Advertisement

8,000 ಸ್ಥಳಗಳಲ್ಲಿ ಪದಗ್ರಹಣ ವೀಕ್ಷಣೆ

10:02 AM May 29, 2020 | Suhan S |

ಹುಬ್ಬಳ್ಳಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಪದಗ್ರಹಣ ಸಮಾರಂಭ ಜೂ. 7ರಂದು ನಡೆಯುತ್ತಿದ್ದು, ಕಾರ್ಯಕ್ರಮ ವೀಕ್ಷಣೆಗೆ ರಾಜ್ಯಾದ್ಯಂತ 8,000 ಸ್ಥಳಗಳಲ್ಲಿ ಎಲ್‌ಇಡಿ ಪರದೆ ಅಳವಡಿಕೆಗೆ ತಯಾರಿ ನಡೆದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.

Advertisement

ಕಾರವಾರ ರಸ್ತೆಯ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನೇರವಾಗಿ 200 ನಾಯಕರು, ಮುಖಂಡರು ಮಾತ್ರ ಪಾಲ್ಗೊಳ್ಳಲಿದ್ದಾರೆ. ಎಲ್ಲಾ ಸುದ್ದಿವಾಹಿನಿಗಳಲ್ಲಿ ಕಾರ್ಯಕ್ರಮ ನೇರಪ್ರಸಾರವಾಗಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರವಿರಲಿದೆ. ಇದಕ್ಕಾಗಿ ರಾಜ್ಯದ 8 ಸಾವಿರ ಕಡೆಗಳಲ್ಲಿ ವ್ಯವಸ್ಥೆ ಮಾಡಿದ್ದು, ಕನಿಷ್ಠ 4 ಲಕ್ಷ ಜನ ಕಾರ್ಯಕ್ರಮ ವೀಕ್ಷಿಸುವ ನಿರೀಕ್ಷೆ ಇದೆ ಎಂದರು.

ಪಕ್ಷದ ಕಚೇರಿಗಳು, ವಾರ್ಡ್‌ವಾರು ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುವುದು. ಸಾಮಾಜಿಕ ಅಂತರ ಹಾಗೂ ಇನ್ನಿತರೆ ಎಲ್ಲಾ ನಿಯಮಗಳನ್ನು ಪಾಲನೆ ಮಾಡಲಾಗುವುದು. ಪೂರ್ವ ತಯಾರಿ ಕುರಿತು ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ವೀಕ್ಷಕರನ್ನು ನೇಮಿಸಿದ್ದು, ಅವರ ನೇತೃತ್ವದಲ್ಲಿ ತಯಾರಿ ನಡೆಯುತ್ತಿದೆ. ಕೊರೊನಾ ಸಂದರ್ಭದಲ್ಲಿ ಜನರು ಬೆಂಗಳೂರಿಗೆ ತೆರಳುವುದು, ದುಂದು ವೆಚ್ಚ ಮಾಡುವುದು ಸರಿಯಲ್ಲ ಎನ್ನುವ ಕಾರಣದಿಂದ ಸರಳವಾಗಿ ಕಾರ್ಯಕ್ರಮ ನಡೆಸಲು ಈ ನಿರ್ಧಾರಕ್ಕೆ ಬರಲಾಗಿದೆ. ಲಾಕ್‌ಡೌನ್‌ ವಿಚಾರದಲ್ಲಿ ಯಾವುದೇ ಬದಲಾವಣೆಯಾದರೂ ನಮ್ಮ ಕಾರ್ಯಕ್ರಮ ಪೂರ್ವನಿಗದಿಯಂತೆ ನಡೆಯಲಿದೆ ಎಂದು ತಿಳಿಸಿದರು.

ಕೇಡರ್‌ ಬೇಸ್‌ ಸಂಘಟನೆ: ಕಾಂಗ್ರೆಸ್‌ ಮಾಸ್‌ ಬೇಸ್ಡ್ ಪಾರ್ಟಿಯಾಗಿತ್ತು. ಇದನ್ನು ಕೇಡರ್‌ ಬೇಸ್‌ ಪಕ್ಷವನ್ನಾಗಿ ಸಂಘಟಿಸಲು ಚಿಂತನೆಗಳು ನಡೆದಿದ್ದು, ಜೂ. 7ರ ನಂತರ ಸಂಘಟನೆಯ ಸಮಗ್ರ ಚಿಂತನೆ, ಅನುಷ್ಠಾನ ಪ್ರಕ್ರಿಯೆಗಳು ನಡೆಯಲಿವೆ. ಕೇಡರ್‌ ಬೇಸ್‌ ಪಕ್ಷ ಸಂಘಟನೆಯಿಂದ ಪ್ರಮುಖವಾಗಿ ಶಿಸ್ತು ಬೆಳೆಯುತ್ತದೆ. ಚುನಾವಣೆ ಸ್ಪರ್ಧೆ ಸುಲಭವಾಗಲಿದೆ ಎಂದರು.

ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಶಾಸಕಿ ಕುಸುಮಾವತಿ ಶಿವಳ್ಳಿ, ಮುಖಂಡರಾದ ಅನೀಲಕುಮಾರ ಪಾಟೀಲ, ಅಲ್ತಾಫ್‌ ಹಳ್ಳೂರು, ನಾಗರಾಜ ಛಬ್ಬಿ, ಪ್ರೊ| ಐ.ಜಿ. ಸನದಿ, ವೀರಣ್ಣ ಮತ್ತಿಕಟ್ಟಿ, ಇಸ್ಮಾಯಿಲ್‌ ತಮಟಗಾರ, ವಿಜಯ ಕುಲಕರ್ಣಿ, ವಿನೋದ ಅಸೂಟಿ, ಟಿ. ಈಶ್ವರ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next