Advertisement

ಮದ್ಯದಂಗಡಿ ತೆರೆಯದಂತೆ ಆಗ್ರಹ

05:42 PM Mar 17, 2022 | Shwetha M |

ಇಂಡಿ: ಸಾಲೋಟಗಿ ಗ್ರಾಮದಲ್ಲಿ ಮದ್ಯದ ಅಂಗಡಿ (ಎಂಎಸ್‌ಐಎಲ್‌) ತೆರೆಯದಂತೆ ಒತ್ತಾಯಿಸಿ ಸಾಲೋಟಗಿ ಗ್ರಾಮದ ಶಾಲಾ ವಿದ್ಯಾರ್ಥಿಗಳು, ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಿದರು.

Advertisement

ಈ ವೇಳೆ ಸಾಲೋಟಗಿ ಗ್ರಾಮದ ಯುವ ಮುಖಂಡ ಕಲ್ಲಯ್ಯ ಹಿರೇಪಟ್ಟ ಹಾಗೂ ಸಿದರಾಯ ಅರಳಗುಂಡಗಿ ಮಾತನಾಡಿ, ಸಾಲೋಟಗಿ ಗ್ರಾಮದಲ್ಲಿ ಈಗಾಗಲೇ ಶಾರದಾ ಕಿರಿಯ ಪ್ರಾಥಮಿಕ ಶಾಲೆ ಮತ್ತು ಶಿವಯೋಗೇಶ್ವರ ಸರ್ವೋದಯ ಸಂಸ್ಥೆಯ ಪ್ರೌಢ ಮತ್ತು ಪಪೂ ಕಾಲೇಜು ಇದ್ದು ಮದ್ಯದದಂಗಡಿ ತೆರೆಯಲು ಅಲ್ಲಿ ಅವಕಾಶ ನೀಡಬಾರದು. ಶಾಲೆಯ ಹತ್ತಿರವೇ ಮದ್ಯದಂಗಡಿ ತೆರೆದರೆ ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಒಂದು ವೇಳೆ ಅವಕಾಶ ಕಲ್ಪಿಸಿದರೆ ಗ್ರಾಮಸ್ಥರೆಲ್ಲ ಸೇರಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಶಿವಯೋಗೆಪ್ಪ ಚನಗೊಂಡ, ಸೋಮನಾಥ ಮಂದೇವಾಲಿ, ಮಹೇಶ ಹಸನಾಪುರ, ಶಿವಾನಂದ ನಂದಗೊಳ, ಮಲ್ಲು ಬಗಲಿ, ಸೃಜನ ಜಾಧವ, ದಾನಯ್ಯ ಪಠಪತಿ, ಅಪ್ಪಶ್ಯಾ ಕೋರಳ್ಳಿ, ಈರಣ್ಣ ಗಾಳಿಮಠ, ರಾಜು ಗಜಾಕೋಶ, ಭೀಮು ಚವ್ಹಾಣ, ಗಂಗಾಧರ ಆಳೂರ, ರಾಘವೇಂದ್ರ ಚನಗೊಂಡ, ಗುಲಾಬ ಚವ್ಹಾಣ, ರಾಮ ಹಳ್ಳಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ಇಂಡಿ ತಹಶೀಲ್ದಾರ್‌ ಸಿ.ಎಸ್‌. ಕುಲಕರ್ಣಿ, ಅಬಕಾರಿ ನಿರೀಕ್ಷಕ ಎಂ.ಎಚ್‌. ಪಡಸಲಗಿ, ಗ್ರಾಮೀಣ ಪೊಲೀಸ್‌ ಠಾಣೆ ಪಿಎಸೈ ಮಾಳಪ್ಪ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next