ಹೊಸದಿಲ್ಲಿ: ದೇಶದ ಹಲವಾರು ಪಕ್ಷಗಳು ಜಾತಿ ಆಧಾರಿತ ಜನಗಣತಿ ನಡೆಸಬೇಕೆಂದು ಕೇಂದ್ರ ಸರಕಾರ ಹಾಗೂ ಆಯಾ ರಾಜ್ಯ ಸರಕಾರಗಳನ್ನು ಒತ್ತಾಯಿಸುತ್ತಿವೆ. ಇದರ ನಡುವೆಯೇ, ದೇಶದ ಗ್ರಾಮೀಣ ಪ್ರದೇಶಗಳಲ್ಲಿರುವ 17.24 ಕೋಟಿ ಮನೆಗಳಲ್ಲಿ ಶೇ. 44.4ರಷ್ಟು ಮನೆಗಳು ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಸೇರಿವೆ.
ದೇಶದಲ್ಲಿನ ಗಳಿಗೆ ಹೋಲಿಸಿದರೆ ಒಬಿಸಿಗೆ ಸೇರಿದ ಮನೆಗಳು, ಕರ್ನಾಟಕ, ತಮಿಳುನಾಡು, ಬಿಹಾರ, ತೆಲಂಗಾಣ, ಉತ್ತರ ಪ್ರದೇಶ, ಕೇರಳ, ಛತ್ತೀಸ್ಗಢ, ರಾಜಸ್ಥಾನ, ಆಂಧ್ರಪ್ರದೇಶ, ಗುಜರಾತ್ನಲ್ಲೇ ಹೆಚ್ಚಾಗಿವೆ. ಲೋಕಸಭೆಯ ಒಟ್ಟು 543 ಸ್ಥಾನಗಳಲ್ಲಿ ಈ ರಾಜ್ಯಗಳ ಪಾಲು ಶೇ. 43ರಷ್ಟಿದೆ (235 ಸ್ಥಾನ) ಎಂಬುದು ಗಮನಾರ್ಹ. ಈ ಬಗ್ಗೆ ಕೇಂದ್ರ ಸರ ಕಾ ರದ ಸಮೀಕ್ಷೆಯನ್ನು ಉಲ್ಲೇಖೀಸಿ “ದ ಇಂಡಿ ಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಕೇಂದ್ರ ನಡೆಸಿರುವ ಸಮೀಕ್ಷೆ: “ಸಿಚ್ಯುವೇಶನ್ ಅಸ್ಸೆಮೆಂಟ್ಸ್ ಆಫ್ ಅಗ್ರಿಕಲ್ಚರಲ್ ಹೌಸ್ಹೋಲ್ಡ್ಸ್ ಆ್ಯಂಡ್ ಲ್ಯಾಂಡ್ ಹೋಲ್ಡಿಂಗ್ಸ್ ಆಫ್ ಹೌಸ್ಹೋಲ್ಡ್ಸ್ ಇನ್ ರೂರಲ್ ಇಂಡಿಯಾ – 2019′ ಎಂಬ ಹೆಸರಿನ ಈ ಸಮೀಕ್ಷೆಯನ್ನು 2019ರಲ್ಲಿ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ನಡೆಸಿತ್ತು. 2018-19ರಲ್ಲಿನ ಭಾರತೀಯ ಗ್ರಾಮೀಣ ಪ್ರದೇಶಗಳಲ್ಲಿನ ಸ್ಥಿತಿಗತಿಗಳನ್ನು ಈ ಸಮೀಕ್ಷೆ ಒಳಗೊಂಡಿದ್ದು, 2021ರ ಸೆಪ್ಟಂಬರ್ ತಿಂಗಳ ಮೊದಲ ಭಾಗದಲ್ಲಿ ಈ ಸಮೀಕ್ಷಾ ವರದಿಯನ್ನು ಪ್ರಕಟಿಸಲಾಗಿದೆ.
ಇದನ್ನೂ ಓದಿ:ಬಿಡುಗಡೆಯ ಮುನ್ನವೇ ‘ಕೋಟಿಗೊಬ್ಬ’ನಿಗೆ ಸಿನಿಮಾ ಚೋರರ ಬೆದರಿಕೆ
ಏನು ಹೇಳುತ್ತದೆ ಸಮೀಕ್ಷಾ ವರದಿ?: ಭಾರತದ ಗ್ರಾಮೀಣ ಪ್ರದೇಶಗಳಲ್ಲಿರುವ 17.24 ಕೋಟಿ ಮನೆಗಳಲ್ಲಿ ಶೇ. 44.4ರಷ್ಟು ಮನೆಗಳು ಒಬಿಸಿಗೆ, ಶೇ. 21.6ರಷ್ಟು ಪರಿಶಿಷ್ಟ ಜಾತಿಗೆ (ಎಸ್.ಸಿ.), ಶೇ. 12.3ರಷ್ಟು ಪರಿಶಿಷ್ಠ ಪಂಗಡಕ್ಕೆ (ಎಸ್.ಟಿ.), ಶೇ. 21.7ರಷ್ಟು ಮನೆಗಳು ಇತರ ಸಮುದಾಯಗಳಿಗೆ ಸೇರಿವೆ. ಇನ್ನು, ಗ್ರಾಮೀಣ ಭಾಗದ ಮನೆಗಳಲ್ಲಿ ಶೇ. 54ರಷ್ಟು ಮನೆಗಳು ಕೃಷಿಕರಿಗೆ ಸೇರಿದ್ದವಾಗಿವೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.