ಮುಂಬಯಿ: ಒಡೆ ಯರಬೆಟ್ಟು ಮೊಗವೀರ ಸಭಾ ಮುಂಬಯಿ ಇದರ 101 ನೇ ವಾರ್ಷಿಕ ಮಹಾಸಭೆಯು ಜ. 13 ರಂದು ಬೆಳಗ್ಗೆ 10.30 ರಿಂದ ಅಂಧೇ ರಿಯ ಮೊಗವೀರ ಭವನದಲ್ಲಿ ಹೇಮಚಂದ್ರ ಎಸ್. ಕುಂದರ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಈ ಮಹಾಸಭೆಯಲ್ಲಿ ಮುಂಬಯಿ ಮೂರು ವರ್ಷಗಳ ಅವಧಿಗೆ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಗೋವಿಂದ ಎನ್. ಪುತ್ರನ್, ಉಪಾಧ್ಯಕ್ಷರಾಗಿ ಸುಧೀರ್ ಎಸ್. ಪುತ್ರನ್ ಮತ್ತು ಲೋಕ ನಾಥ್ ಜಿ. ಮೈಂದನ್, ಪ್ರಧಾನ ಕಾರ್ಯದರ್ಶಿಯಾಗಿ ಅಶೋಕ್ ಎಸ್. ಸುವರ್ಣ, ಜತೆ ಕಾರ್ಯದರ್ಶಿಯಾಗಿ ಪ್ರಶಾಂತ್ ಡಿ. ಪುತ್ರನ್, ಕೋಶಾ ಧಿಕಾರಿಯಾಗಿ ಪ್ರವೀಣ್ ಕುಮಾರ್ ಕೆ. ಕುಂದರ್ ಅವರು ಆಯ್ಕೆಯಾದರು.
ಸಮಿತಿಯ ಸದಸ್ಯರುಗಳಾಗಿ ಹೇಮಚಂದ್ರ ಎಸ್. ಕುಂದರ್, ಚಂದಪ್ಪ ಎಸ್. ಕರ್ಕೇರ, ನರೇಂದ್ರ ಪಿ. ಸಾಲ್ಯಾನ್, ಚಂದ್ರಶೇಖರ ಕೆ. ದೇವುಜಿ, ವಿಜಯ ಪಿ. ಸಾಲ್ಯಾನ್, ಧನಂಜಯ ಕೆ. ದೇವುಜಿ, ನಾರಾಯಣ ಸಿ. ಕುಂದರ್, ಆಂತರಿಕ ಲೆಕ್ಕಪರಿಶೋಧಕರಾಗಿ ಈಶ್ವರ ಎಸ್. ಪುತ್ರನ್ ಅವರು ನೇಮಕಗೊಂಡರು.
ಪ್ರಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಅಶೋಕ್ ಸುವರ್ಣ ಅವರು ಸ್ವಾಗತಿಸಿ ದೇವತಾ ಪ್ರಾರ್ಥನೆಗೈದು, ಆನಂತರ ಗತ ಮಹಾಸಭೆಯ ಟಿಪ್ಪಣಿ ಮತ್ತು ವಾರ್ಷಿಕ ವರದಿ ವಾಚಿಸಿದರು.
ಜತೆ ಕೋಶಾಧಿಕಾರಿ ಪ್ರವೀಣ್ ಕುಮಾರ್ ಕುಂದರ್ ಅವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಸದಸ್ಯರುಗಳಾದ ದಿವಾಕರ ಕುಂದರ್, ಈಶ್ವರ್ ಪುತ್ರನ್, ನಾರಾಯಣ ಸಿ. ಕುಂದರ್, ಸತೀಶ್ ಮೂಲ್ಯ, ಪ್ರಶಾಂತ್ ಪುತ್ರನ್, ನರೇಂದ್ರ ಸಾಲ್ಯಾನ್ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಅಧ್ಯಕ್ಷ ಹೇಮಚಂದ್ರ ಎಸ್. ಕುಂದರ್ ಅವರು ಮಾತನಾಡಿ, ಸಾಮಾಜಿಕ ಸೇವೆಯಲ್ಲಿ ದೊರೆಯುವ ತೃಪ್ತಿಯೇ ಆರೋಗ್ಯಕ್ಕೆ ಶಕ್ತಿಯನ್ನು ಕೊಡುವಂತದ್ದು. ಆದ್ದರಿಂದ ಯುವಕರು ಸಮಾಜ ಸೇವಾ ಕಾರ್ಯದಿಂದ ವಿಮುಖರಾಗದೆ, ತಮ್ಮನ್ನು ಹೆಚ್ಚು ತೊಡಗಿಸಿಕೊಳ್ಳಬೇಕು. ಒಡೆಯರಬೆಟ್ಟು ಗ್ರಾಮದ ಪ್ರಗತಿಗೆ ಹಿಂದಿನಂತೆ ಎಲ್ಲರೂ ದುಡಿಯಬೇಕು ಎಂದು ನುಡಿದರು. ಅಶೋಕ್ ಸುವರ್ಣ ವಂದಿಸಿದರು.