ಅಧಿಕಾರ ವಹಿಸಿಕೊಂಡ 56ನೇ ವರ್ಧಂತಿ ಪ್ರಯುಕ್ತ ಅ. 24ರಂದು ಧರ್ಮಸ್ಥಳದಲ್ಲಿ ವಿವಿಧ ಕಾರ್ಯ ಕ್ರಮಗಳನ್ನು ಆಯೋಜಿಸಲಾಗಿದೆ.
Advertisement
1968ರ ಅ. 24ರಂದು ಶ್ರೀ ಕ್ಷೇತ್ರದ 21ನೇ ಧರ್ಮಾಧಿಕಾರಿಯಾಗಿ ಅವರು ಪಟ್ಟಾಭಿಷಿಕ್ತರಾದರು. ಚತುರ್ವಿಧ ದಾನಪರಂಪರೆಗೆ ಕಾಲದ ಅದ್ಯತೆಗನುಗುಣ ವಾಗಿ ಹೊಸ ರೂಪ ನೀಡಿ ಕ್ಷೇತ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗೆ ಪಾತ್ರವಾಗಿಸಿದವರು ಅವರು.
ಅ. 24ರಂದು ಬೆಳಗ್ಗೆ ಭಗವಾನ್ ಚಂದ್ರನಾಥ ಸ್ವಾಮಿ ಬಸದಿ ಹಾಗೂ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಜರಗಲಿದೆ. ಗಣ್ಯರು, ಹೆಗ್ಗಡೆಯವರ ಅಭಿಮಾನಿಗಳು, ಕ್ಷೇತ್ರದ ಭಕ್ತರು, ಸಂಘ-ಸಂಸ್ಥೆಯವರು ಹೆಗ್ಗಡೆ ಯವರಿಗೆ ಗೌರವ ಸಲ್ಲಿಸಲಿದ್ದಾರೆ. ಅಭಿನಂದನೆ
ಅ. 24ರ ಸಂಜೆ 5ಕ್ಕೆಮಹೋತ್ಸವ ಸಭಾಭವನದಲ್ಲಿ ಅಭಿನಂದನೆ ಸಮಾರಂಭ ನಡೆಯಲಿದೆ. ಉಜಿರೆ ಎಸ್‌ಡಿಎಂ ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ಹಾಗೂ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್. ಪ್ರಭಾಕರ್ ಅಭಿನಂದನ ಭಾಷಣ ಮಾಡುವರು. ಕ್ಷೇತ್ರದ ಹಿರಿಯ ನೌಕರರನ್ನು ಹಾಗೂ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಸಾಧಕ ವಿದ್ಯಾರ್ಥಿಗಳನ್ನು ಹೆಗ್ಗಡೆ ಸಮ್ಮಾನಿಸುವರು.ಕ್ಷೇತ್ರದ ವತಿಯಿಂದ ಅನುಷ್ಠಾನ ಗೊಳ್ಳಲಿರುವ ಹೊಸ ಯೋಜನೆಗಳನ್ನು ಈ ಸಂದರ್ಭ ಡಾ| ಹೆಗ್ಗಡೆ ಅವರು ಪ್ರಕಟಿಸುವರು.