Advertisement

ಕಿವೀಸ್‌ಗೆ ಕಾದಿದೆ 382 ರನ್‌ ಸವಾಲು

06:35 AM Apr 03, 2018 | |

ಕ್ರೈಸ್ಟ್‌ಚರ್ಚ್‌: ಪ್ರವಾಸಿ ಇಂಗ್ಲೆಂಡ್‌ ಎದುರಿನ ಕ್ರೈಸ್ಟ್‌ಚರ್ಚ್‌ ಟೆಸ್ಟ್‌ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ 382 ರನ್ನುಗಳ ಗೆಲುವಿನ ಗುರಿ ಪಡೆದಿದೆ. 4ನೇ ದಿನದಾಟದ ಅಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 42 ರನ್‌ ಗಳಿಸಿದ್ದು, ಪಂದ್ಯ ಕುತೂಹಲ ಹಂತ ಮುಟ್ಟಿದೆ.

Advertisement

3 ವಿಕೆಟಿಗೆ 202 ರನ್‌ ಮಾಡಿದಲ್ಲಿಂದ ಸೋಮವಾರದ ಆಟ ಮುಗಿಸಿದ ಇಂಗ್ಲೆಂಡ್‌ 9ಕ್ಕೆ 352 ರನ್‌ ಗಳಿಸಿ ಡಿಕ್ಲೇರ್‌ ಮಾಡಿತು. ನಾಟೌಟ್‌ ಬ್ಯಾಟ್ಸ್‌ಮನ್‌ಗಳಾಗಿ ಉಳಿದಿದ್ದ ಜೋ ರೂಟ್‌ 54 ಮತ್ತು ಡೇವಿಡ್‌ ಮಾಲನ್‌ 53 ರನ್ನುಗಳ ಕೊಡುಗೆ ಸಲ್ಲಿಸಿದರು. ಇವರಿಬ್ಬರ 4ನೇ ವಿಕೆಟ್‌ ಜತೆಯಾಟದಲ್ಲಿ 97 ರನ್‌ ಹರಿದು ಬಂತು. ನ್ಯೂಜಿಲ್ಯಾಂಡ್‌ ಪರ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 4 ವಿಕೆಟ್‌, ಟ್ರೆಂಟ್‌ ಬೌಲ್ಟ್ ಮತ್ತು ನೀಲ್‌ ವ್ಯಾಗ್ನರ್‌ ತಲಾ 2 ವಿಕೆಟ್‌ ಕಿತ್ತರು.

ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ನ್ಯೂಜಿಲ್ಯಾಂಡಿಗೆ ಆರಂಭಿಕರಾದ ಟಾಮ್‌ ಲ್ಯಾಥಂ (25) ಮತ್ತು ಜೀತ್‌ ರಾವಲ್‌ (17) ಉತ್ತಮ ಅಡಿಪಾಯ ನಿರ್ಮಿಸುವ ಸೂಚನೆಯೊಂದನ್ನು ನೀಡಿದ್ದಾರೆ. ಕೊನೆಯ ದಿನದಾಟದಲ್ಲಿ ನ್ಯೂಜಿಲ್ಯಾಂಡ್‌ 340 ರನ್‌ ಗಳಿಸಬೇಕಿದೆ. ಇದು ಕಠಿನ ಸವಾಲಾಗಿದ್ದು, ಪಂದ್ಯವನ್ನು ಡ್ರಾಗೊಳಿಸಲು ಪ್ರಯತ್ನಿಸಬಹುದು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌-307 ಮತ್ತು 9 ವಿಕೆಟಿಗೆ ಡಿಕ್ಲೇರ್‌. ನ್ಯೂಜಿಲ್ಯಾಂಡ್‌-278 ಮತ್ತು ವಿಕೆಟ್‌ ನಷ್ಟವಿಲ್ಲದೆ 42.

Advertisement

Udayavani is now on Telegram. Click here to join our channel and stay updated with the latest news.

Next