ಬೆಂಗಳೂರು: ಭಾರತ್ ಜೋಡೋ ಯಾತ್ರೆ ಸಿದ್ಧತಾ ಸಭೆಯಲ್ಲಿ ಇಂಗ್ಲೀಷ್ ನಲ್ಲಿ ಭಾಷಣ ಆರಂಭಿಸಿದ ರಾಜ್ಯಸಭಾ ಸದಸ್ಯ ಜೈರಾಂ ರಮೇಶ್ ಗೆ ಕಾಂಗ್ರೆಸ್ ಶಾಸಕರೇ ಆಕ್ಷೇಪ ವ್ಯಕ್ತಪಡಿಸಿ ಮುಜುಗರ ಸಷ್ಟಿಸಿದ ಘಟನೆ ನಡೆದಿದೆ.
ತಮ್ಮದೇ ಪಕ್ಷದ ಕಾರ್ಯಕರ್ತರಿಂದ ಆಕ್ಷೇಪ ಎದುರಾದ ಕಾರಣಕ್ಕೆ ಜೈರಾಂ ರಮೇಶ್ ಮುಜುಗರ ಅನುಭವಿಸಬೇಕಾಯಿತು.ಇಂಗ್ಲೀಷ್ ನಲ್ಲಿ ಭಾಷಣ ಮಾಡುತ್ತಿದ್ದಂತೆ ಕನ್ನಡದಲ್ಲಿ ಮಾತಾಡಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಕೂಗಿದರು.
ಕೊನೆಗೆ ತಾಂತ್ರಿಕ ಅಂಶಗಳನ್ನು ಇಂಗ್ಲೀಷ್ ನಲ್ಲಿ ಹೇಳುತ್ತೇನೆ ಎಂದ ಜೈರಾಂ ರಮೇಶ್, ನಂತರ ಕನ್ನಡದಲ್ಲಿ ಭಾಷಣ ಮುಂದುವರೆಸುತ್ತೇನೆ ಎಂದರು. ಜೈರಾಂ ರಮೇಶ್ ಕನ್ನಡದಲ್ಲಿ ಭಾಷಣ ಮಾತಾಡುತ್ತಿದ್ದಂತೆ ಕಾರ್ಯಕರ್ತರು ಚಪ್ಪಾಳೆ ತಟ್ಟಿದರು.
ಇದನ್ನೂ ಓದಿ:ಸರ್ಕಾರಿ ವೈದ್ಯರಿಗಾಗಿ ಕಾದು ಕುಳಿತ ಪೋಷಕರು…ತಾಯಿಯ ಮಡಿಲಲ್ಲೇ ಸಾವನ್ನಪ್ಪಿದ ಮಗು
ಡಿಪಾರ್ಚರ್ ಲಾಂಜ್ ನಲ್ಲಿ ಇದ್ದಾರೆ: ಪಕ್ಷ ಬಿಟ್ಟು ಹೋಗುವವರು ಹೋಗಲಿ. ಕೆಲವರು ಡಿಪಾರ್ಚರ್ ಲಾಂಜ್ ನಲ್ಲಿ ನಿಂತಿದ್ದಾರೆ. ಹೇಳಿಕೆಗಳನ್ನೂ ಕೊಡುತ್ತಿದ್ದಾರೆ. ಹೋಗುವವರು ಹೋಗಲಿ, ಮಾತನ್ನಾಡುವವರು ಮಾತನ್ನಾಡಲಿ. ಯಾವುದೇ ಕಾರಣಕ್ಕೆ ಭಾರತ್ ಜೋಡೋ ಯಾತ್ರೆ ನಿಲ್ಲುವುದಿಲ್ಲ ಎಂದು ಸವಾಲು ಹಾಕಿದರು.