Advertisement
ಕಳೆದ ವರ್ಷಕ್ಕೆ ಹೋಲಿಸಿದರೆ ಅಡಿಕೆ ಬೆಲೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಆದರೆ ಬೆಲೆ ಏರಿಕೆಯ ನಿರೀಕ್ಷೆಯಲ್ಲಿ ಅಡಿಕೆಯನ್ನು ಮಾರಾಟಕ್ಕೆ ಬಿಡದೆ ತೆಗೆದಿರಿಸಿಕೊಂಡಿದ್ದ ಬೆಳೆಗಾರರಿಗೆ ಈಗ ಒಂದೆರಡು ರೂ. ವ್ಯತ್ಯಾಸ ಕಾಣಿಸಿಕೊಂಡಿರುವುದು ನಿರೀಕ್ಷೆ ಮೂಡಿಸಿದೆ.
ಕಾಳುಮೆಣಸು ಧಾರಣೆಯಲ್ಲಿ ಈ ವಾರ ಅದೇ 320 ರೂ. ದರ ಮುಂದುವರಿದಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಕಾಳುಮೆಣಸು ಒಂದಷ್ಟು ಬೇಡಿಕೆ ಪಡೆದುಕೊಂಡಿದೆ. ಕೆಲ ಸಮಯಗಳ ಧಾರಣೆಯನ್ನೇ ಗಮನಿಸಿದರೆ, ಕಾಳುಮೆಣಸು ದೊಡ್ಡ ಮಟ್ಟಿನ ಧಾರಣೆ ಪಡೆದುಕೊಳ್ಳದೇ ಇರುವುದನ್ನು ಗಮನಿಸಬಹುದು. ಕಳೆದ ಎರಡು ವರ್ಷಗಳಿಂದ ಇಳಿಕೆಯ ಧಾರಣೆ ಮುಂದುವರಿದಿದೆ.
Related Articles
ರಬ್ಬರ್‌ನ ಬೆಲೆ ಚೇತೋಹಾರಿ ಏರಿಕೆಯನ್ನು ಕಂಡು ಬೆಳೆಗಾರರಲ್ಲಿ ಖುಷಿಯನ್ನು ತಂದಿತ್ತು. ರಬ್ಬರ್ ಬೆಲೆ ವರ್ಷಗಳ ಬಳಿಕ 150 ರೂ.ಗೆ ತಲುಪಿತ್ತು. ಹಿಂದಿನ ವಾರ 141.5 ರೂ.ಗೆ ಖರೀದಿಯಾಗಿದ್ದ ರಬ್ಬರ್ ಕಳೆದ ವಾರ 10 ರೂ. ಏರಿಕೆಗೊಂಡು 151 ರೂ.ಗೆ ಖರೀದಿ ನಡೆಸಿತ್ತು. ಅನಂತರ 2 ರೂ. ಇಳಿಕೆ ಕಂಡಿತ್ತು. ಅನಂತರ 146.5 ರೂ.ಗೆ ಖರೀದಿಯಾಗಿತ್ತು. ಈ ವಾರ 145 ರೂ.ಗೆ ಇಳಿಕೆ ಕಂಡಿದೆ. ಆರ್‌ಎಸ್‌ಎಸ್4 ದರ್ಜೆ 145 ರೂ., ಆರ್‌ಎಸ್‌ಎಸ್5 ದರ್ಜೆ 139 ರೂ., ಲಾಟ್ 126 ರೂ., ಸಾðಪ್ 1 ದರ್ಜೆ 86 ರೂ. ಹಾಗೂ ಸಾಪ್ 2 ದರ್ಜೆ 78 ರೂ.ನಲ್ಲಿ ಖರೀದಿ ನಡೆಸಿವೆ.
Advertisement
ರಾಜೇಶ್ ಪಟ್ಟೆ