Advertisement

ಏಕದಿನ: ವನಿತೆಯರಿಗೆ ದ್ವಿತೀಯ ಸವಾಲು

11:09 PM Feb 14, 2022 | Team Udayavani |

ಕ್ವೀನ್ಸ್‌ಟೌನ್‌ (ನ್ಯೂಜಿಲ್ಯಾಂಡ್‌): ಮೊದಲ ಏಕದಿನ ಪಂದ್ಯವನ್ನು 62 ರನ್ನುಗಳಿಂದ ಕಳೆದುಕೊಂಡ ಭಾರತದ ವನಿತೆಯರು, ಮಂಗಳವಾರ ಆತಿಥೇಯ ನ್ಯೂಜಿಲ್ಯಾಂಡ್‌ ವಿರುದ್ಧ ದ್ವಿತೀಯ ಮುಖಾಮುಖಿಯಲ್ಲಿ ಹೋರಾಟಕ್ಕಿಳಿಯಲಿದ್ದಾರೆ.

Advertisement

ಭಾರತ ಏಕೈಕ ಟಿ20 ಪಂದ್ಯದಲ್ಲೂ ಸೋಲಿನ ಆಘಾತಕ್ಕೆ ಸಿಲುಕಿತ್ತು. ಇನ್ನು ಗೆಲುವಿನ ಖಾತೆ ತೆರೆಯದೆ ಹೋದರೆ ಮಿಥಾಲಿ ರಾಜ್‌ ಪಡೆಯ ಮುಂದಿನ ಹಾದಿ ದುರ್ಗಮಗೊಳ್ಳಲಿದೆ.

ಸುಝೀ ಬೇಟ್ಸ್‌ ಶತಕ (106) ಮೊದಲ ಮುಖಾಮುಖಿಯಲ್ಲಿ ಭಾರತಕ್ಕೆ ಕಗ್ಗಂಟಾಗಿ ಪರಿಣಮಿಸಿತ್ತು. ಇವರ ಆಕರ್ಷಕ ಬ್ಯಾಟಿಂಗ್‌ನಿಂದ ನ್ಯೂಜಿಲ್ಯಾಂಡ್‌ 275 ರನ್‌ ಪೇರಿಸಿತು. ಚೇಸಿಂಗ್‌ ವೇಳೆ ಮಿಂಚಿದ್ದು ಮಿಥಾಲಿ ರಾಜ್‌ (59) ಮತ್ತು ಯಾಸ್ತಿಕಾ ಭಾಟಿಯಾ (41) ಮಾತ್ರ. ಕೌರ್‌ ಮತ್ತೆ ಕೈಕೊಟ್ಟಿದ್ದರು (10).

ಇದನ್ನೂ ಓದಿ:ಪೀಟರ್‌ಸನ್‌, ಹೀತರ್‌ ನೈಟ್‌ ಐಸಿಸಿ ತಿಂಗಳ ಕ್ರಿಕೆಟಿಗರು

ಮಂಧನಾ ಗೈರು
ಇದಕ್ಕೂ ಮಿಗಿಲಾದ ಸಮಸ್ಯೆ ಯೆಂದರೆ ಸ್ಟಾರ್‌ ಆಟಗಾರ್ತಿ ಸ್ಮತಿ ಮಂಧನಾ ಮತ್ತು ಮೇಘನಾ ಸಿಂಗ್‌ ಅವರ ಕ್ವಾರಂಟೈನ್‌ ಅವಧಿ ಇನ್ನೂ ಮುಗಿಯದಿದ್ದುದು. ಹೀಗಾಗಿ ಇವರಿ ಬ್ಬರು ದ್ವಿತೀಯ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ. ಆದರೆ ಇವರೊಂದಿಗಿದ್ದ ಪೇಸ್‌ ಬೌಲರ್‌ ರೇಣುಕಾ ಸಿಂಗ್‌ ಕ್ವಾರಂಟೈನ್‌ನಿಂದ ಹೊರಬಂದಿದ್ದು, ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವರು.

Advertisement

270ರ ಗುರಿ..
“ನಾವು 270ರಷ್ಟು ರನ್‌ ದಾಖಲಿ ಸಬೇಕು. ವನಿತಾ ಕ್ರಿಕೆಟ್‌ನಲ್ಲಿ ಇದೀಗ ಸ್ಟಾಂಡರ್ಡ್‌ ಮೊತ್ತವಾಗಿದೆ. ಮುಂದಿನ ತಿಂಗಳು ನ್ಯೂಜಿಲ್ಯಾಂಡ್‌ನ‌ಲ್ಲೇ ವಿಶ್ವಕಪ್‌ ನಡೆಯಲಿದ್ದು, ಶೀಘ್ರವೇ ಸರಣಿಗೆ ಕಮ್‌ಬ್ಯಾಕ್‌ ಮಾಡಬೇಕಿದೆ’ ಎಂಬುದಾಗಿ ನಾಯಕಿ ಮಿಥಾಲಿ ರಾಜ್‌ ಹೇಳಿದರು.

3.30ಕ್ಕೆ ಆರಂಭ ಭಾರತೀಯ ಕಾಲಮಾನದಂತೆ ಮುಂಜಾನೆ 3.30ಕ್ಕೆ ಪಂದ್ಯ ಆರಂಭವಾಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next