Advertisement

Nyaya Yatra : ಸಂಸತ್‌ನಲ್ಲಿ ಮಾತಾಡಲು ಅವಕಾಶ ಸಿಗದ್ದಕ್ಕೆ ನ್ಯಾಯ ಯಾತ್ರೆ: ಖರ್ಗೆ

12:38 AM Jan 07, 2024 | Team Udayavani |

ಹೊಸದಿಲ್ಲಿ/ಪಟ್ನಾ: ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್‌ನ ಅಧಿವೇಶನದಲ್ಲಿ ಕಾಂಗ್ರೆಸ್‌ಗೆ ಜನರ ಹಿತ ಕಾಯುವ ವಿಚಾರಗಳನ್ನು ಪ್ರಸ್ತಾವಿಸಲು ಅವಕಾಶ ಸಿಗಲಿಲ್ಲ. ಹೀಗಾಗಿ, ಜ.14ರಿಂದ ಶುರುವಾಗಲಿರುವ ರಾಹುಲ್‌ ಗಾಂಧಿಯವರ ಭಾರತ್‌ ಜೋಡೋ ನ್ಯಾಯ ಯಾತ್ರೆಯಲ್ಲಿ ಪಕ್ಷದ ನಿಲುವುಗಳನ್ನು ಜನರ ಮುಂದೆ ಇರಿಸಲಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿ­ಕಾರ್ಜುನ ಖರ್ಗೆ ಹೇಳಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಯಾತ್ರೆಯಲ್ಲಿ ಸಾಮಾ­ಜಿಕ, ಆರ್ಥಿಕ ವಿಚಾರಗಳನ್ನು ಪ್ರಮು­ಖವಾಗಿ ಜನರ ಮುಂದಿ­ಡಲಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಭಾರತ್‌ ಜೋಡೋ ನ್ಯಾಯ ಯಾತ್ರೆಯ ಹೊಸ ಲಾಂಛನವನ್ನೂ ಬಿಡುಗಡೆ ಮಾಡಲಾಯಿತು.

2 ಸಮಿತಿಗಳ ರಚನೆ: ಮತ್ತೂಂ­ದೆಡೆ, ಚುನಾವಣೆ ನಿಟ್ಟಿನಲ್ಲಿ ಕಾಂಗ್ರೆಸ್‌ ನಾಯಕ ಅಜಯ ಮಕೇನ್‌ ನೇತೃತ್ವದಲ್ಲಿ ಪ್ರಚಾರ ಸಮಿತಿಯನ್ನು ರಚಿಸಲಾಗಿದೆ. ಇದಲ್ಲದೆ, ಚುನಾವಣ ವಾರ್‌ ರೂಮ್‌ ಅನ್ನು ರಚಿಸಲಾಗಿದ್ದು, ಹಿರಿಯ ನಾಯಕ ವೈಭವ್‌ ವಾಲಿಯಾ ಅವರನ್ನು ಅದಕ್ಕೆ ನೇಮಿಸಲಾಗಿದೆ.

ಕ್ಲಸ್ಟರ್‌ ಸಮಿತಿಗೆ ಐವನ್‌ ಡಿ’ಸೋಜ ನೇಮಕ
ಮುಂದಿನ ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಬಿರುಸಿನ ಸಿದ§ತೆಗಳನ್ನು ನಡೆಸಿದೆ. ಅದಕ್ಕೆ ಪೂರಕವಾಗಿ ಅಭ್ಯರ್ಥಿಗಳ ಆಯ್ಕೆಗೆ ಕರ್ನಾಟಕ ಸೇರಿಂತೆ ವಿವಿಧ ರಾಜ್ಯಗಳನ್ನು ಸೇರಿಸಿ ಕ್ಲಸ್ಟರ್‌ಗಳನ್ನು ರಚಿಸಲಾಗಿದೆ. ಕರ್ನಾಟಕ, ತಮಿಳುನಾಡು, ಕೇರಳ, ಲಕ್ಷದ್ವೀಪ ಮತ್ತು ಪುದುಚೇರಿಗಳನ್ನು ಒಳಗೊಂಡ ಕ್ಲಸ್ಟರ್‌ಗೆ ದ.ಕ. ಜಿಲ್ಲೆಯ ಹಿರಿಯ ಕಾಂಗ್ರೆಸ್‌ ನಾಯಕ ಐವಾನ್‌ ಡಿ’ ಸೋಜಾ ಅವರನ್ನು ನೇಮಿಸಲಾಗಿದೆ. ಅಭ್ಯರ್ಥಿಗಳ ಆಯ್ಕೆ ನಿಟ್ಟಿನಲ್ಲಿ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸೇರಿಸಿಕೊಂಡು ಒಟ್ಟು ಐದು ಕ್ಲಸ್ಟರ್‌ಗಳನ್ನು ಎಐಸಿಸಿ ಅಧ್ಯಕ್ಷ ಖರ್ಗೆ ರಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next