Advertisement

ಉದ್ಯಮಿ, ಸಮಾಜ ಸೇವಕ ಸದಾನಂದ ಶೆಟ್ಟಿ ದಂಪತಿಗೆ ಸಮ್ಮಾನ

04:43 PM Apr 22, 2018 | |

ಪುಣೆ: ಮೂಡಬಿದಿರೆಯ ಮಾರ್ಪಾಡಿ  ಹುಗ್ಗುಗುತ್ತು  ಮನೆತನದ  ಸದಾನಂದ ಕೆ. ಶೆಟ್ಟಿ ಮತ್ತು ಎಲ್ಲೂರಿನ ಎಲ್ಲೂರುಗುತ್ತು ಮನೆತನದವರಾದ  ಇಂದಿರಾ ಎಸ್‌. ಶೆಟ್ಟಿ ದಂಪತಿಯನ್ನು ಪುಣೆ ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ  ವಜ್ರಮಾತ ಮಹಿಳಾ  ವಿಕಾಸ ಕೇಂದ್ರ ಪುಣೆ  ಇವರ ವತಿಯಿಂದ ಅದ್ದೂರಿಯಾಗಿ ಸಮ್ಮಾನಿಸಲಾಯಿತು.

Advertisement

ಎ. 18 ರಂದು ಪುಣೆಯ ಹಿಂಜೆವಾಡಿಯ ಕೋರ್ಟ್‌ಯಾರ್ಡ್‌  ಮ್ಯಾರಿಯಟ್‌  ಹೊಟೇಲ್‌ ಸಭಾಂಗಣದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಉದ್ಯಮಿ, ಸಮಾಜ ಸೇವಕ, ಮಹಾದಾನಿ ಸದಾನಂದ ಕೆ. ಶೆಟ್ಟಿ ದಂಪತಿಯನ್ನು ಅವರ  ವೈವಾಹಿಕ ಜೀವನದ   50 ನೇ ವಾರ್ಷಿಕೋತ್ಸವದ ಅಂಗವಾಗಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ, ಅಭಿನಂದಿಸಿ ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಪುಣೆ ಶ್ರೀ ಗುರುದೇವ ಸೇವಾ ಬಳಗದ ಮಾಜಿ ಅಧ್ಯಕ್ಷ, ಸಲಹೆಗಾರ ನಾರಾಯಣ ಕೆ. ಶೆಟ್ಟಿ, ಕಾರ್ಯದರ್ಶಿ ನಗ್ರಿಗುತ್ತು ರೋಹಿತ್‌ ಶೆಟ್ಟಿ, ಉಪಾಧ್ಯಕ್ಷರಾದ ಪ್ರಭಾಕರ ಶೆಟ್ಟಿ  ತಮನ್ನಾ, ಜಯ ಶೆಟ್ಟಿ ಹಡಪ್ಸರ್‌, ಕೋಶಾಧಿಕಾರಿ ರಂಜಿತ್‌ ಶೆಟ್ಟಿ, ಪ್ರಮುಖರಾದ ಪ್ರವೀಣ್‌ ಶೆಟ್ಟಿ ಪುತ್ತೂರು, ಆನಂದ ಶೆಟ್ಟಿ ಹಡಪ್ಸರ್‌, ನಾಗರಾಜ್‌ ಶೆಟ್ಟಿ, ಸುರೇಶ್‌ ಶೆಟ್ಟಿ, ಸತೀಶ್‌ ರೈ ಕಲ್ಲಂಗಳಗುತ್ತು, ಪ್ರದೀಪ್‌ ಶೆಟ್ಟಿ, ವಿಟuಲ್‌ ಶೆಟ್ಟಿ ಪೂನಾ ಕೆಫೆ, ಶೇಖರ್‌ ಶೆಟ್ಟಿ, ಉಮೇಶ್‌   ಶೆಟ್ಟಿ ನಿಂಜೂರು, ಬಾಲಕೃಷ್ಣ ಶೆಟ್ಟಿ, ಜಗದೀಶ್‌ ಹೆಗ್ಡೆ, ಹರೀಶ್‌ ಮೂಡಬಿದ್ರಿ, ವಸಂತ್‌ ಶೆಟ್ಟಿ, ರವಿ ಶೆಟ್ಟಿ, ರವಿಂದ್ರ ಶೆಟ್ಟಿ, ಪ್ರತ್ವಿಶ್‌ ಶೆಟ್ಟಿ,  ಮಹಿಳಾ ವಿಭಾಗದ ಪ್ರಮುಖರಾದ ವೀಣಾ ಪಿ. ಶೆಟ್ಟಿ, ಸುಧಾ ಎನ್‌. ಶೆಟ್ಟಿ, ಪುಷ್ಪಾ ಪೂಜಾರಿ, ವೀಣಾ ಡಿ. ಶೆಟ್ಟಿ, ಸುಮನಾ ಎಸ್‌. ಹೆಗ್ಡೆ, ರಜನಿ ಹೆಗ್ಡೆ, ಆಶಾ ಪಿ. ಶೆಟ್ಟಿ, ಮಲ್ಲಿಕಾ ಎ. ಶೆಟ್ಟಿ, ಸರೋಜಿನಿ ಜೆ. ಶೆಟ್ಟಿ, ಸ್ನೇಹಲತಾ ಅರ್‌. ಶೆಟ್ಟಿ,  ಸೋನು ಎಸ್‌. ಶೆಟ್ಟಿ, ಶ್ವೇತಾ ಎಚ್‌. ಮೂಡಬಿದ್ರಿ, ಸ್ನೇಹಲ್‌ ಪಿ. ಶೆಟ್ಟಿ, ಮಕ್ಕಳು  ಮತ್ತು ಸದಸ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ  ಸದಾನಂದ ಕೆ. ಶೆಟ್ಟಿ ದಂಪತಿಗಳ  ಮಕ್ಕಳಾದ ಡಾ| ಜ್ಯೋತಿ ಎ. ಶೆಟ್ಟಿ, ಡಾ| ಕೃಪಾ ವಿ. ಶೆಟ್ಟಿ, ವಿಶ್ವಪಾಲ್‌ ಎಸ್‌. ಶೆಟ್ಟಿ, ವಿಕ್ರಮ್‌ ರಾಜ್‌  ಎಸ್‌. ಶೆಟ್ಟಿ, ಅಳಿಯಂದಿರಾದ ಅರವಿಂದ್‌ ಎಚ್‌. ಶೆಟ್ಟಿ, ಡಾ| ವಿಶ್ವನಾಥ್‌ ಎಚ್‌. ಕೆ. ಮೊಮ್ಮಕ್ಕಳಾದ ಅಂಕಿತ್‌ ಎ. ಶೆಟ್ಟಿ, ಶಾಶ್ವತ್‌ ವಿ. ಶೆಟ್ಟಿ, ಶೌರಿ ವಿ. ಶೆಟ್ಟಿ, ರಿತಿಕಾ ವಿ. ಶೆಟ್ಟಿ, ವಂಶ್‌ ವಿ. ಶೆಟ್ಟಿ, ತನಯ್‌ ವಿ. ಶೆಟ್ಟಿ ಅವರು ಉಪಸ್ಥಿತರಿದ್ದರು.

ಬಂಟ ಸಮಾಜದ ಹಿರಿಯರಾದ ಮೂಡಬಿದ್ರಿ ಮಾರ್ಪಾಡಿ ಹುಗ್ಗುಗುತ್ತುವಿನ ಸದಾನಂದ ಕೆ. ಶೆಟ್ಟಿ ಅವರು ತನ್ನ ಸ್ವಂತ ಬಲದಿಂದ  ಯಶಸ್ವಿ ಉದ್ಯಮಿಯಾಗಿ ಮುಂಬಯಿ ಮತ್ತು ಪುಣೆಯಲ್ಲಿ ಹೆಸರು ಮಾಡಿದವರು. ಸದಾನಂದ ಕೆ. ಶೆಟ್ಟಿ  ಅವರು ಕೈಗೊಂಡ ಎಲ್ಲಾ ಕಾರ್ಯಗಳಲ್ಲೂ ಯಶಸ್ಸನ್ನು ಕಂಡವರು. ಹೊಟೇಲ್‌  ಉದ್ಯಮದಲ್ಲಿ ಪ್ರಗತಿಯನ್ನು ಸಾಧಿಸಿ, ಕಾಯಕವೇ ಕೈಲಾಸ ಎಂಬುವುದನ್ನು  ಎತ್ತಿ ತೊರಿಸಿದವರು. ಕಠಿನ ಪರಿಶ್ರಮದೊಂದಿಗೆ ದೃಢತೆಯ ನಿಲುವಿನೊಂದಿಗೆ, ತಾನು ಯೋಚಿಸಿದ, ಕೈಗೊಂಡ ಕಾರ್ಯದಲ್ಲಿ ನೂರರಷ್ಟು ಸಂತೃಪ್ತಿಯನ್ನು ಕಂಡವರು. ಸತತ ಪರಿಶ್ರಮ, ಏಕಾಗ್ರತೆ ಇವರ ಯಶಸ್ಸಿನ ಗುಟ್ಟಾಗಿದೆ.

Advertisement

ನೇರ ನಡೆ-ನುಡಿಯ ಇವರು   ಉದ್ಯಮ ಕ್ಷೇತ್ರದಲ್ಲಿ ಕೆಲಸಗಾರರಿಗೆ ಉತ್ತಮ ಮಾಲಕರಾಗಿ, ಮನೆಯಲ್ಲಿ ತಂದೆಗೆ ತಕ್ಕ ಮಗನಾಗಿ, ಹೃದಯ ಶ್ರೀಮಂತಿಕೆಯೊಂದಿಗೆ  ಹೆಂಡತಿಗೆ  ಉತ್ತಮ ಗಂಡನಾಗಿ,  ಉತ್ತಮ ಸಂಸ್ಕಾರ, ಶಿಸ್ತುಬದ್ಧವಾಗಿ ಶಿಷ್ಟವಂತರನ್ನಾಗಿ ಮಾಡಿದ  ಮಕ್ಕಳಿಗೆ ಪ್ರೀತಿಯ ತಂದೆಯಾಗಿ, ಅಳಿಯ, ಸೊಸೆಯಂದಿರಿಗೆ ಹೆಮ್ಮೆಯ ಮಾವನಾಗಿ, ಮೊಮ್ಮಕ್ಕಳಿಗೆ ಪ್ರೀತಿಯ ಅಜ್ಜನಾಗಿ, ಪತ್ನಿಯೊಂದಿಗಿನ ತಮ್ಮ ಆದರ್ಶದ ಬದುಕಿನ  ವೈವಾಹಿಕ ದಾಂಪತ್ಯ ಜೀವನದ ಸುವರ್ಣ ಮಹೋತ್ಸವದ ಸ್ಮರಣಿಯ ದಿನವನ್ನು ಸಾವಿರಾರು ಸಂಖ್ಯೆಯಲ್ಲಿ ನೆರೆದ ಅಭಿಮಾನಿಗಳ ಉಪಸ್ಥಿತಿಯಲ್ಲಿ  ಆಚರಿಸಿಕೊಂಡಿರುವುದು ಅವರ ಆದರ್ಶ ಜೀವನಕ್ಕೆ ಸಾಕ್ಷಿಯಾಗಿದೆ.

ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಲಾ ಸೇವೆಗಳಲ್ಲಿ ತನ್ನನು ತೊಡಗಿಸಿಕೊಂಡು ದಾನಿಯಾಗಿ, ಮಾರ್ಗದರ್ಶಕರಾಗಿ, ಹಲವಾರು ಸಂಘ ಸಂಸ್ಥೆಗಳು, ಧಾರ್ಮಿಕ ಕ್ಷೇತ್ರಗಳು, ವಿದ್ಯಾ ಕ್ಷೇತ್ರಗಳಿಗೆ,  ಕಲಾಸೇವಾ ಸಂಸ್ಥೆಗಳಿಗೆ ಸಹಾಯ ಹಸ್ತವನ್ನು ನೀಡಿ ಸೇವಾ ಮನೋಭಾವವನ್ನು ಮೆರೆದಿದ್ದಾರೆ. ಪ್ರಸ್ತುತ ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷರಾಗಿರುವ ಸದಾನಂದ ಶೆಟ್ಟಿ ಅವರು ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷರಾಗಿ ಉತ್ತಮ ಸೇವೆಗೈದಿ¨ªಾರೆ.

ಇತ್ತೀಚೆಗೆ ಲೋಕಾರ್ಪಣೆಗೊಂಡ ಪುಣೆ ಬಂಟರ ಸಂಘಕ್ಕೆ ಬಹಳ ದೊಡ್ಡ ಮಟ್ಟದ ದೇಣಿಗೆಯನ್ನು ನೀಡಿ ಬಂಟ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿ¨ªಾರೆ. ಅವರ ವಿವಿಧ ಕ್ಷೇತ್ರಗಳ ಸೇವೆಯನ್ನು ಪರಿಗಣಿಸಿ ಗಣ್ಯರ ಸಮ್ಮುಖದಲ್ಲಿ ಸಮ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅವರ ಸಿದ್ಧಿ-ಸಾಧನೆಗಳನ್ನು ಪರಿಗಣಿಸಿ ಮುಂಬಯಿ, ಪುಣೆ,  ಊರಿನ ಹಲವಾರು ಸಂಘ ಸಂಸ್ಥೆಗÙ+‌ು ಅವರನ್ನು ಸಮ್ಮಾನಿಸಿ, ಗೌರವಿಸಿವೆ. 

ಚಿತ್ರ-ವರದಿ : ಹರೀಶ್‌ ಮೂಡಬಿದ್ರಿ ಪುಣೆ.

Advertisement

Udayavani is now on Telegram. Click here to join our channel and stay updated with the latest news.

Next