Advertisement

Oberoi Group; ಹೆಸರಾಂತ ಹೋಟೆಲ್ ಉದ್ಯಮಿ ಪಿಆರ್ ಎಸ್ ಒಬೆರಾಯ್ ಇನ್ನಿಲ್ಲ

10:44 AM Nov 14, 2023 | Team Udayavani |

ನವದೆಹಲಿ: ಭಾರತೀಯ ಆತಿಥ್ಯ ವಲಯದ ಮುಖ್ಯಸ್ಥ ಎಂದು ಕರೆಯಲ್ಪಡುವ ಒಬೆರಾಯ್ ಗ್ರೂಪ್‌ ನ ಅಧ್ಯಕ್ಷ ಪೃಥ್ವಿ ರಾಜ್ ಸಿಂಗ್ ಒಬೆರಾಯ್ ಅವರು ಮಂಗಳವಾರ ನಿಧನರಾದರು. “ಒಬೆರಾಯ್ ಗ್ರೂಪ್‌ ನ ಅಧ್ಯಕ್ಷ ಪಿಆರ್‌ಎಸ್ ಒಬೆರಾಯ್ ಅವರು ಇಂದು ಮುಂಜಾನೆ ಶಾಂತಿಯುತವಾಗಿ ನಿಧನರಾಗಿರುವುದನ್ನು ನಾವು ತೀವ್ರ ದುಃಖದಿಂದ ತಿಳಿಸುತ್ತೇವೆ” ಎಂದು ಹೇಳಿಕೆ ತಿಳಿಸಿದೆ.

Advertisement

ಆತಿಥ್ಯ ಉದ್ಯಮದಲ್ಲಿ ಒಬೆರಾಯ್ ಅವರ ಪರಂಪರೆಯು ಗಡಿಗಳನ್ನು ಮೀರಿದೆ, ಇದು ಜಾಗತಿಕವಾಗಿ ಅಳಿಸಲಾಗದ ಗುರುತು ಉಂಟುಮಾಡಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಪ್ರವಾಸೋದ್ಯಮ ಮತ್ತು ಆತಿಥ್ಯದಲ್ಲಿ ದೇಶಕ್ಕೆ ನೀಡಿದ ಅಸಾಧಾರಣ ಕೊಡುಗೆಯನ್ನು ಗುರುತಿಸಿ ಪಿಆರ್ ಎಸ್ ಒಬೆರಾಯ್ ಅವರು ಪದ್ಮವಿಭೂಷಣ ಸೇರಿ ಹಲವಾರು ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ಪಡೆದರು.

ಅವರ ಅಸಾಧಾರಣ ನಾಯಕತ್ವ ಮತ್ತು ದೃಷ್ಟಿಕೋನವನ್ನು ಗುರುತಿಸಿ ಐಎಲ್‌ಟಿಎಂ (ಅಂತಾರಾಷ್ಟ್ರೀಯ ಐಷಾರಾಮಿ ಟ್ರಾವೆಲ್ ಮಾರ್ಕೆಟ್) ನಲ್ಲಿ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸಹ ಅವರಿಗೆ ನೀಡಿ ಗೌರವಿಸಲಾಯಿತು. ಪಿಎಆರ್ಎಸ್ ಒಬೆರಾಯ್ ಅವರಿಗೆ ಅಮೆರಿಕದ HOTELS ನಿಯತಕಾಲಿಕವು ‘ಕಾರ್ಪೊರೇಟ್ ಹೊಟೇಲಿಯರ್ ಆಫ್ ದಿ ವರ್ಲ್ಡ್’ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next