Advertisement
ಒಬ್ಬ ವ್ಯಕ್ತಿ ತನ್ನ ಜೀವನದ ಸರಾಸರಿ ಅವಧಿಯಲ್ಲಿ 26 ವರ್ಷ(ಮೂರನೇ ಒಂದು ಭಾಗ)ಗಳನ್ನು ನಿದ್ರೆ ಯಲ್ಲಿ ಕಳೆಯುತ್ತಾನೆ. ನಿದ್ರೆಯಿಂದ ವಿಶ್ರಾಂತಿ ಪಡೆ ಯುವುದರೊಂದಿಗೆ ದೇಹವು ಸಮತೋಲನ ಹೊಂದುತ್ತದೆ. ಆದರೆ, ಬಹುತೇಕರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವುದನ್ನು ಕಂಡು ವೈಜ್ಞಾನಿಕವಾಗಿ ನಿದ್ರೆ ಮತ್ತು ನಿದ್ರಾಹೀನತೆಯ ಪ್ರಾಮುಖ್ಯಯನ್ನು ಸಾರ್ವಜನಿಕರಲ್ಲಿ ಅರಿವು ಮೂಡಿ ಸುವ ಉದ್ದೇಶದಿಂದ ವಿಶ್ವ ನಿದ್ರಾ ಸೊಸೈಟಿಯ ವಿಶ್ವ ನಿದ್ರಾ ದಿನ ಸಮಿತಿಯು 2008 ರಿಂದ ಮಾ.17ರಂದು “ವಿಶ್ವ ನಿದ್ರಾ ದಿನ’ವನ್ನಾಗಿ ಆಚರಿಸಲಾಗುತ್ತಿದೆ.
Related Articles
Advertisement
ನಿಯಮಿತ ನಿದ್ರೆಯ ಸಮಯಚಕ್ರವನ್ನು ಇಟ್ಟುಕೊಂಡು, ವಾರಾಂತ್ಯ ಸೇರಿದಂತೆ ಎಲ್ಲಾ ದಿನಗಳಲ್ಲಿಯೂ ಅದನ್ನು ಅನುಸರಿಸಬೇಕು.
ಮಲಗುವ ಮುನ್ನ ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ನಿಲ್ಲಿಸಿ ಮತ್ತು ಮೊಬೈಲ್ ಸೈಲೆಂಟ್ ಮಾಡಬೇಕು. ರಾತ್ರಿ ವೇಳೆ ಕೆಫಿನ್ ಸೇವನೆ ಮಿತಗೊಳಿಸಿ.
ವಿಟಮಿನ್ ಬಿ 6 ಹೊಂದಿರುವ ಪೂರಕಗಳು ನಿಮ್ಮ ಮನಸ್ಸನ್ನು ವಿಶ್ರಾಂತಿ ಮಾಡುತ್ತದೆ ಮತ್ತು ನಿದ್ರಿಸಲು ಸಹಾಯ ಮಾಡುತ್ತದೆ.
ನಿಗದಿತ ಸಮಯ, ನಿರಂತರತೆ ಮತ್ತು ಆಳವಾದ ನಿದ್ರೆ ಅಭ್ಯಾಸ ಮಾಡಿಕೊಳ್ಳಿ.
ಮಲಗುವ ಮುನ್ನ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ.
ಶಾಲಾವಧಿ ಕಡಿತದಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕ : ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ನಡೆಸಿದ ಸಮೀಕ್ಷೆ ಪ್ರಕಾರ ಬೆಳಗ್ಗೆ ಒಂದು ಗಂಟೆ ತಡವಾಗಿ ಶಾಲಾ ತರಗತಿಗಳನ್ನು ಪ್ರಾರಂಭಿಸಿದ್ದರಿಂದ, ಮಕ್ಕಳು ಪರೀಕ್ಷೆಯಲ್ಲಿ ಶೇ.15ರಷ್ಟು ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ ಎಂದು ವರದಿಯಾಗಿದೆ.
ನಿದ್ರೆಯು ನಮ್ಮ ದೇಹ ಮತ್ತು ಆರೋಗ್ಯಕ್ಕೆ ಅತ್ಯಗತ್ಯವಾಗಿದ್ದು, ಬಹುತೇಕರು ಇಂದಿನ ಕಳಪೆ ಜೀವನ ಶೈಲಿ, ಮಾನಸಿಕ ಒತ್ತಡವೇ ನಿದ್ರಾಹೀನತೆಗೆ ಪ್ರಮುಖ ಕಾರಣಗಳು. ಆದ್ದರಿಂದ ಉತ್ತಮ ಆಹಾರ ಮತ್ತು ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಅನಗತ್ಯ ವಿಚಾರಗಳಿಂದ ದೂರವಿರಬೇಕು. – ಡಾ. ವಸುನೇತ್ರ ಕಾಸರಗೋಡು, ಮಣಿಪಾಲ್ ಆಸ್ಪತ್ರೆಯ ಪಲ್ಮನಾಲಜಿ ಸಮಾಲೋಚಕರು