Advertisement

ತಂದೆ ಹುಟ್ಟುಹಬ್ಬಕ್ಕೆ “ಓ ಜಾನು…’: Watch

05:15 PM Dec 16, 2018 | |

ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಯುವರಾಜ ನಿಖಿಲ್‌ ಕುಮಾರ್‌, ಡಿಂಪಲ್‌ ಕ್ವೀನ್‌ ರಚಿತಾ ರಾಮ್‌ ಅಭಿನಯದ “ಸೀತಾರಾಮ ಕಲ್ಯಾಣ’ ಚಿತ್ರದ ಟ್ರೈಲರ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ರದ ಸೆಕೆಂಡ್ ಸಾಂಗ್ ರಿಲೀಸ್ ಆಗಿದೆ. ತಂದೆ ಕುಮಾರಸ್ವಾಮಿಯವರ ಹುಟ್ಟುಹಬ್ಬಕ್ಕಾಗಿ ನಿಖಿಲ್ “ಓ ಜಾನು.. ಓ ಜಾನು’ ಹೆಸರಿನ ಲಿರಿಕಲ್ ಸಾಂಗ್‍ನ ಬಿಡುಗಡೆ ಮಾಡಿಸಿದ್ದಾರೆ.

Advertisement

ಕೆ. ಕಲ್ಯಾಣ್ ಸಾಹಿತ್ಯವಿರುವ ಈ ಹಾಡಿಗೆ ಸಂಜಿತ್ ಹೆಗ್ಡೆ ಧ್ವನಿ ನೀಡಿದ್ದು, ಅನೂಪ್‌ ರೂಬೀನ್ಸ್‌ ಸಂಗೀತ ಸಂಯೋಜನೆಯಿದೆ. ಅಲ್ಲದೇ ಹಾಡಿನ ಲಿರಿಕಲ್‌ ವಿಡಿಯೋದಲ್ಲಿ ನಿಖಿಲ್‌ ಕುಮಾರ್‌, ರಚಿತಾರಾಮ್‌ ಕೆಮಿಸ್ಟ್ರಿ ಭರ್ಜರಿಯಾಗಿ ಕಾಣುತ್ತಿದೆ. ಚೆನ್ನಾಂಬಿಕ ಫಿಲಂಸ್‌ ಬ್ಯಾನರ್‌ನಲ್ಲಿ ಶ್ರೀಮತಿ ಅನಿತಾ ಕುಮಾರಸ್ವಾಮಿ ನಿರ್ಮಾಣದ ಈ ಚಿತ್ರಕ್ಕೆ ಹರ್ಷ ಆ್ಯಕ್ಷನ್ ಕಟ್ ಹೇಳಿದ್ದಾರೆ. ಸ್ವಾಮಿ ಛಾಯಾಗ್ರಹಣ, ಸುನೀಲ್‌ ಗೌಡ ಸಹ ನಿರ್ಮಾಣ, ಪ್ರಶಾಂತ್‌ ರಾಜಪ್ಪ, ಹಾಗೂ ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ. 

ಈ ಹಿಂದೆ “ಸೀತಾರಾಮ ಕಲ್ಯಾಣ’ ಸಿನಿಮಾದ ಟೀಸರ್ ಬಿಡುಗಡೆಗೊಂಡು ಒಂದೇ ದಿನದಲ್ಲಿ 2ಲಕ್ಷಕ್ಕೂ ಹೆಚ್ಚು ವ್ಯೂ ಪಡೆದಿದ್ದು, ಯೂಟ್ಯೂಬ್‍ನಲ್ಲಿ ಟಾಪ್ 1 ಟ್ರೆಂಡಿಂಗ್‍ನಲ್ಲಿತ್ತು. ಅಲ್ಲದೇ ಸಿನಿಮಾ ಆ್ಯಕ್ಷನ್, ಫ್ಯಾಮಿಲಿ ಸೆಂಟಿಮೆಂಟ್ ಕಥೆಯನ್ನು ಒಳಗೊಂಡಿದ್ದು, ರವಿಶಂಕರ್, ಶರತ್‍ಕುಮಾರ್, ಚಿಕ್ಕಣ್ಣ, ಮಧು ಸೇರಿದಂತೆ ಹಲವು ದಿಗ್ಗಜ್ಜರ ತಂಡವೇ ಚಿತ್ರದಲ್ಲಿದೆ. ಇನ್ನು ಈ ಚಿತ್ರಕ್ಕಾಗಿ ಚಿತ್ರತಂಡ ಮೈಸೂರು, ಬೆಂಗಳೂರು ಸೇರಿದಂತೆ ಹಲವು ತಾಣಗಳಲ್ಲಿ ಚಿತ್ರೀಕರಣ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next