Advertisement
ತಾಪಮಾನದಲ್ಲಿ ಏರಿಕೆ ಉಂಟಾದಾಗ ಗಿಡಗಳು ತಮ್ಮ ಸ್ವಾಭಾವಿಕ ಕ್ರಿಯೆಯನ್ನು ಸ್ಥಗಿತಗೊಳಿಸುತ್ತವೆ. ಆರೋಗ್ಯವಂತ ಅಡಿಕೆ ಮರ ಎಪ್ರಿಲ್ – ಮೇ ತಿಂಗಳ ವೇಳೆ ಹಿಂಗಾರ ಒಡೆದು ಎಳೆಯ ಅಡಿಕೆ ಬೆಳೆಯಲು ಆರಂಭಿಸುತ್ತದೆ. ಆದರೆ, ಹೋಮಿಯೋಸ್ಟಟಿಸ್ ಬಾಧಿತ ಅಡಿಕೆ ಮರದಲ್ಲಿ ನಿಗದಿತ ಸಮಯಕ್ಕೂ ಮೊದಲೇ ಹಿಂಗಾರ ಒಡೆದು ಹಾಳೆ ಸೀಳಿ ಹೊರಬರುತ್ತದೆ. ಅನಂತರ ಈ ಹಿಂಗಾರ ಬಿಸಿಲ ತಾಪಮಾನ ಸಹಿಸದೆ ಒಣಗಿ ಹೋಗುವುದು ರೋಗ ಲಕ್ಷಣ. 1980ರಲ್ಲಿ ಮಲೇಷ್ಯ, ಸಿಂಗಾಪುರಗಳಲ್ಲಿ ಈ ರೋಗ ವ್ಯಾಪಕವಾಗಿತ್ತು. ರೋಗ ನಿಯಂತ್ರಣಕ್ಕೆ ಇನ್ನೂ ಔಷಧ ಕಂಡು ಹಿಡಿದಿಲ್ಲ.
Related Articles
Advertisement
ಫಸಲು ನೀಡುವ ಅಡಿಕೆ ಮರಕ್ಕೆ ದಿನಕ್ಕೆ 18ರಿಂದ 20 ಲೀ. ನೀರು ಬೇಕು. ಅವೆಲ್ಲವೂ ಕೆರೆ, ಬಾವಿ, ಹೊಳೆ ಅಥವಾ ಕೊಳವೆಬಾವಿ ಮೂಲಕ ಭರಿಸುವುದು ವಾಡಿಕೆ. ಆ ನೀರಿನ ಮೂಲಗಳೇ ಬತ್ತುತ್ತಿರುವುದರಿಂದ ನೀರಿನ ಕೊರತೆ ಉಂಟಾಗಿ ರೋಗ ಹೆಚ್ಚಲು ಕಾರಣ. ಜತೆಗೆ ಲಭ್ಯ ಇರುವ ನೀರುಣಿಸಲು ವಿದ್ಯುತ್ ಸಮಸ್ಯೆ ಕಾಡಿದೆ.
ತಾಲೂಕಿನ ಒಟ್ಟು ಅಡಿಕೆ ಬೆಳೆಯುವ ಪ್ರದೇಶ 28,096 ಎಕ್ರೆ. ತೋಟಗಾರಿಕಾ ಇಲಾಖೆಯ ಪ್ರಕಾರ ಹೆಕ್ಟೇರಿಗೆ 20 ಕ್ವಿಂಟಲ್ ಅಡಿಕೆ ಸಿಕ್ಕಿದರೆ, ಒಟ್ಟು ಹೆಕ್ಟೇರಿಗೆ 5,61,920 ಕ್ವಿಂಟಲ್ ದೊರೆಯಬೇಕು. ಆದರೆ ರೋಗಬಾಧೆ, ನೀರಿನ ಕೊರತೆ ಇತ್ಯಾದಿಗಳಿಂದ ನಿರೀಕ್ಷಿತ ಫಸಲು ಬೆಳೆಗಾರರಿಗೆ ಸಿಗುತ್ತಿಲ್ಲ.ಸುಳ್ಯದಲ್ಲೂ ಅಡಿಕೆ ಹಿಂಗಾರ ಒಣಗುವ ರೋಗ ಏರಿದ ತಾಪಮಾನದಿಂದ ಹೋಮಿಯೋಸ್ಟಟಿಸ್ ಹಾವಳಿ ಬೆಳವಣಿಗೆ ಸ್ಥಗಿತ.
ಬಿಸಿಲು ಸಹಿಸಲಾಗದು ಈ ಬಾರಿ ಅಡಿಕೆ ತೋಟಕ್ಕೆ ನೀರಿನ ಅಭಾವದ ಜತೆಗೆ ತಾಪಮಾನದ ಬಿಸಿಯೂ ತಟ್ಟಿದೆ. ಹೀಗಾಗಿ ಹಲವೆಡೆ ಹಿಂಗಾರ ಕರಟಿ ಹೋಗಿದೆ. ಇದರಿಂದ ಈ ಬಾರಿ ನಿರೀಕ್ಷಿತ ಫಸಲು ಸಿಗಲಾರದು.- ದೇರಣ್ಣ ಸುಳ್ಯ ,ಅಡಿಕೆ ಬೆಳೆಗಾರ
ಕಿರಣ್ ಪ್ರಸಾದ್ ಕುಂಡಡ್ಕ