Advertisement

ಕಪ್ಪೆ ಮುಟ್ಟದ ನೀರಲ್ಲಿದೆ ಆರೋಗ್ಯದ ಗುಟ್ಟು!

01:08 AM Jan 28, 2020 | Sriram |

ಇಂದು ಬದಲಾದ ಹವಾಮಾನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಲೇ ಇರುತ್ತದೆ. ದೇಹದ ಅಧಿಕ ಉಷ್ಣತೆ ಇಂದು ಸಾಮಾನ್ಯ ಸಮಸ್ಯೆಯಾಗಿದ್ದು, ನಿವಾರಣೆಗೆ ಮಾರುಕಟ್ಟೆ ತಂಪು ಪಾನೀಯಗಳ ಮೊರೆ ಹೋಗುತ್ತಿರುವುದು ವಿಪರ್ಯಾಸವೆನ್ನಬಹುದು. ಈ ನಿಟ್ಟಿನಲ್ಲಿ ಕಲ್ಪವೃಕ್ಷದ ತಂಪನೆಯ ಎಳನೀರ ಪ್ರಾಮುಖ್ಯವನ್ನು ನೀವು ಅರಿಯಬೇಕಾಗಿದೆ. ಸ್ವತ್ಛ ನವಿರಾದ ಈ ಎಳನೀರಿನಲ್ಲಿ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಹೇರಳವಾಗಿದ್ದು, ಇದರಿಂದ ಏನೆಲ್ಲ ಉಪಯುಕ್ತತೆ ಇದೆ ಎನ್ನುವುದನ್ನು ಈ ಲೇಖನದಲ್ಲಿ ನೀಡಲಾಗಿದೆ.

Advertisement

ಅಧಿಕ ನೀರಿನಂಶ ಪಡೆಯಿರಿ
ಸಕ್ಕರೆ ಖನಿಜ ಮತ್ತು ಲವಣಾಂಶ ಅಧಿಕವಾಗಿದ್ದು ದೇಹದ ನಿಶ್ಶ‌ಕ್ತಿಯನ್ನು ಹೋಗಲಾಡಿಸಲು ಇದು ಬಹಳ ಉಪಯುಕ್ತವಾಗಿದೆ. ದೇಹವನ್ನು ಕ್ರೀಯಾಶೀಲವಾಗಿರಿಸುವ ನಿಟ್ಟಿನಲ್ಲಿಯೂ ಎಳನೀರು ಉಪಯೋಗಿಸುತ್ತಾರೆ. ಅಧಿಕ ದೈಹಿಕ ಶ್ರಮ ವಹಿಸುವವರಿಗೆ ದೇಹದ ಆಯಾಸವನ್ನು ಕ್ಷಣಮಾತ್ರದಲ್ಲಿ ಕಡಿಮೆ ಮಾಡುವ ಸಾಮರ್ಥ್ಯ ಎಳನೀರು ಅಚ್ಚುಮೆಚ್ಚಂತೆ. ದೇಹದಲ್ಲಿ ನೀರಿನಂಶ ಕಡಿಮೆ ಇದೆ, ತೀವ್ರ ನಿಶ್ಶಕ್ತಿ ಸಮಸ್ಯೆಯಿಂದ ಬಳಲುವವರಿಗೆ ಈ ಪಾನೀಯ ಅಗತ್ಯವಾಗಿದೆ.

ಚರ್ಮದ ತೇವಾಂಶ ಹೆಚ್ಚಿಸಲು
ಅಧಿಕ ತಾಪಮಾನದ ವಾತಾವರಣದಿಂದಾಗಿ ದೇಹದ ನೀರಿನಂಶ ಕಡಿಮೆಯಾಗುತ್ತಿದ್ದು ಇದು ಚರ್ಮದ ತೇವಾಂಶದ ಮೇಲೆ ಸಹ ಪರಿಣಾಮ ಬೀರುತ್ತಿದೆ. ಈ ಕಾರಣದಿಂದಾಗಿ ಶುಷ್ಕ ತ್ವಚೆ ಸಮಸ್ಯೆ ಕಾಡುತ್ತದೆ. ಇದರ ನಿವಾರಣೆಗೆ ಎಳನೀರನ್ನು ನಿಯಮಿತ ಸೇವನೆ ಮಾಡುವುದು ಒಳ್ಳಯದು.

ದೇಹಕ್ಕೆ ಚೈತನ್ಯ ಒದಗಿಸಲು
ಆಹಾರ ಸೇವನೆಯಲ್ಲಿ ನಿಗಾ ವಹಿಸುವುದು ಅತ್ಯಗತ್ಯ. ಇಂದಿನ ಜಂಕ್‌ಫ‌ುಡ್‌ ಬಹುತೇಕ ಸಂದರ್ಭದಲ್ಲಿ ನಮ್ಮನ್ನು ಕ್ರಿಯಾಶೀಲ ಹೀನರನ್ನಾಗಿಸುತ್ತದೆ. ಈ ನಿಟ್ಟಿನಲ್ಲಿ ದೇಹದ ಆರೋಗ್ಯವನ್ನು ಕಾಪಾಡುವುದರೊಂದಿಗೆ ನಮ್ಮನ್ನು ಚಟುವಟಿಕೆಯುಕ್ತರಾಗಿಸಲು ಎಳನೀರು ಮನೆಮದ್ದಿನಂತೆ ಕಾರ್ಯನಿರ್ವಹಿಸುತ್ತದೆ.

ಮೂತ್ರಪಿಂಡದ ಕಲ್ಲು ಕರಗಿಸಲು
ಯೂರಿಕ್‌ ಆಮ್ಲ ಮೂತ್ರಪಿಂಡದಲ್ಲಿ ಕಲ್ಲು ಉಂಟಾದಾಗ ಅದಕ್ಕೆ ಎಳನೀರು ಒಂದು ನೈಸರ್ಗಿಕ ಪೋಷಣೆಯಾಗಿದೆ. ಇದರಲ್ಲಿ ಪೊಟ್ಯಾಶಿಯಂ ಹೇರಳವಾಗಿದ್ದು, ಮೂತ್ರಪಿಂಡಕ್ಕೆ ಕಾರಣವಾಗುವ ಲವಣಾಂಶ ಕರಗಿಸುತ್ತದೆ.

Advertisement

ಮಧುಮೇಹ ನಿಯಂತ್ರಣ
ಎಳನೀರಿನಲ್ಲಿ ಸಕ್ಕರೆ ಮಟ್ಟ ಕಡಿಮೆ ಇರುವುದರಿಂದ ಮಧುಮೇಹಿಗಳು ಇದನ್ನು ನಿಯಮಿತ ಸೇವನೆ ಮಾಡುವುದು ಒಳ್ಳಯದು. ರಕ್ತ ಪರಿಚಲನೆಗೂ ಕೂಡಾ ಉಪಯುಕ್ತವಾಗಿದ್ದು, ಮಧುಮೇಹವನ್ನು ನಿಯಂತ್ರಿಸಬಹುದು.

ಉತ್ತಮ ಜೀರ್ಣಕ್ರಿಯೆಗೆ
ಕ್ಯಾಟಲೇಸ್‌, ಪೆರಾಕ್ಸಿಡೇಸ್‌, ಡಯಾಸ್ಟೇಸ್‌, ಫೋಲಿಕ್‌ ಆಮ್ಲ ಇದರಲ್ಲಿದ್ದು ವಿವಿಧ ಆಹಾರವನ್ನು ಸುಲಭವಾಗಿ ಜೀರ್ಣಿಸಲು ಇದು ಸಹಕಾರಿಯಾಗಿದೆ.

ಸ್ನಾಯು ಸೆಳೆತ ನಿವಾರಣೆಗೆ
ತುಂಬಾ ಹೊತ್ತು ನಿಂತು ಕೆಲಸ ಮಾಡುವುದರಿಂದ ಮತ್ತು ದೇಹ ದಲ್ಲಿ ನೀರಿನಂಶ ಕಡಿಮೆಯಾಗುವು ದರೊಂದಿಗೆ ಸಹಜವಾಗಿಯೇ ಸ್ನಾಯು ಸೆಳೆತಕ್ಕೆ ಕಾರಣವಾಗುತ್ತದೆ. ಅಂತಹ ಸಂದರ್ಭ ಎಳನೀರನ್ನು ಸೇವಿಸುವುದರಿಂದ ಸಮಸ್ಯೆ ನಿವಾರಿಸಿಕೊಳ್ಳಬಹುದು.

 -ರಾಧಿಕಾ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next