Advertisement
ಏನು ತಯಾರಿಸಬಹುದು?ಅಡಿಕೆ ಮರ, ಹಾಳೆಗಳಿಂದ ಮನೆಯ ಹೊರಾಂಗಣ ಗೇಟ್, ಮನೆಯ ಮೇಲ್ಛಾವಣಿ, ಟೇಬಲ್, ಕಬೋರ್ಡ್, ಮಂಚ ಹಾಗೂ ದೇವರಕೋಣೆಯ ಪೀಠ, ಮಂಟಪ, ತೂಗುವ ಮಂಚವನ್ನು ತಯಾರಿಸಬಹುದು.
ಅಡಿಕೆ ಮರದ ಪೀಠೋಪಕರಣಗಳ ಬಳಕೆ ಮನೆಯ ಪರಿಸರಕ್ಕೆ ಒಳ್ಳೆಯದು. ಅಡಿಕೆ ಮರದ ಪೀಠೋಪಕರಣಗಳನ್ನು ಸರಿಯಾಗಿ ಮೊದಲ ಮೂರು ವರ್ಷ ಚೆನ್ನಾಗಿ ನೋಡಿಕೊಂಡರೆ, ಸರಿ ಸುಮಾರು 20 ವರ್ಷಗಳ ಬಾಳಿಕೆ ಬರುತ್ತವೆ ಎನ್ನುತ್ತಾರೆ ಕುಶಲ ಕರ್ಮಿಗಳು. ಅಡಿಕೆ ಮರದ ಪೀಠೋಪಕರಣಗಳಿಗೆ ಗೆದ್ದಲಿನ ಸಮಸ್ಯೆ ಇರುವುದಿಲ್ಲ. ಇದರಿಂದಲೇ ಇದು ಹೆಚ್ಚು ದಿನ ಬಾಳಿಕೆ ಬರಲು ಸಾಧ್ಯ. ಶಿವ ಸ್ಥಾವರಮಠ