Advertisement
ಉದ್ಘಾಟನ ಸಮಾರಂಭದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು, ಉಡುಪಿ ಬಿಷಪ್ ರೆ|ಫಾ| ಡಾ| ಜೆರಾಲ್ಡ್ ಐಸಾಕ್ ಲೋಬೊ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
Related Articles
Advertisement
ಆಧುನಿಕ ವಾಸ್ತು ಶೈಲಿಯನ್ನು ಒಳಗೊಂಡಿರುವ ಹೊಟೇಲ್‌ನಲ್ಲಿ ದಕ್ಷಿಣ ಹಾಗೂ ಉತ್ತರ ಭಾರತದ ಆಹಾರ ಖಾದ್ಯ, ಕಾಂಟಿನೆಂಟಲ್, ಚೈನೀಸ್ ಆಹಾರ ಉತ್ಪನ್ನಗಳನ್ನು ಹೊಂದಿರುವ “ಕೋರಲ್’ ರೆಸ್ಟೋರೆಂಟ್, ಜಾಸ್ ನ್ಪೋರ್ಟ್ಸ್ ಬಾರ್ ಮತ್ತು ಜಾಸ್ ಎಕ್ಸಿಕ್ಯೂಟಿವ್ ಲಾಂಜ್‌ಗಳಿವೆ. ವಿವಿಧ ಬಗೆಯ ಪ್ರಾದೇಶಿಕ ಆಹಾರ ಉತ್ಪನ್ನಗಳು ಇಲ್ಲಿನ ಮತ್ತೂಂದು ವಿಶೇಷತೆ.
ಸಂಸ್ಥೆಯ ಅಧ್ಯಕ್ಷ ಜಯರಾಮ ಬನಾನ್, ಉಪಾಧ್ಯಕ್ಷ ಶಿವಕುಮಾರ್ ಎನ್., ಪ್ರಧಾನ ವ್ಯವಸ್ಥಾಪಕ ಪ್ರಶಾಂತ್ ಆಚಾರ್ಯ, ಟೈಮ್ಸ್ ಸ್ಕ್ವೇರ್ ಮಾಲ್‌ನ ಮಾಲಕ ಡಾ| ಜೆರ್ರಿ ವಿನ್ಸೆಂಟ್ ಡಯಾಸ್, ಮಾಂಡವಿ ಬಿಲ್ಡರ್ನ ಗ್ಲೆನ್ ಡಯಾಸ್, ಜೇಸನ್ ಡಯಾಸ್ ಉಪಸ್ಥಿತರಿದ್ದರು.
ಗುಣಮಟ್ಟದ ಸೇವೆಗೆ ಪ್ರಸಿದ್ಧಿಉದ್ಯಮಿ ಜಯರಾಮ್ ಬನಾನ್ ಅವರು “ಸಾಗರ ರತ್ನ’, “ಶ್ರೀರತ್ನ’ ಮತ್ತು “ಸ್ವಾಗತ್’ ಎಂಬ ರೆಸ್ಟೋರೆಂಟ್‌ಗಳನ್ನು ಹೊಂದಿದ್ದು, ದಿಲ್ಲಿ, ಉತ್ತರ ಭಾರತದಾದ್ಯಂತ “ಸಾಗರ ರತ್ನ’ ಹೆಸರಿನ ವೆಜ್, “ಸ್ವಾಗತ್’ ಹೆಸರಿನ ನಾನ್‌ವೆಜ್ ರೆಸ್ಟೋರೆಂಟ್ ಮತ್ತು ಇಂಡಸ್ಟ್ರಿಯಲ್ ಕ್ಯಾಂಟೀನ್‌ಗಳನ್ನು ನಡೆಸುತ್ತಿದ್ದಾರೆ. ಸಂಸ್ಥೆಯ ಸಾಗರ್ ಹಾಗೂ ಸ್ವಾಗತ್ ರೆಸ್ಟೋರೆಂಟ್‌ಗಳು ದಿಲ್ಲಿ ಸಹಿತ ಉತ್ತರ ಭಾರತದಲ್ಲಿ ಜನಪ್ರಿಯಗೊಂಡಿವೆ. ಓಷಿಯನ್ ಪರ್ಲ್ ಹೊಟೇಲ್ ಮಂಗಳೂರು, ಉಡುಪಿ, ಉಜಿರೆ, ಹುಬ್ಬಳ್ಳಿಗಳಲ್ಲೂ ಗ್ರಾಹಕರ ಮೆಚ್ಚುಗೆ ಗಳಿಸಿದೆ.