Advertisement
ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಮಸೂದೆಯ ಮೇಲೆ ನಡೆದ ಚರ್ಚೆಗಳಿಗೆ ಉತ್ತರಿಸಿದ ಸಚಿವರು, ನಾವಿಂದು ಬಜೆಟ್ ಗಾತ್ರ ಹೆಚ್ಚಿಸಿದ್ದೇವೆ ಎಂದರೆ ಅದಕ್ಕೆ ಜಿಎಸ್‌ಟಿ ಕೊಡುಗೆ ಅಪಾರವಿದೆ. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿಗಳಾದ ನರಸಿಂಹ ರಾವ್, ಮನಮೋಹನ್‌ಸಿಂಗ್, ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸ್ಮರಿಸಬೇಕು. ಆರಂಭದಲ್ಲಿ ತಟಸ್ಥರಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರೂ ಜಿಎಸ್‌ಟಿಯನ್ನು ಒಪ್ಪಿಕೊಂಡು, ಅನೇಕ ಅಗತ್ಯ ಬದಲಾವಣೆಗಳನ್ನು ತಂದಿದ್ದಾರೆ ಎಂದು ಶ್ಲಾಸಿದರು.
ಹಲವು ವ್ಯಾಪಾರ ಮತ್ತು ವ್ಯಾಪಾರಿಗಳು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗುಳಿದಿದ್ದಾರೆ. ಅಡಿಕೆ, ಹೆಸರು, ಸಿಮೆಂಟ್, ಕ್ರಷರ್, ತ್ಯಾಜ್ಯ ವಸ್ತು (ಸಾðéಪ್)ಗಳನ್ನು ಜಿಎಸ್‌ಟಿ ಅಧೀನದಲ್ಲಿ ತರಬೇಕೆಂಬ ಸಲಹೆಗಳನ್ನು ಕೊಟ್ಟಿದ್ದೀರಿ. ಈ ಬಗ್ಗೆ ಅಧಿಕಾರಿಗಳ ಹಂತದಲ್ಲಿ ಗಂಭೀರವಾಗಿ ಚರ್ಚಿಸಿ, ಜಿಎಸ್‌ಟಿ ಮಂಡಳಿ ಸಭೆ ಮುಂದೆ ಮಂಡಿಸುತ್ತೇವೆ. ಇಷ್ಟೇ ಅಲ್ಲದೆ ತೆರಿಗೆ ವಂಚನೆ ಪ್ರಕರಣಗಳಲ್ಲಿ ಆರೋಪ ಸಾಬೀತುಪಡಿಸುವ ಹೊಣೆಯನ್ನು ಅಧಿಕಾರಿಗಳಿಗೇ ಕೊಡಲಾಗಿದೆ. ಇದಕ್ಕೆ ಕಾಯ್ದೆಯಲ್ಲಿ ತಿದ್ದುಪಡಿ ತಂದು ಆರೋಪ ಸುಳ್ಳೆಂದು ಸಾಬೀತು ಮಾಡುವ ಹೊಣೆಯನ್ನು ಆರೋಪಿಯೇ ಹೊರಬೇಕೆಂದೂ ಶಿಫಾರಸು ಮಾಡುತ್ತೇವೆ ಎಂದರು.
Related Articles
Advertisement
ನೋಂದಣಿ ಕಡ್ಡಾಯ ಮಾಡಿ: ಬೊಮ್ಮಾಯಿಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಸಂಕೀರ್ಣವಾಗಿದ್ದ ತೆರಿಗೆ ಪದ್ಧತಿಯನ್ನು ಸರಳಗೊಳಿಸುವತ್ತ ಕೇಂದ್ರ ಸರಕಾರ ಹೆಜ್ಜೆ ಇಟ್ಟಿದೆ. ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದಿದ್ದೀರಿ. ಇಷ್ಟು ದಿನ ಜಿಎಸ್‌ಟಿ ವ್ಯಾಪ್ತಿಯಲ್ಲಿ ಇಲ್ಲದ ವಸ್ತುಗಳನ್ನು ಮಾರುತ್ತಿದ್ದವರು ಜಿಎಸ್‌ಟಿ ಅಧೀನದ ಪದಾರ್ಥಗಳನ್ನು ಮಾರಾಟ ಮಾಡಿದರೆ ಸರಕಾರಕ್ಕೆ ನಷ್ಟವಾಗಲಿದೆ. ಹೀಗಾಗಿ ಎಲ್ಲರಿಗೂ ಜಿಎಸ್‌ಟಿ ನೋಂದಣಿ ಕಡ್ಡಾಯಗೊಳಿಸಬೇಕು ಎಂದು ಒತ್ತಾಯಿಸಿದರು. 3 ವರ್ಷಗಳ ವಹಿವಾಟಿನ ಮಾಹಿತಿ ನೀಡಿ ತೆರಿಗೆ ಸಾಲ ಸಹಾಯಧನ (ಐಟಿಸಿ) ಪಡೆಯಲು ಅವಕಾಶ ಮಾಡಿಕೊಡುತ್ತಿದ್ದೀರಿ. ಆದರೆ 3 ವರ್ಷದ ವಹಿವಾಟು ದಾಖಲೆಗಳನ್ನು ಕಾಪಿಡುವುದು, ಪರಿಷ್ಕರಿಸದೆ ಇರುವುದು ಕಷ್ಟ. ಈ ಅವಧಿ ಕಡಿಮೆ ಮಾಡಬೇಕು. ಇಲ್ಲದಿದ್ದರೆ ಒಂದು ಕಂಪೆನಿ ಆರಂಭಿಸಿ ಐಟಿಸಿ ಪಡೆದವನು 3 ವರ್ಷಗಳಲ್ಲಿ ಅದನ್ನು ಮುಚ್ಚಿ ಇನ್ನೊಂದು ಕಂಪೆನಿ ಆರಂಭಿಸಿದರೆ ಅದಕ್ಕೂ ಐಟಿಸಿ ಕೊಡಬೇಕಾಗುತ್ತದೆ. ಇದರಿಂದ ಸರಕಾರಕ್ಕೆ ನಷ್ಟವಾಗಲಿದೆ ಎಂದು ಸಲಹೆ ನೀಡಿದರು.