•ನಿನಗೆ ನಾನೆಂದೂ ಹೇಳಲಾರೆ ಚಂದಿರನನ್ನು, ತಾರೆಗಳನ್ನ ತಂದುಕೊಡು ಎಂದು. ಆದರೆ ನಾ ಕೇಳುವುದಿಷ್ಟೇ, ನೀನು ನಗು ಮುಖದಿಂದ ಬಳಿ ಬಾ ಸಾಕು.
• ದಿನಕ್ಕೆ ನೂರು ಬಾರಿ ನನ್ನ ಧ್ಯಾನ ಮಾಡೆಂದು ನಾ ಹೇಳಲಾರೆ, ದಿನದಲ್ಲಿ ಒಂದು ಬಾರಿ ಪ್ರೀತಿಯಿಂದ ನೋಡು ಸಾಕು.
•ಊಟಕ್ಕೆ ಹೊರಗಡೆ ಕರೆದುಕೊಂಡು ಹೋಗೆನ್ನಲಾರೆ. ಆದರೆ ದಿನದಲ್ಲಿ ಒಮ್ಮೆ ನನ್ನೊಡನೆ ಪ್ರೀತಿಯಿಂದ ಊಟ ಮಾಡಿ ನನಗೊಂದು ತುತ್ತು ತಿನ್ನಿಸು ಸಾಕು.
• ನನ್ನ ಕೈ ಹಿಡಿದು ತೋರಿಕೆಯ ಪ್ರೀತಿ ತೋರೆನ್ನಲಾರೆ. ಬದಲಿಗೆ ನಾ ನಡೆಯುವ ಹಾದಿಯಲಿ ಆಸರೆಯಾಗಿ ನನ್ನ ನೆರಳಾಗಿರು ಸಾಕು.
• ಶಾಪಿಂಗ್, ಪಾರ್ಕ್ ಮೋಜು ಮಸ್ತಿಗೆ ನನ್ನನ್ನು ಕರೆದುಕೊಂಡು ಹೋಗು ಎನ್ನಲಾರೆ. ಬದಲಿಗೆ ನನಗಾಗಿ ಸ್ವಲ್ಪ$ ಸಮಯ ಕೊಟ್ಟು ಯಾವುದೋ ಬಸ್‌ಸ್ಟಾಪ್ಟ್ನಲ್ಲಿ ಕುಳಿತುಕೊಂಡು ಮಾತನಾಡು ಸಾಕು.
• ನಾ ತೋರುವ ಪ್ರೀತಿಗೆ ಪ್ರತಿಯಾಗಿ ಯಾವುದೇ ಉಡುಗೊರೆ ಬಯಸಲಾರೆ ನಾ. ಬದಲಿಗೆ ಅದಕ್ಕೆ ಸಾವಿರಪಟ್ಟು ಹೆಚ್ಚು ಪ್ರೀತಿ ತೋರು ಸಾಕು.
• ನಾ ತಪ್ಪು ಮಾಡಿದಾಗ ಅಪ್ಪನಂತೆ ಗದರಿಸಿ ಅಧಿ ಕಾರ ಚಲಾಯಿಸು, ತುಸು ಮುನಿಸಲ್ಲೂ ಪ್ರೀತಿಯ ಮಾತನಾಡಿ ಮಗುವಿನಂತೆ ನನ್ನ ಆಲಂಗಿಸು.
•ಪ್ರೀತಿ ತೋರಿಸದಿದ್ದರೂ ಬೇಡ. ನೋವು ಕೊಡದಿರು, ಕಾರಣ ಇಷ್ಟೇ: ನೀ ಒಮ್ಮೆ ಕೊಟ್ಟ ನೋವು ನೀನು ಸಾವಿರ ಪಟ್ಟು ತೋರಿದ ಪ್ರೀತಿಯನ್ನು ಮರೆಸಿ ಬಿಡುತ್ತೆ
• ನೀ ಜಗತ್ತಿನ ದೃಷ್ಟಿಯಲ್ಲಿ ಬಡವನಾಗಿಯೇ ಇರು. ಆದರೆ ನನಗೆ ಪ್ರೀತಿ ತೋರುವ ವಿಷಯದಲ್ಲಿ ಶ್ರೀಮಂತನಾಗಿರು.
ನಾ ಸದಾ ನಿನ್ನೊಟ್ಟಿಗೆ ಚಿಕ್ಕ-ಪುಟ್ಟ ವಿಷಯಕ್ಕೆ ಜಗಳವಾಡುವೆ. ಕಾರಣ, ಈ ಜಗತಿನಲ್ಲಿ ನಿನ್ನ ಹೊರತು ಬೇರೇನೂ ಇಲ್ಲ. ಎಲ್ಲಿ ನನ್ನಿಂದ ನಿನ್ನನ್ನು ಬೇರೆಯವರು ಕಸಿದುಕೊಂಡು ಬಿಡುತ್ತಾರೇನೋ ಎನ್ನುವ ಪೊಸೆಸಿವ್‌ನೆಸ್ ನನ್ನನ್ನು ಕಾಡುತ್ತಿದೆ.
ನೀ ನನ್ನ ಎರಡನೇ ತಾಯಾಗು ಅಷ್ಟೇ ಸಾಕು, ದುಃಖದಿಂದ ನನ್ನ ಕಣ್ತುಂಬಿರಲು ಕಣ್ಣೊರೆಸಿ ಮುದ್ದಿಸು, ನಿನ್ನ ತೋಳಿನಲ್ಲಿ ಮಗುವಿನಂತೆ ಜೋಪಾನ ಮಾಡಿ ಸಂತೈಸು. ಅಷ್ಟೇ ಸಾಕಿ ಜೀವಕ್ಕೆ
ಓ ಹೃದಯದ ಮಾಲೀಕನೇ ನಿನಗೆಂದೇ ನನ್ನೀ ಓಲೆ, ಆಲಿಸು ಮುದ್ದು…
Advertisement
ಸುನೀತ ರಾಥೋಡ್ ಬಿ.ಎಚ್