚಟು ವಟಿಕೆಗಳನ್ನು ಅನುಷ್ಠಾನಗೊಳಿಸಬೇಕಿದೆ. ಒಡಿಎಫ್ ಪ್ರಾಥಮಿಕ ಹಂತವಾದರೆ ಅನಂತರ ಒಡಿಎಫ್ ಪ್ಲಸ್-1, ಒಡಿಎಫ್ ಪ್ಲಸ್-2 ಮತ್ತು ಒಡಿಎಫ್ ಪ್ಲಸ್-3 ಹಂತಗಳನ್ನು ಯಶಸ್ವಿಯಾಗಿ ಪೂರೈಸಿದರೆ “ಒಡಿಎಫ್ ಪ್ಲಸ್’ ಮಾನ್ಯತೆ ಲಭಿಸುತ್ತದೆ.
ಒಡಿಎಫ್ ಪ್ಲಸ್-1 ಹಂತದಲ್ಲಿ ಗ್ರಾಮದ ಎಲ್ಲ ಮನೆಗಳಲ್ಲಿ ಕ್ರಿಯಾತ್ಮಕ ಶೌಚಾಲಯ ಇರುವುದು, ಎಲ್ಲ ಶಾಲೆಗಳು, ಅಂಗನವಾಡಿಗಳು, ಪಂಚಾಯತ್ ಕಚೇರಿಗಳಲ್ಲಿ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಕ್ರಿಯಾತ್ಮಕ ಶೌಚಾಲಯ ಇರಬೇಕು. ಘನತ್ಯಾಜ್ಯ ನಿರ್ವಾಹಣೆ ಸೌಲಭ್ಯವಿರಬೇಕು. ಒಡಿಎಫ್ ಪ್ಲಸ್-2 ಹಂತದಲ್ಲಿ ಈ ಸೌಲಭ್ಯಗಳ ಜತೆಗೆ ದ್ರವ ತ್ಯಾಜ್ಯ (ಬ್ಲ್ಯಾಕ್ ವಾಟರ್) ನಿರ್ವಹಣೆ ಸೌಲಭ್ಯವೂ ಇರಬೇಕು. ಒಡಿಎಫ್ ಪ್ಲಸ್ 3 ಹಂತದಲ್ಲಿ ಈ ಹಿಂದಿನ 2 ಹಂತಗಳ ಎಲ್ಲ ಸೌಲಭ್ಯಗಳೊಂದಿಗೆ ಎಲ್ಲ ಸಾರ್ವಜನಿಕ ಸ್ಥಳಗಳು ಕಸ, ಪ್ಲಾಸ್ಟಿಕ್ ತ್ಯಾಜ್ಯ ಮುಕ್ತವಾಗಿರಬೇಕು, ಕೊಳಚೆ ನೀರು, ತ್ಯಾಜ್ಯ ನೀರು ನಿಲ್ಲಬಾರದು, ದ್ರವ ತ್ಯಾಜ್ಯ ನಿರ್ವಹಣೆ (ಕಪ್ಪು ಮತ್ತು ಬೂದು ಬಣ್ಣ) ಸೌಲಭ್ಯ ಕೂಡ ಇರಬೇಕು.
Related Articles
Advertisement
ಕಾಂಪೋಸ್ಟ್ ಪಿಟ್ ಕಡ್ಡಾಯ“ಒಡಿಎಫ್ ಪ್ಲಸ್’ ಮಾನ್ಯತೆ ಪಡೆಯಲು ಘನ ತ್ಯಾಜ್ಯ ಘಟಕದಲ್ಲಿ ಕಾಂಪೋಸ್ಟ್ ಪಿಟ್ (ಗೊಬ್ಬರ ಗುಂಡಿ) ಕೂಡ ಕಡ್ಡಾಯ. ಸಮುದಾಯ ಮಟ್ಟದಲ್ಲಿ ಕಾಂಪೋಸ್ಟ್ ಪಿಟ್‌ಗಳನ್ನು ಹೊಂದಿರದ ಗ್ರಾ.ಪಂ.ಗಳು ಹಾಗೂ ಸ್ವತ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಅನುದಾನ ಲಭ್ಯವಿಲ್ಲದ ಗ್ರಾ.ಪಂ.ಗಳು ನರೇಗಾ ಯೋಜನೆಯಡಿ ಕಾಮಗಾರಿ ನಡೆಸಲು ಸೂಚಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಮುಂದಿನ ಜುಲೈ ಒಳಗೆ “ಒಡಿಎಫ್ ಪ್ಲಸ್-2′ ಬಹುತೇಕ ಪ್ರಕ್ರಿಯೆಗಳು ಪೂರ್ಣಗೊಳ್ಳಲಿದ್ದು, 2023ರ ಜ. 26ರೊಳಗೆ “ಒಡಿಎಫ್ ಪ್ಲಸ್’ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
– ಡಾ| ನವೀನ್ ಭಟ್, ಉಡುಪಿ ಜಿ.ಪಂ. ಸಿಇಒ ದ.ಕ. ಈಗಾಗಲೇ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಘೋಷಣೆಯಾಗಿದೆ. ಶೇ. 80ರಷ್ಟು ಗ್ರಾ.ಪಂ.ಗಳ ಘನತ್ಯಾಜ್ಯ ನಿರ್ವಹಣೆ ಘಟಕ ಇದೆ. ಬಚ್ಚಲು ಮನೆಯ ದ್ರವ ತ್ಯಾಜ್ಯ ವಿಲೇವಾರಿಗೆ ಬಚ್ಚಲು ಗುಂಡಿ ನಿರ್ಮಾಣ ಮಾಡಲಾಗಿದೆ. ಶೀಘ್ರದಲ್ಲೇ “ಒಡಿಎಫ್ ಪ್ಲಸ್’ ಹಂತ ಪೂರ್ಣಗೊಳ್ಳಲಿದೆ.
– ಡಾ| ಕುಮಾರ್, ದ.ಕ. ಜಿ.ಪಂ. ಸಿಇಒ – ಸಂತೋಷ್ ಬೊಳ್ಳೆಟ್ಟು