Advertisement

ಅನಗತ್ಯ ವಾಹನಗಳ ಓಡಾಟಕ್ಕೆ ತಡೆ; ದಿಢೀರ್‌ ಕಾರ್ಯಾಚರಣೆ

10:50 PM Apr 17, 2020 | Sriram |

ಉಡುಪಿ: ನಗರದಲ್ಲಿ ಅನಗತ್ಯವಾಗಿ ವಾಹನದಲ್ಲಿ ಓಡಾಡುತ್ತಿರುವವರಿಗೆ ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ನೇತೃತ್ವದಲ್ಲಿ ಉಡುಪಿ ಭಾಗದ ಕಲ್ಸಂಕ, ಕಲ್ಮಾಡಿ, ಮಲ್ಪೆ ಭಾಗದಲ್ಲಿ ಶುಕ್ರವಾರ ಸಂಜೆ ದಿಢೀರ್‌ ಕಾರ್ಯಚರಣೆ ನಡೆಸಲಾಯಿತು.

Advertisement

ಲಾಕ್‌ಡೌನ್‌ನನ್ನು ಮೇ 3ರ ವರೆಗೂ ವಿಸ್ತರಣೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಬೆಳಗ್ಗೆ 7ರಿಂದ 11 ಗಂಟೆ ವರೆಗೆ ಅಂಗಡಿ ಮುಂಗಟ್ಟುಗಳನ್ನು ತೆರೆಯುವ ಅವಕಾಶ ನೀಡಿ ಈ ಅವಧಿಯ ಮಾತ್ರ ಜನರ ಓಡಾಟಕ್ಕೆ ಅವಕಾಶ ನೀಡಿಲಾಗಿದೆ.

ಇದಾಗಿಯೂ ನಗರದಲ್ಲಿ ಗೊತ್ತುಪಡಿಸಿದ ಅವಧಿಯ ಬಳಿಕವೂ ವಾಹನಗಳು ಓಡಾಡುತ್ತಿರುವ ಬಗ್ಗೆ ಮಾಹಿತಿ ತಿಳಿದು ಜಿಲ್ಲಾಧಿಕಾರಿ ಜಿ.ಜಗದೀಶ್‌, ಎಸ್ಪಿ ಎನ್‌. ವಿಷ್ಣುವರ್ಧನ್‌ ಅವರು ಖುದ್ದಾಗಿ ಕಲ್ಸಂಕ, ಕಲ್ಮಾಡಿ, ಮಲ್ಪೆ ಭಾಗದಲ್ಲಿ ಹಾದುಬರುವ ಮಾರ್ಗಗಳಲ್ಲಿ ತಪಾಸಣೆ ಮಾಡಿದರು. ಪಾಸ್‌ ಇಲ್ಲದೆ ಸುಮ್ಮನೆ ಓಡಾಡುತ್ತಿದ್ದ ವಾಹನಗಳನ್ನು ಸೀಜ್‌ ಮಾಡಿ ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಪ ಪ್ರಚಾರ ಮಾಡಿ ಜನರನ್ನು ದಾರಿತಪ್ಪಿಸುವ ಮನೋಭಾವ ಬೇಡ.ಜಿಲ್ಲೆ ಆರೇಂಜ್‌ ಪಟ್ಟಿಯಲ್ಲಿದೆ. ಅಕ್ಕಪಕ್ಕದ ಜಿಲ್ಲೆಗಳಲ್ಲಿ ಕೋವಿಡ್ 19 ಕೇಸ್‌ಗಳು ದಾಖಲಾಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಹೆಚ್ಚು ಜಾಗರೂಕತೆ ಮಾಡಬೇಕಾಗಿದೆ ಎಂದರು.

ಬೆಳಗಾಂ, ಬಿಜಾಪುರದಲ್ಲಿ ಆರಂಭದ ಹಂತದಲ್ಲಿ ಯಾವುದೇ ಕೋವಿಡ್ 19 ಪ್ರಕರಣಗಳಿರಲಿಲ್ಲ. ಅನಂತರ ಅನೇಕ ಪ್ರಕರಣಗಳು ದಾಖಲಾಗಿದೆ. ಹಾಗಾಗಿ ನಮ್ಮ ಜಿಲ್ಲೆಯಲ್ಲೂ ಇಷ್ಟು ಬೇಗ ಸುರಕ್ಷಿತ ಎಂದು ಘೋಷಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಜನ ಮನೆಯಲ್ಲೆ ಇದ್ದು ಸಹಕರಿಸಬೇಕು ಎಂದರು.

Advertisement

550 ವಾಹನಗಳ ವಶ
ಲಾಕ್‌ಡೌನ್‌ ಆದಂದಿನಿಂದ ಇಲ್ಲಿಯ ವರೆಗೆ 550ಕ್ಕೂ ಹೆಚ್ಚಿನ ವಾಹನಗಳನ್ನು ವಶಪಡಿಸಲಾಗಿದೆ. ಕೆಲವರು ಸ್ಥಳೀಯವಾಗಿ ಔಷಧಗಳು ಲಭ್ಯವಿದ್ದರೂ ಕಿಲೋಮೀಟರ್‌ ದೂರ ಬಂದು ಔಷಧ ಖರೀದಿಸಿ ಸುತ್ತಾಡುತ್ತಿದ್ದಾರೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಸೂಚಿಸಲಾಗಿದೆ. ದ್ವಿಚಕ್ರ ವಾಹನಗಳಲ್ಲಿ 1 ಮತ್ತು ಕಾರುಗಳಲ್ಲಿ ಚಾಲಕ ಹಾಗೂ ಹಿಂಬದಿಯಲ್ಲಿ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದನ್ನು ಹೊರತು ಪಡಿಸಿ ಜನ ಸಂಚಾರಿಸಿದರೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ವಿಷ್ಣುವರ್ಧನ್‌ ತಿಳಿಸಿದರು.

ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರ ಚಂದ್ರ, ಡಿವೈಎಸ್ಪಿ ಜಯಶಂಕರ್‌, ಉಡುಪಿ ಪೊಲೀಸ್‌ ವೃತ್ತ ನಿರೀಕ್ಷಕ ಮಂಜುನಾಥ್‌, ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌, ನಗರ ಸಂಚಾರ ಠಾಣೆಯ ಉಪನಿರೀಕ್ಷಕ ಅಬ್ದುಲ್‌ ಖಾದರ್‌, ಪೊಲೀಸ್‌ ಸಿಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next