Advertisement

ಸಂಸದೆ ಪ್ರಜ್ಞಾ ಠಾಕೂರ್‌ಗೆ ಅಶ್ಲೀಲ ಸಂದೇಶ

09:06 PM Feb 07, 2022 | Team Udayavani |

ಭೋಪಾಲ್‌: ಭೋಪಾಲ್‌ ಲೋಕಸಭಾ ಸದಸ್ಯೆ ಪ್ರಜ್ಞಾ ಸಿಂಗ್‌ ಠಾಕೂರ್‌ಗೆ ಅಶ್ಲೀಲ ವಿಡಿಯೋ ಮತ್ತು ಸಂದೇಶ ಕಳುಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಪರಿಚಿತರ ವಿರುದ್ಧ ಕೇಸು ದಾಖಲಿಸಲಾಗಿದೆ.

Advertisement

ಇದೇ ವಿಚಾರಕ್ಕೆ ಸಂಬಂಧಿಸಿ ಸಂಸದೆ ಪ್ರಜ್ಞಾ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸ್‌ ಅಧಿಕಾರಿ ನೀಡಿದ ಮಾಹಿತಿ ಪ್ರಕಾರ ಅನಾಮಧೇಯ ಸಂಖ್ಯೆಯಿಂದ ಸಂಸದೆಗೆ ಅಶ್ಲೀಲ ಸಂದೇಶ ಮತ್ತು ವಿಡಿಯೋ ಬಂದಿತ್ತು. ಆರಂಭದಲ್ಲಿ ಸಂಸದರ ಮೊಬೈಲ್‌ಗೆ ಕರೆ ಮಾಡಲಾಗಿತ್ತು. ಅವರು ಅದನ್ನು ಅರ್ಧಕ್ಕೇ ನಿಲ್ಲಿಸಿದ ಬಳಿಕ ಸಂದೇಶ ಮತ್ತು ವಿಡಿಯೋ ಬಂದಿತ್ತು.

ಇದನ್ನೂ ಓದಿ:ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನ ಮತ್ತೆ ಬಂದ್ ಆಗುತ್ತಾ ? ಭಕ್ತರು, ವ್ಯಾಪಾರಸ್ಥರಲ್ಲಿ ಆತಂಕ

ಇದು ತಮ್ಮ ವರ್ಚಸ್ಸಿಗೆ ಧಕ್ಕೆ ತರಲು ಮಾಡಿದ ಪ್ರಯತ್ನ ಎಂದು ಪ್ರಜ್ಞಾ ಠಾಕೂರ್‌ ಆರೋಪಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next