ಅಡಿಕೆಯಿಂದ ಆಬಾಲವೃದ್ಧರಾಗಿ ಪ್ರಯೋಜನ ಪಡೆಯಬಹುದು ಎಂಬುದು ವೈದ್ಯಕೀಯ ಸಂಶೋಧನೆಯಿಂದ ತಿಳಿದುಬರುತ್ತಿದೆ. ಇದು ಬಹು ಆಯಾಮಗಳಲ್ಲಿ ಔಷಧವಾಗಿ ಬಳಕೆಯಾಗುತ್ತಿರುವುದು ನಿರೀಕ್ಷಿತ ಮಟ್ಟದಲ್ಲಿ ಜನ ಪ್ರಿಯಗೊಂಡಿಲ್ಲ.
Advertisement
ಅಡಿಕೆಯ ಉತ್ಪಾದನೆಯಲ್ಲಿ ಕರ್ನಾಟಕ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಜಿಲ್ಲಾವಾರು ದಾವಣಗೆರೆ ಪ್ರಥಮ, ಅನಂತರ ಕ್ರಮವಾಗಿ ಶಿವಮೊಗ್ಗ, ಚಿತ್ರದುರ್ಗ, ದ.ಕ., ಉ.ಕ., ಉಡುಪಿ ಮೊದಲಾದ 11 ಜಿಲ್ಲೆಗಳು ಅಡಿಕೆ ಉತ್ಪಾದನೆಯ ಪ್ರಮುಖ ಸ್ಥಳಗಳು. ಇದರಔಷಧೀಯ ಗುಣಗಳನ್ನು ಸಮರ್ಥವಾಗಿ ಬಳಸಿಕೊಂಡದ್ದೇ ಆದಲ್ಲಿ ಕರಾವಳಿ, ಮಲೆನಾಡು ಪ್ರದೇಶಗಳ ಆರ್ಥಿಕ ಬೆಳವಣಿಗೆಗೂ ಅಡಿಕೆ ಬೆಳೆ ಸಹಕಾರಿಯಾಗಬಲ್ಲದು.
ಮಕ್ಕಳ ಶಾರೀರಿಕ ಬೆಳವಣಿಗೆ, ಹಸಿವೆ ಹೆಚ್ಚಲು, ಶೀತ ಕೆಮ್ಮು ತಡೆಯಲು, ಮಧುಮೇಹ ನಿಯಂತ್ರಿಸಲು ಅಡಿಕೆಯ ದ್ರವ್ಯದಿಂದ ಸಾಧ್ಯವಿದೆ. ಮಧುಮೇಹಕ್ಕಿಂತ ಪೂರ್ವ ರೂಪದ ಹೆಸರು ಆಯುರ್ವೇದದಲ್ಲಿ ಸ್ಥೂಲ ಪ್ರಮೇಹ. ಇದು ಸಾಮಾನ್ಯವಾಗಿ 40+ ವಯಸ್ಸಿನಲ್ಲಿ ಇರುತ್ತದೆ ಮತ್ತು ಮೇಲ್ನೋಟಕ್ಕೆ ಗೊತ್ತಾಗುವುದಿಲ್ಲ, ಗೊತ್ತಾಗುವುದು ಆರೋಗ್ಯ ಸಮಸ್ಯೆ ಕಾಡಿದ ಬಳಿಕ ರಕ್ತ ಪರೀಕ್ಷೆ ಮಾಡಿಸಿದಾಗ ಮಾತ್ರ. ಮಧುಮೇಹ ಪೂರ್ವದಲ್ಲಿ ಇದನ್ನು ಚಿವುಟಿ ಹಾಕುವ ಸಾಮರ್ಥ್ಯವೂ ಅಡಿಕೆಯಿಂದ ಉತ್ಪಾದಿಸುವ ಔಷಧಿಗಳಿಗೆ ಸಾಧ್ಯವಿದೆ. ಹಲ್ಲಿನ ರಕ್ಷಣೆಗೆ ರಾಸಾಯನಿಕ ಅಂಶಗಳುಳ್ಳ ವಿವಿಧ ಬಗೆಯ ಉತ್ಪನ್ನಗಳನ್ನು ಬಳಸುವ ಬದಲು ಅಡಿಕೆಯ ಅಂಶ ಸೇರಿದ ಹಲ್ಲುಪುಡಿಯನ್ನು ಬಳಸಬಹುದು. ಕೊಲೆಸ್ಟರಾಲ್ ನಿಯಂತ್ರಣಕ್ಕೂ ಅಡಿಕೆ ಸಹಕಾರಿ.
Related Articles
ಮೂಲ ಆಯುರ್ವೇದ ಶಾಸ್ತ್ರದ “ಭೈಷಜ್ಯರತ್ನಾವಲೀ’ ಗ್ರಂಥದಲ್ಲಿ
ಪೂಗಖಂಡ ಮತ್ತು ದಶನಸಂಸ್ಕಾರ ಚೂರ್ಣವನ್ನು ಉಲ್ಲೇಖೀಸಲಾ
ಗಿದೆ. ಪೂಗ ಅಂದರೆ ಸಂಸ್ಕೃತದಲ್ಲಿ ಅಡಿಕೆ. ಪೂಗಖಂಡ ತಯಾರಿಕೆ
ವಿಧಾನ ಹೀಗಿದೆ: ಹಸಿಅಡಿಕೆಯನ್ನು ಹೋಳು ಮಾಡಿ ಹಾಲಿನಲ್ಲಿ ಮೂರು ಗಂಟೆ ಕುದಿಸಬೇಕು. ಅನಂತರ ಬಿಸಿನೀರಿನಲ್ಲಿ ತೊಳೆದು ಒಣಗಿಸಿ ಪೌಡರ್ ಮಾಡಬೇಕು. ಬಳಿಕ ಲೇಹವನ್ನು ತಯಾ ರಿಸುವುದು. ಇದುವೇ ಪೂಗಖಂಡ. ಇದು ಶಾಸ್ತ್ರದಲ್ಲಿ ಆಮ್ಲ ಪಿತ್ಥಕ್ಕೆ (ಅಸಿಡಿಟಿ) ಪರಿಹಾರವೆಂದು ತಿಳಿಸುವ ಜತೆ ವೃಶ್ಯಕ್ಕೂ (ವಾಜಿಕರ- ಲೈಂಗಿಕ ಪ್ರಚೋದಕ) ಉಪಯುಕ್ತ ಎಂದು ಹೇಳಲಾಗಿದೆ. ಆದರೆ ಇದು ಸಂಶೋಧನೆ, ಪ್ರಬಂಧ, ಗ್ರಂಥಸ್ಥ
ವಾಗಿದೆಯೆ ಹೊರತು ಸಮರ್ಪಕವಾಗಿ ಮಾರುಕಟ್ಟೆಯನ್ನು ಪ್ರವೇಶಿಸುವ ಹಂತಕ್ಕೆ ಬರಲಿಲ್ಲ. ದಶನಸಂಸ್ಕಾರ ಚೂರ್ಣ ತಯಾರಿಯಲ್ಲಿ ಹತ್ತು ದ್ರವ್ಯಗಳಲ್ಲಿ ಅಡಿಕೆಯೂ ಒಂದು. ಅಡಿಕೆಯನ್ನು ಮಣ್ಣಿನ ಪಾತ್ರೆಯಲ್ಲಿ ಸೀಲು ಮಾಡಿ ಅದರ ಕೆಳಗೆ ಗೋಮಯದ ಬೆಂಕಿಯಿಂದ ಸುಡಬೇಕು. ಮಣ್ಣಿನ ಪಾತ್ರೆಯಲ್ಲಿದ್ದ ಅಡಿಕೆ ಸುಟ್ಟು ಭಸ್ಮವಾಗುವುದು ಅದನ್ನು ನೋಡದವರಿಗೆ ಚಮತ್ಕಾರವೆನಿಸಬಹುದು.
Advertisement
ಅಡಿಕೆಯಿಂದ ಮಧುಮೇಹ ನಿಯಂತ್ರಣಗೊಂಡು ಈ ಮೂಲಕ ಹೃದಯ, ಮೂತ್ರಕೋಶದ (ಕಿಡ್ನಿ) ಮೇಲೆ ಆಗುವ ದುಷ್ಪರಿಣಾಮಗಳೂ ನಿಯಂತ್ರಣಕ್ಕೆ ಬರುತ್ತವೆ. ಆ್ಯಂಟಿಆಕ್ಸಿಡೆಂಟ್ (ಆ್ಯಂಟಿಏಜಿಂಗ್= ವೃದ್ಧಾಪ್ಯದ ತಡೆ), ಚರ್ಮದ ಸುಕ್ಕುಗಟ್ಟು ವಿಕೆಯ ನಿಯಂತ್ರಣ, ಅಲ್ಸರ್ (ಹೊಟ್ಟೆ ಹುಣ್ಣು) ಸಮಸ್ಯೆ ನಿವಾರಣ ಶಕ್ತಿಯನ್ನು ಹೊಂದಿರುವುದು ದೃಢಪಟ್ಟಿದೆ.
ವಿವಿಧ ಔಷಧಗಳುಉಡುಪಿ ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಮಕ್ಕಳ ಬೆಳವಣಿಗೆಗೆ, ಹಸಿವೆ ಹೆಚ್ಚಿಸಲು, ನೆಗಡಿ ನಿಯಂತ್ರಿಸಲು ಉಪಯುಕ್ತವಾದ ಪೂಗ ಸಿರಪ್ ತಯಾರಿಸುತ್ತಾರೆ. ಮಧುಮೇಹ, ಸ್ಥೂಲ ಪ್ರಮೇಹ ತಡೆಗೆ ಪೂಗ ಟ್ರಿಮ್ ಎಂಬ ಪೌಡರ್ ಉತ್ಪಾದಿಸುತ್ತಾರೆ. ಹಲ್ಲುಜ್ಜುವ
ಪೌಡರ್ ತಯಾರಿಸುತ್ತಾರೆ. ಮೊದಲೆರಡು ಔಷಧಗಳಲ್ಲಿ ಅಡಿಕೆ ಪ್ರಧಾನ ದ್ರವ್ಯವಾದರೆ, ಹಲ್ಲುಪುಡಿಯಲ್ಲಿ ಅಡಿಕೆ ಪೂರಕ ದ್ರವ್ಯ. ಮಣಿಪಾಲದ ಮುನಿಯಾಲು ಆಯುರ್ವೇದ ಆಸ್ಪತ್ರೆಯ ಫಾರ್ಮಸಿಯಲ್ಲಿ ಹಲ್ಲಿನ
ಪೌಡರ್ ಮುನಿಡೆಂಟ್, ಒಬೆಸಿಟಿ, ಕೊಲೆಸ್ಟರಲ್ ನಿಯಂತ್ರಿಸುವ ಹಬೋìಟ್ರಿಮ್ ಔಷಧದಲ್ಲಿ ಅಡಿಕೆಯನ್ನು ಪೂರಕ ದ್ರವ್ಯವಾಗಿ ಬಳಸುತ್ತಿದ್ದಾರೆ. ಮಂಡಗದ್ದೆಯ ಯುವಕ ನಿವೇದನ್ ಅಡಿಕೆಯ ಚಹಾ ಬ್ಯಾಗ್ (ಅರೇಕಾ ಟೀ) ಉತ್ಪಾದಿಸುತ್ತಿದ್ದಾರೆ. ನಾನು ಮುನಿಯಾಲು ಆಯುರ್ವೇದ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಕಲಿಯುವಾಗ ಜಾಮ್‌ನಗರ ಆಯುರ್ವೇದ ವಿ.ವಿ. ಮೂಲಕ ಪೂಗಖಂಡದ ವಿಶೇಷ ಸಂಶೋಧನೆ ನಡೆಸಿದೆ; ಅಲ್ಲಿಯೇ ಡಾಕ್ಟರೇಟ್ ಅಧ್ಯಯನ ನಡೆಸಿದೆ. ಆಗ ಉಡುಪಿ, ಪುತ್ತೂರಿನ ಅಡಿಕೆಯನ್ನು ಪ್ರಯೋಗಕ್ಕೆ ಒಡ್ಡಿದ್ದೆ. ಇದು ಉತ್ತಮ ಫಲಿತಾಂಶ ನೀಡಿದರೂ ಫಾರ್ಮಸಿ ಸಂಸ್ಥೆಗಳ ಮೂಲಕ ಜನಸಾಮಾನ್ಯರಿಗೆ ಇನ್ನೂ ದೊರಕಿಲ್ಲ.
– ಡಾ| ಪ್ರಮೋದ್ ಜಿ. ಬರಗಿ, ರಸಶಾಸ್ತ್ರ ವಿಭಾಗ ಮುಖ್ಯಸ್ಥರು,
ಎವಿಎಸ್ ಆಯುರ್ವೇದ ಕಾಲೇಜು, ವಿಜಯಪುರ – ಮಟಪಾಡಿ ಕುಮಾರಸ್ವಾಮಿ