Advertisement
ಭಾರತ ಸಂವಿಧಾನ ಸಪ್ತಾಹದ ಅಂಗವಾಗಿ ಬುಧವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ನ್ಯೂ ಡೆಲ್ಲಿ ಪಬ್ಲಿಕ್ ಸ್ಕೂಲ್ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಸಂವಿಧಾನದ ಅಡಿ ಮೂಲಭೂತ ಹಕ್ಕುಗಳ ಬಗ್ಗೆ ಹೋರಾಟ ಮಾಡುತ್ತೇವೆ. ಆದರೆ ಈ ಹಂತದಲ್ಲಿ ಮೂಲಭೂತ ಕರ್ತವ್ಯಗಳನ್ನೇ ಮರೆಯುತ್ತಿದ್ದೇವೆ. ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕು. ಸುಪ್ರೀಂ ಕೋರ್ಟ್ನಿರ್ದೇಶನದಂತೆ ಮೂಲಭೂತ ಹಕ್ಕುಗಳ ಜೊತೆಗೆ ಕರ್ತವ್ಯಗಳ ಪಾಲನೆ ಮಾಡಬೇಕು ಎಂದರು.
ಹಕ್ಕುಗಳ ಜೊತೆಗೆ ಮೂಲಭೂತ ಕರ್ತವ್ಯ, ಸಂವಿಧಾನದ ಬಗ್ಗೆ ಅರಿತುಕೊಂಡರೆ ಸಹೋದರತೆ, ಏಕತೆ ಮೂಡುತ್ತದೆ ಎಂದು ತಿಳಿಸಿದರು.
Related Articles
Advertisement
ಮುಖ್ಯ ಶಿಕ್ಷಕಿ ಬಿ.ಎಸ್. ಪೂರ್ಣಿಮಾ ಅಧ್ಯಕ್ಷತೆ ವಹಿಸಿದ್ದರು. ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿ ಕಾರಿ ಟಿ. ಅಂಬಣ್ಣ, ಶಿಕ್ಷಣ ಸಂಯೋಜಕ ಡಿ. ನಾಗರಾಜ್, ಕೆ.ಜಿ. ರವಿಕುಮಾರ್, ಶಾಲಾ ಕಾರ್ಯದರ್ಶಿ ಸಂತೋಷ್‌ಕುಮಾರ್, ಸಹನಾ ಸಂತೋಷ್‌ಕುಮಾರ್ ಇತರರು ಇದ್ದರು.
ಹಿಂಜರಿಕೆ ಬಿಟ್ಟು ಹೇಳಿಕೆ ನೀಡಿಪೋಕ್ಸೋ ಎಂದರೆ ಕೇವಲ ಬಾಲಕಿಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳಲ್ಲ. 18 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳು ಪೋಕ್ಸೋ ಅಡಿಯಲ್ಲಿ ಬರುತ್ತವೆ. ಸಂತ್ರಸ್ತರಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಉಚಿತವಾಗಿ ಕಾನೂನು ನೆರವು ನೀಡಲಾಗುತ್ತದೆ. ಮಕ್ಕಳ ಸ್ನೇಹಿ ನ್ಯಾಯಾಲಯಗಳನ್ನು ರೂಪಿಸಲಾಗಿದೆ. ಮಕ್ಕಳಿಗೆ ಗುಪ್ತವಾಗಿ ವಿಚಾರಣೆ ಮಾಡಲಾಗುತ್ತಿದೆ. ಮಕ್ಕಳು ಯಾವುದೇ ರೀತಿಯ ದೌರ್ಜನ್ಯಗಳಾದಾಗ ಮುಕ್ತವಾಗಿ ನ್ಯಾಯಾಲಯ ಇಲ್ಲವೇ ಪೊಲೀಸ್ ಠಾಣೆಗೆ
ಹಾಜರಾಗಿ ದೂರು ಅಥವಾ ಹೇಳಿಕೆ ನೀಡಬೇಕು. ಯಾವುದೇ ಭಯ ಬೇಡ ಎಂದು ಕಾನೂನು ಸೇವಾ ಸದಸ್ಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ತಿಳಿಸಿದರು.